ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದೆ. ಅದರಲ್ಲೂ ಸ್ವತಹ ಸಿಎಂ ಯಡಿಯೂರಪ್ಪ ವಿರುದ್ಧವೇ ಅವರ ಸಚಿವ ಸಂಪುಟದ ಸಚಿವ ಸಿ.ಪಿ.ಯೋಗೇಶ್ವರ್ ಸಮರ ಸಾರಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪ ಬದಲಾವಣೆಯನ್ನು ವಿರೋಧಿಸಿ, ಅವರ ಬೆಂಬಲಕ್ಕೆ 18 ಬಿಜೆಪಿ ಶಾಸಕರು ನಿಂತಿದ್ದು, ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು, ಸಚಿವ ಸ್ಥಾನದಿಂದ ಕಿತ್ತೊಗೆಯಿರಿ, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಚಿವ ಸಂಪುಟದಿಂದ ಸಚಿವ ಸಿ.ಪಿ.ಯೋಗೇಶ್ವರ್ ಔಟ್ ಆಗ್ತಾ …
Read More »ಪ್ರಾಣದ ಹಂಗು ತೊರೆದು ಸೇವೆ: ನರ್ಸ್ ಕಾರ್ಯಕ್ಕೆ ಸಿಎಂ ಅಭಿನಂದನೆ
ಬೆಂಗಳೂರು: ಕೋವಿಡ್ ಸಂಕಷ್ಟ ಸಮಯದಲ್ಲಿ ನರ್ಸ್ಗಳು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾವ ಶಬ್ಧದಿಂದ ಅಭಿನಂದಿಸಿದರೂ ಕಡಿಮೆಯೇ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನರ್ಸ್‌ಗಳ ಜತೆ ಮಾತುಕತೆ ನಡೆಸಿದ್ದೇನೆ. ಅವರು ತಮ್ಮ ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವುಗಳನ್ನು ಪರಿಹರಿಸುತ್ತೇವೆ. ಕೆಲವು ಸಲಹೆಗಳನ್ನೂ ಕೊಟ್ಟಿದ್ದಾರೆ. ಅವುಗಳನ್ನು ಪರಿಗಣಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಲಾಕ್ ಡೌನ್ ಕುರಿತು ಜೂನ್ ಮೇ 4 ಅಥವಾ 5ರ ಬಳಿಕ ಚರ್ಚೆ …
Read More »‘ಎಲ್ಲವನ್ನೂ ಸಿಎಂ ಮಾಡೋದಾದ್ರೆ ಬೆಳಗಾವಿಯ ನಾಲ್ವರು ಸಚಿವರು ಯಾಕೆ?’ – ಸತೀಶ್ ಜಾರಕಿಹೊಳಿ
ಬೆಳಗಾವಿ, ಮೇ 31: ”ಎಲ್ಲವನ್ನೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕಾಗಿ ಇದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ಮಂಗಳ ಬಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಜಿಲ್ಲೆಯ ಸಚಿವರುಗಳ ಬಗ್ಗೆ ಲೇವಡಿ ಮಾಡಿರುವ ಸತೀಶ್ ಜಾರಕಿಹೊಳಿ, ”ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದಾರೆ. ಎಲ್ಲವೂ ಮುಖ್ಯಮಂತ್ರಿಗಳೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕೆ …
Read More »ಸದ್ದಿಲ್ಲದ ಹಸೆಮಣೆ ಏರಿದ ಜನಪ್ರಿಯ ನಟಿ ಪ್ರಣಿತಾ ಸುಭಾಷ್
