ಗೋಕಾಕ: ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿದ್ದು, ಸಾಕಷ್ಟು ಯೋಜನೆಗಳನ್ನು ಮಹಿಳೆಯರ ಅಭ್ಯುದಯಕ್ಕಾಗಿ ರೂಪಿಸಿವೆ. ಸಮಗ್ರ ಅಭಿವೃದ್ದಿ ದೃಷ್ಟಿಕೋನದಿಂದ ಬಿಜೆಪಿಗೆ ಆಶೀರ್ವದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಮ್ ಯಡಿಯೂರಪ್ಪನವರ ಕೈ ಬಲಪಡಿಸಿ ಅವರಿಗೆ ಶಕ್ತಿ ತುಂಬುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಶನಿವಾರದಂದು ಇಲ್ಲಿನ ಹೊರವಲಯದ ಪ್ರಭಾ ಶುಗರ್ಸ್ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಅಭ್ಯರ್ಥಿ ಮಂಗಳಾ ಅಂಗಡಿ …
Read More »ರಜಾ ದಿನವೂ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲು ಡಿಕೆಶಿ ಮನವಿ
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ರಜಾದಿನವಾದ ಏ.13 ಮತ್ತು 14 ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ 8 ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ಥೆಗಳ 266 ವಾರ್ಡ್‌ಗಳಿಗೆ ನಿಗದಿಯಾಗಿರುವ ಚುನಾವಣೆಗೆ ಏ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ಸಲ್ಲಿಕೆಗೆ 8 ದಿನ ಕಾಲಾವಕಾಶ …
Read More »ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳ ವ್ಯರ್ಥ- ಇಬ್ಬರು ಆರೋಗ್ಯ ಸಿಬ್ಬಂದಿ ಅಮಾನತು
ಬೆಂಗಳೂರು: ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಯಲಹಂಕ ವಲಯದ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡದೆ ಟೆಸ್ಟಿಂಗ್ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದರು. ಅಲ್ಲದೆ ಹೆಚ್ಚು ಟೆಸ್ಟ್ ಮಾಡಿದಂತೆ ಲೆಕ್ಕ ನೀಡುತ್ತಿದ್ದರು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ದೃಶ್ಯಾವಳಿ ಗಮನಿಸಿದ ಆಧಾರದ ಮೇಲೆ ಇಬ್ಬರು ಸ್ವಾಬ್ ಕಲೆಕ್ಟರ್ ಗಳನ್ನು …
Read More »ಅನುಕಂಪದ ನೌಕರಿ ನಿಯಮ ತಿದ್ದುಪಡಿಗೆ ಅಧಿಸೂಚನೆ: ಏನಿದೆ ಹೊಸ ನಿಯಮದಲ್ಲಿ?
ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದವರು ಮೃತಪಟ್ಟರೆ, ಅನುಕಂಪದ ಆಧಾರದಲ್ಲಿ ಅವಲಂಬಿತರಿಗೆ ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಿದ್ದುಪಡಿ ನಿಯಮದ ಪ್ರಕಾರ, ಸರ್ಕಾರಿ ನೌಕರ ಮೃತಪಟ್ಟರೆ ಆತನ ಜೊತೆ ವಾಸವಿದ್ದ ವಿಧವಾ ಪತ್ನಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ನೇಮಕಾತಿಗೆ ಆಕೆಗೆ ಅರ್ಹತೆ ಇಲ್ಲದಿದ್ದರೆ ಅಥವಾ ನೇಮಕಾತಿ ಬಯಸದೇ ಇದ್ದರೆ …
Read More »ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು.
ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು. ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯತ್ನಾಳ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚನ್ನಮ್ಮನ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಕೇಸರಿ ತಿಲಕ ಹಚ್ಚಿಕೊಂಡು ಬಿಳಿ ಬಣ್ಣದ ಕುದುರೆ ಏರಿದ ಯತ್ನಾಳ, ‘ಜೈ …
Read More »ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ – ಡಿಕೆಶಿ
ಬೆಳಗಾವಿ: ಇದು ಪ್ರಜಾಪ್ರಭುತ್ವ, ರೈತ ಮುಖಂಡ ಇರಬಹುದು,ಕಾರ್ಮಿಕ ಮುಖಂಡ ಇರಬಹುದು, ರಾಜಕೀಯದವರು ನಾವೂ ಸಹ ಸರ್ಕಾರ ವಿರುದ್ಧವೇ ಪ್ರತಿಭಟನೆ ಮಾಡೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಿಬ್ಬಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅವರು ಮಾಡಿದ ತಪ್ಪು ಹೇಳುವುದು ನಮ್ಮ ಕೆಲಸ, ಅವರನ್ನು ಹೊಗಳಕ್ಕಾಗುತ್ತಾ(?) ಸಾರಿಗೆ ಸಿಬ್ಬಂದಿ ಹಕ್ಕು ಮೊಟಕು …
Read More »ಕೋವಿಡ್ ಹಗಲಲ್ಲಿ ಹರಡಲ್ಲ, ರಾತ್ರಿ ಮಾತ್ರ ಹರಡುತ್ತೆ ಎಂದ ವಿಜ್ಞಾನಿಯ ಫೋಟೋ ಕೊಡಿ : ಡಿಕೆಶಿ
ಬೆಳಗಾವಿ : ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಶನಿವಾರ ವ್ಯಂಗ್ಯವಾಡಿದ್ದಾರೆ. ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ರಾತ್ರಿ ಕರ್ಫ್ಯೂ ಇಂದ ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ. ಪತ್ರಕರ್ತರ …
Read More »ಏಪ್ರಿಲ್ 13ರಂದು ‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್
ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಏಪ್ರಿಲ್ 13ರಂದು ರಿಲೀಸ್ ಮಾಡುತ್ತಿದ್ದಾರೆ ಈ ಕುರಿತು ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಟೀಸರ್ ಅನ್ನು ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ …
Read More »ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು, ಏಪ್ರಿಲ್ 10: ಯಲಚೇನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಕೇಬಲ್ ನಾಳ(ಡಕ್ಟ್)ದಲ್ಲಿ 65 ವರ್ಷದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾರುತಿನಗರ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ನಾಗರಾಜ್ ಅವರು ಏಪ್ರಿಲ್ 4 ರಂದು ಕೇಬಲ್ ನಾಳದೊಳಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದರೂ ಈ ಘಟನೆ ಏಪ್ರಿಲ್ 9 ರಂದು ಬೆಳಕಿಗೆ ಬಂದಿದೆ. ಹೌಸ್‌ಕೀಪಿಂಗ್ ಸಿಬ್ಬಂದಿ ಶುಚಿಗೊಳಿಸುತ್ತಿರುವಾಗ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ ಬಳಿಕ ಬಂದು ಬಾಗಿಲು ತೆರೆದಾಗ …
Read More »118 ಬಿಎಂಟಿಸಿ ನೌಕರರು ವಜಾ – ಸೀನಿಯರ್ ನೌಕರರಿಗೆ ನಿವೃತ್ತಿ ಎಚ್ಚರಿಕೆ: ಮುಷ್ಕರ ನಿರತರಿಗೆ ಬಿಎಂಟಿಸಿ ಬಿಗ್ ಶಾಕ್
ಬೆಂಗಳೂರು; ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಮುಷ್ಕರ ಹತ್ತಿಕ್ಕಲು ಸರ್ವಪ್ರಯತ್ನ ನಡೆಸಿದೆ. ಮುಷ್ಕರದಲ್ಲಿ ಭಾಗವಹಿಸಿರುವ 118 ಸಾರಿಗೆ ಸಿಬ್ಬಂದಿಗಳನ್ನು ಬಿಎಂಟಿಸಿ ವಜಾ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಸೀನಿಯರ್ ನೌಕರರಿಗೆ ನಿವೃತ್ತಿ ನಿಡುವ ಎಚ್ಚರಿಕೆಯನ್ನು ನೀಡಿದೆ. 55 ವರ್ಷ ಮೇಲ್ಪಟ್ಟ ಬಿಎಂಟಿಸಿ ಸಿಬ್ಬಂದಿ ವೈದ್ಯಕೀಯ ಹಾಗೂ ದೇಹದಾರ್ಡ್ಯತೆ ಪ್ರಮಾಣ ಪತ್ರವನ್ನು ಏಪ್ರಿಲ್ …
Read More »
Laxmi News 24×7