Breaking News

ಜಿಲ್ಲೆ

ಪ್ರಯಾಣಿಕರ ಗಮನಕ್ಕೆ.. ನಾಳೆ ಇನ್ನಷ್ಟು ತೀವ್ರಗೊಳ್ಳಲಿದೆ ಸಾರಿಗೆ ಮುಷ್ಕರ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ನಾಳೆ ರಾಜ್ಯಾದ್ಯಂತ ಮುಷ್ಕರ ಇನ್ನಷ್ಟು ತೀವ್ರಗೊಳಿಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ ಸಾರಿಗೆ ಸಿಬ್ಬಂದಿಗಳ ಮುಷ್ಕರ ಹತ್ತಿಕ್ಕಲು ಯತ್ನಿಸುತ್ತಿದೆ. ಹಲವು ಸಂಘಟನೆಗಳ ಬಸ್ ಗಳ ಓಡಾಟ ನಡೆಸಿದೆ. ಮುಷ್ಕರದಲ್ಲಿ ಪಾಲ್ಗೊಂಡ ನೌಕರರನ್ನು ವರ್ಗಾವಣೆ ಮಾಡಿ, ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ದಬ್ಬಾಳಿಕೆ ಹೇರುತ್ತಿದೆ. ಸರ್ಕಾರದ …

Read More »

ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್..!?

ಬೆಂಗಳೂರು,ಏ.11- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಾಥಮಿಕ ಹಂತದಲ್ಲಿ 10 ದಿನಗಳ ಕಾಲ ಲಾಕ್‍ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿದೆ. ವಿಧಾನಸೌಧದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ 10 ದಿನ ಲಾಕ್‍ಡಾನ್ ಜಾರಿ ಮಾಡುವುದು ಸೂಕ್ತ. ಇದರ ಫಲಿತಾಂಶವನ್ನು …

Read More »

ಬೆಳಗಾವಿ ಉಪಚುನಾವಣೆ | ಸೇವೆಯೇ ಶ್ರೀರಕ್ಷೆ ಎಂದ ಸತೀಶ ಜಾರಕಿಹೊಳಿ

ಬೆಲೆ  ಏರಿಕೆ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಬೆಳಗಾವಿ ಉಪಚುನಾವಣೆಯ ಕಣ ಬದಲಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು, ಆತಂಕಗಳನ್ನು ಹಾಗೂ ಯಶಸ್ಸಿನ ನಿರೀಕ್ಷೆಗಳನ್ನು  ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. *ಅಭ್ಯರ್ಥಿಯಾಗಿ ಹೇಗೆ ಸಮರ್ಥಿಸಿಕೊಳ್ತೀರಿ? ಸಂಘಟನೆ ಮಾಡುವವರು, ಈ ಭಾಗದಲ್ಲಿ ಪರಿಚಯ ಇರುವವರು ಬೇಕಾಗಿತ್ತು. ಮುಂಚಿನಿಂದಲೂ ಕೆಲಸ ಮಾಡುವವರಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಶ್ರಮದ ಅಗತ್ಯವಿರುವುದಿಲ್ಲ ಎಂದು ಪಕ್ಷ ನನ್ನನ್ನು ಆಯ್ಕೆ ಮಾಡಿದೆ. *ಬೆಂಬಲಿಗರ ಪ್ರತಿಕ್ರಿಯೆ ಹೇಗಿದೆ? ಎರಡು …

Read More »

ತಟ್ಟೆ, ಲೋಟ ಬಡಿಯುವ ಮೂಲಕ ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಮುಷ್ಕರ ತೀವ್ರವಾಗಿದೆ. ಸರ್ಕಾರದ ಮನವಿ, ಬೆದರಿಕೆಗಳಿಗೆ ನೌಕರರು ಬಗ್ಗುತ್ತಿಲ್ಲ. ನಾಳೆ ತಟ್ಟೆ, ಲೋಟ ಬಡಿಯುವ ಮೂಲಕ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ಸಾರಿಗೆ ಇಲಾಖೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ತಹಶಿಲ್ದಾರ್ ಕಚೇರಿ ಮುಂದೆ ಚಳವಳಿ ನಡೆಸುತ್ತೇವೆ, ಚಳವಳಿ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ. ನಾಳೆ ಅಪರಾಹ್ನ 3 …

Read More »

ಮದ್ವೆಯಾಗಿ ಕೊಲ್ಹಾಪುರದಿಂದ ಬೆಳಗಾವಿಗೆ ಬಂದ್ರು – ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ ಶೀಲ ಶಂಕಿಸಿ ವಿಚ್ಛೇಧನ

ಮುಂಬೈ: ಪತ್ನಿಯರ ಶೀಲ ಶಂಕಿಸಿ ಇಬ್ಬರು ಸಹೋದರಿಯರನ್ನು ಅವರ ಪತಿಯಂದಿರು ಮನೆಯಿಂದ ಹೊರ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈ ಪತಿಯದಿರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನಲೆ: 2020ರಲ್ಲಿ ನವೆಂಬರ್‍ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಕರ್ನಾಟಕದ ಬೆಳಗಾವಿ ಒಂದೇ ಸಮುದಾಯದ ಯುವಕರನ್ನು ವಿವಾಹವಾದರು. ಮೊದಲ ರಾತ್ರಿಯಂದು ಸಮುದಾಯ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ …

Read More »