ಬೆಂಗಳೂರು :ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರಣಿತಾ ಸುಭಾಷ್ ಲಾಕ್ ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್‌ನಲ್ಲಿ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಹರಿದಾಡುತ್ತಿತ್ತು . ಆದರೆ ಆ ಬಗ್ಗೆ ಪ್ರಣಿತಾ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ . ಈಗ ಪ್ರಣಿತಾ ಮದುವೆಯ ಫೋಟೋಗಳ ಬಹಿರಂಗ ಆಗಿವೆ . ಆ ಮೂಲಕ ಅವರು ಸಪ್ತಪದಿ ತುಳಿದಿರುವುದಕ್ಕೆ ಸೂಕ್ತ ಸಾಕ್ಷಿ ಸಿಕ್ಕಂತಾಗಿದೆ . ಮೊನ್ನೆಯಷ್ಟೇ …
Read More »ಸೆಖೆಯಾಗ್ತಿದೆ ಎಂದು ಮನೆಯ ಹೊರಗೆ ಹೋದವ ಶವವಾಗಿ ಪತ್ತೆ! ಬೆಚ್ಚಿಬೀಳಿಸುತ್ತೆ ನಿನ್ನೆ ರಾತ್ರಿಯ ಘಟನೆ
ರಾಯಚೂರು: ಮದುವೆ ಮಾಡಿಕೊಳ್ಳಲೆಂದು ಆತ ಹೆಣ್ಣು ಹುಡುಕುತಿದ್ದ. ಎರಡು ದಿನದ ಹಿಂದೆ ಮಾರಮ್ಮ ದೇವಿಗೆ ಪೂಜೆಯನ್ನೂ ಮಾಡಿಸಿದ್ದ. ಯಾವುದೇ ಅಡ್ಡಿ-ಆತಂಕವಿಲ್ಲದೆ ಮಗನಿಗೆ ಒಳ್ಳೆಯ ಜೀವನ ಸಿಗಲೆಂದು ಆತನ ತಾಯಿಯೂ ದೇವರಲ್ಲಿ ಬೇಡಿಕೊಂಡಿದ್ದರು. ಆದರೆ, ನಿನ್ನೆ ರಾತ್ರಿ ಆ ಯುವಕ ದುರಂತ ಅಂತ್ಯಕಂಡಿದ್ದಾನೆ. ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದ ತಾಯಪ್ಪ(26) ಮೃತ ದುರ್ದೈವಿ. ನಿನ್ನೆ ರಾತ್ರಿ ವಿದ್ಯುತ್ ಇಲ್ಲದ ಕಾರಣಕ್ಕೆ ಸೆಖೆಯೆಂದು ಮನೆಯ ಹೊರಗೆ ಮಲಗುವುದಾಗಿ ಹೋಗಿದ್ದ. ದೇವಸ್ಥಾನದ ಬಳಿ ಕೆಲ …
Read More »ಶಾಸಕ ಪಿ.ರಾಜೀವ್ ವಿರುದ್ಧ ಸಂವಸುದ್ದಿ ಗ್ರಾಮಸ್ಥರು ಆಕ್ರೋಶ: ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 70 ಮಂದಿ ಸಾವು
ಬೆಳಗಾವಿ: ಮಹಾಮಾರಿ ಕೊರೊನಾ ಎಲ್ಲೆಡೆ ತನ್ನ ಕಬಂದ ಬಾಹುಗಳನ್ನು ಚಾಚುತ್ತ ಸಾಗಿದೆ. ಕೊರೊನಾಗೆ ಬಲಿಯಾಗುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಒಂದು ಕಡೆ ಕೊರೊನಾ ನರಕ ತೋರಿಸುತಿದ್ರೆ ಮತ್ತೊಂದೆಡೆ ಇತರ ಖಾಯಿಲೆಗಳಿಗೆ ಬಲಿಯಾಗುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನ ಬಲಿಯಾಗಿದ್ದಾರೆ. 80 ಜನರ ಪೈಕಿ 10 ಜನರು ಕೊರೊನಾ ಸೋಂಕಿಗೆ ಬಲಿಯಾದ್ರೆ ಉಳಿದ …
Read More »ಸರ್ಕಾರಿ ಶಿಕ್ಷಕರ ವೇತನ ಕಡಿತಗೊಳಿಸಿ ಖಾಸಗಿ ಶಿಕ್ಷಕರಿಗೆ ಪ್ಯಾಕೇಜ್