ಇಂದಿರಾನಗರದ ಗೂಂಡಾ ನಾನೇ’ ಎಂದು ದ್ರಾವಿಡ್‌ಗೆ ಸೆಡ್ಡು ಹೊಡೆದ ಖ್ಯಾತ ನಟಿ

ಸಿಲಿಕಾನ್ ಸಿಟಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕ್ರಿಕೆಟಿಗ ರಾಹುಲ್ ದ್ರಾವಿಡ್ ”ನಾನು ಇಂದಿರಾನಗರದ ಗೂಂಡಾ” ಎಂದು ಕಿರುಚಾಡಿ ಅಕ್ಕಪಕ್ಕದ ಕಾರುಗಳ ಗಾಜು ಪುಡಿ ಪುಡಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, ಇದು ಜಾಹೀರಾತು. ಕ್ರಿಕೆಟ್ ಜಗತ್ತಿನ ಜಂಟಲ್‌ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದೆಂದೂ ಈ ರೀತಿ ನೋಡಿರಲು ಸಾಧ್ಯವಿಲ್ಲ. ಆದರೆ, ಜಾಹೀರಾತಿಗಾಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ. ಇದೀಗ, ‘ನಾನು ಇಂದಿರಾನಗರದ ಗೂಂಡಾ’ ಎಂಬ ಡೈಲಾಗ್ …

Read More »

ಬೆಂಗಳೂರಲ್ಲಿ ನಕಲಿ ಕೋವಿಡ್ ಟೆಸ್ಟ್; ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು, ಏಪ್ರಿಲ್ 11; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ನಡುವೆಯೇ ಆರೋಗ್ಯ ಇಲಾಖೆ ಸಿಬ್ಭಂದಿಗಳ ನಿರ್ಲಕ್ಷ್ಯವೂ ಬೆಳಕಿಗೆ ಬಂದಿದೆ. ಕೋಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗರಾಜ್ ಮತ್ತು ಹಿರೇಮಠ ಸರ್ಕಾರಕ್ಕೆ ಲೆಕ್ಕ ತೋರಿಸಲು ನಕಲಿ ಕೋವಿಡ್ ಟೆಸ್ಟ್ ಮಾಡುತ್ತಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗರಾಜ್ ಮತ್ತು ಹಿರೇಮಠ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, …

Read More »

ಕರ್ನಾಟಕದಲ್ಲಿ ಹೊಸದಾಗಿ 6955 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ಹೊಸದಾಗಿ 6955 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಆಸ್ಪತ್ರೆಯಿಂದ ಇಂದು 3350 ಮಂದಿ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 980519 ಮಂದಿ ಡಿಸ್ಚಾರ್ಜ್ ಆಗಿರುವುದುಆಗಿ ತಿಳಿಸಿದ್ದಾರೆ. ಒಂದೇ ದಿನ 36 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 12,849 ಮಂದಿ ಮೃತಪಟ್ಟಿದ್ದಾರೆ. 61653 ಸಕ್ರಿಯ ಪ್ರಕರಣಗಳಿವೆ, ಒಟ್ಟು 1055040 ಪ್ರಕರಣಗಳಿವೆ. 405 ಮಂದಿ ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಾಗಲಕೋಟೆ 44, ಬಳ್ಳಾರಿ 62, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ …

Read More »

ನಮ್ಮನ್ನು ಅಧಿಕಾರಕ್ಕೆ ತಂದರೆ ಒಂದೇ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಮನೆ: ಕುಮಾರಸ್ವಾಮಿ

ಬೀದರ್, ಎ.10: ಯಾರು ರೈತರ ಪರವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೋ ಅಂತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ತಮ್ಮೆಲ್ಲರ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ನನಗೆ ಶಕ್ತಿ ಕೊಟ್ಟಂತೆಯಾಗುತ್ತದೆ. ಅದು ಮುಂದಿನ ಚುನಾವಣೆಯಲ್ಲಿ ನಮಗೆ ಸಹಾಯಕವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿರವರ ಪರವಾಗಿ ಕ್ಷೇತ್ರದ ಕೋಟಮಾಳ, ಹುಲಸೂರು, ಬೇಲೂರ, ನಾರಾಯಣಪುರ, …

Read More »

ಕಾನೂನು ಸುವ್ಯವಸ್ಥೆಗೆ 10 ಸ್ಕಾರ್ಪಿಯೊ

ಕಲಬುರ್ಗಿ: ದೆಹಲಿಯ ನಿರ್ಭಯಾ ಘಟನೆ ಬಳಿಕ ನಗರ ಪ್ರದೇಶದಲ್ಲಿ ಮಹಿಳಾ ಸುರಕ್ಷತೆ ಸೇರಿದಂತೆ ಸಂಭವ ನೀಯ ಅವಘಡಗಳನ್ನು ತಡೆಯಲು ಕಲಬುರ್ಗಿ ಕಮಿಷನರೇಟ್‌ಗೆ ಗೃಹ ಇಲಾಖೆ 10 ಸುಸಜ್ಜಿತ ಸ್ಕಾರ್ಪಿಯೊ ಜೀಪ್‌ಗಳನ್ನು ಮಂಜೂರು ಮಾಡಿದೆ. ಕೆಲವೇ ದಿನಗಳಲ್ಲಿ ಅವು ಸೇವೆಗೆ ಸೇರ್ಪಡೆಗೊಳ್ಳಲಿವೆ. ಈ ವಾಹನಕ್ಕೆ ಜಿಪಿಎಸ್‌ ವ್ಯವಸ್ಥೆ ಇರಲಿದ್ದು, 112 ಸಂಖ್ಯೆಗೆ ಯಾರಾದರೂ ಕರೆ ಮಾಡಿದರೆ ಅದರ ವಿವರಗಳು ಬೆಂಗಳೂರಿನ ಕಂಟ್ರೋಲ್‌ ರೂಮ್‌ಗೆ ಹೋಗಲಿದೆ. ಅಲ್ಲಿಂದ ಸಮೀಪದ ವಾಹನದಲ್ಲಿರುವ ಕಂಪ್ಯೂಟರ್‌ ಪರದೆಯ …

Read More »