ಬೆಂಗಳೂರು: ರಾಜ್ಯದ ಅನುದಾನರಹಿತ ಶಾಲಾ- ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ರಾಜ್ಯ ಸರ್ಕಾರ ಚಿಂತಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರ ಕೆಲವು ದಿನಗಳ ವೇತನ ಕಡಿತಗೊಳಿಸಿ ಆ ಹಣದಿಂದ ಪ್ಯಾಕೇಜ್ ನೀಡುವ ಬಗ್ಗೆ ಸಚಿವ ಎಸ್.ಸುರೇಶ್ ಕುಮಾರ್ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಅವರು, ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುವ ವಿವಿಧ …
Read More »B.I.M.S.ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಬೆಳಗಾವಿ– ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಭೇಟಿ ದಿನಾಂಕ ನಿಗದಿಯಾಗಿದ್ದು, ಬೆಳಗಾವಿಯಲ್ಲಿ ಅಧಿಕಾರಿಗಳ ಸರಣಿ ಸಭೆ ಆರಂಭವಾಗಿದೆ. ಕೊರೋನಾ ನಿಯಂತ್ರಣದಲ್ಲಿ ಆಗುತ್ತಿರುವ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಯಾರ ನಿಯಂತ್ರಣವೂ ಇಲ್ಲದೆ ಕೊರೋನಾ ಅವ್ಯವಸ್ಥೆ ತೀವ್ರವಾಗಿದೆ. ಯಾರಿಗೆ ಬೆಡ್ ಸಿಗುತ್ತದೆ, ಎಷ್ಟು ಜನ ಸಾಯುತ್ತಿದ್ದಾರೆ, ಯಾರಿಗೆ ಚಿಕಿತ್ಸೆ ಸಿಗುತ್ತಿದೆ ಯಾವುದೂ ಜನಸಾಮಾನ್ಯರಿಗಿರಲಿ, ಮಂತ್ರಿಗಳಿಗೂ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಮಂತ್ರಿಗಳು, ಶಾಸಕರು ನಿರಂತರ …
Read More »ಬೆಳೆದ ಬಾಳೆಗೆ ಸಿಗದ ಬೆಲೆ: ಉಚಿತವಾಗಿ ಹಂಚಿದ ಎಂ.ಬಿ.ಪಾಟೀಲ ಅಭಿಮಾನಿ ರೈತ
ವಿಜಯಪುರ: ಕೋವಿಡ್ ಸಂಕಷ್ಟದ ಕಾರಣಕ್ಕೆ ತಾವು ಬೆಳೆದ ಬಾಳೆಗೆ ಮಾರುಕಟ್ಟೆ ಸಿಗದಿದ್ದಾಗ ತಿಪ್ಪೆಗೆ ಸುರಿಯದೇ, ಹಣ್ಣನ್ನು ಹಳ್ಳಿಗಳಲ್ಲಿ ಹಂಚುವ ಮೂಲಕ ತಮ್ಮ ಕ್ಷೇತ್ರದ ಶಾಸಕರ ಸೇವೆಗೆ ಕೃತಜ್ಞತೆ ಸಲ್ಲಿಸಿ ರೈತರೊಬ್ಬರು ಮಾದರಿ ಆಗಿದ್ದಾರೆ. ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ಕ್ಷೇತ್ರದ ಶಾಸಕರಾದ ಎಂ.ಬಿ.ಪಾಟೀಲ ಅವರ ಅಪ್ಪಟ ಅಭಿಮಾನಿ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಾವು ಲಕ್ಷಾಂತರ ರೂ. ಬಂಡವಾಳ ಹಾಕಿ, ಶ್ರಮ ವಹಿಸಿ 3 ಎಕರೆ …
Read More »ವರ್ಷದ ಹಿಂದೆ ಮಗು ಕದ್ದಿದ್ದ ಮನೋವೈದ್ಯೆಯ ಬಂಧನ
ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 1 ವರ್ಷಕ್ಕೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್‌ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಸದ್ಯ ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ …
Read More »
Laxmi News 24×7