ಬಾಗಲಕೋಟೆ: ಇಷ್ಟು ದಿನ ಕೊರೊನಾ ತನ್ನ ಅಟ್ಟಹಾಸ ಮೆರೆದಿತ್ತು. ಸಾಕಷ್ಟು ಸಾವು ಸಂಭವಿಸಿ ಅದೆಷ್ಟೋ ಜನರ ಬದುಕಲ್ಲಿ ನೋವನ್ನೇ ಉಳಿಸಿ ಹೋಗಿದೆ. ಇದೀಗ ಆರಂಭದ ಮಳೆಯೇ ಪ್ರವಾಹ ಸೃಷ್ಟಿಸಿ ಮತ್ತೆ ಸಾವನ್ನ ಹೆಚ್ಚು ಮಾಡಿದೆ. ಹೌದು ಜಿಲ್ಲೆಯ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಲಕ್ಷ್ಮೀ ಎಂಬಾಕೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಜೋರು ಮಳೆಯ ನಡುವೆಯೇ ಹೇಗೋ ಕಷ್ಟಪಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆ ಬಳಿಕ …
Read More »ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಿ : ಉಪ್ಪಾರ ನೌಕರರ ಸಂಘದ ಒತ್ತಾಯ
ಚಿತ್ರದುರ್ಗ : ತಾಲೂಕಿನ ಭರಮಸಾಗರ ವ್ಯಾಪ್ತಿಯ ಇಸಾಮುದ್ರಾ ಗ್ರಾಮದ ನಮ್ಮ ಉಪ್ಪಾರ ಸಮುದಾಯದ ೧೩ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಉಪ್ಪಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ ಒತ್ತಾಯಿಸಿದರು. ಭಾನುವಾರ ಚಿತ್ರದುರ್ಗ ತಾಲೂಕಿನ ಭರಮಸಾಗರ ವ್ಯಾಪ್ತಿಯ ಇಸಾಮುದ್ರಾ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯನ್ನು ಕಳೆದಕೊಂಡ ಪೋಷಕರಿಗೆ ವೈಯಕ್ತಿಕ ಧನಸಹಾಯ ನೀಡಿ ಸಾಂತ್ವನ ಹೇಳಿ ಮಾತನಾಡಿದ ಅವರು ನಮ್ಮ …
Read More »ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೆ.ಪಿ ನಡ್ಡಾ
ಬೆಂಗಳೂರು/ಗೋವಾ: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ರಾಜ್ಯದ ಬಿಜೆಪಿಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಡ್ಡಾ, ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಯಡ್ಡಿಯವರ ಬೆನ್ನು ತಟ್ಟಿದ್ದಾರೆ. ಜುಲೈ 25 ಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಲ್ಲದೇ ಬೆಳಗಾವಿಯಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂದು ಸಂಜೆ ಹೈಕಮಾಂಡ್‌ನಿಂದ …
Read More »ನೊಂದ ಕುಟುಂಬಗಳಿಗೆ ಆಸರೆಯಾಗೋಣ: ರಾಹುಲ್ ಜಾರಕಿಹೊಳಿ ನಿರ್ಗತಿಕರ ಸಾತ್ವಾಂನ ಹೇಳಿದ ಯುವ ನಾಯಕ ರಾಹುಲ್
ಗೋಕಾಕ: ರಣ ಭೀಕರ ಮಳೆಗೆ ಘಟಪ್ರಭಾ ನದಿಯ ತೀರದ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭೇಟಿ ನೀಡಿ, ರವಿವಾರ ಪರಿಸ್ಥಿತಿ ಅವಲೋಕಿಸಿದರು. ಅರಭಾವಿ ವಿಧಾನ ಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಡಿಬಟ್ಟಿ, ಚಿಗದೊಳ್ಳಿ, ಜಾಕ್ವೆಲ್ ಗೌಡನ್ ಕ್ರಾಸ್ ಮೆಳವಂಕಿ, ಕಲಾರ್ಕೊಪ್ಪ, ಹಡಗಿನಾಳ, ತಳಕಟ್ನಾಳ , ಉದಗಟ್ಟಿ ಗ್ರಾಮದ ಗಂಜಿ ಕೇಂದ್ರಗಳಲ್ಲಿರುವ ನಿರ್ಗತಿಕರನ್ನು ಭೇಟಿ ಮಾಡಿ, …
Read More »ಸಿಎಂ ಬಿಎಸ್ವೈ ಕಡೆಯಿಂದ ಕೊಡಲಾದ ಲಕೋಟೆಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..
ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಮೀಜಿಗಳನೇಕರು ಭೇಟಿಯಾಗಿ, ಬೆಂಬಲ ಸೂಚಿಸಿದ್ದ ಸಂದರ್ಭದ ದೃಶ್ಯಾವಳಿಯೊಂದು ಬಹಳಷ್ಟು ಕಡೆ ಹರಿದಾಡಿತ್ತು. ಸಿಎಂ ಭೇಟಿ ವೇಳೆ ಎಲ್ಲ ಸ್ವಾಮೀಜಿಗಳಿಗೂ ಒಂದು ಲಕೋಟೆ ಕೊಡಲಾಗಿದ್ದು, ಆ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರಿಂದ ಆ ವಿಡಿಯೋ ಸಾಕಷ್ಟು ಹಂಚಿಕೆ ಆಗಿತ್ತು. ಇದೀಗ ಆ ಕುರಿತು ಸ್ವಾಮೀಜಿಯೊಬ್ಬರು ಮಾತನಾಡಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧೀಶರ ಸಮ್ಮೇಳನದಲ್ಲಿ ದಿಂಗಾಲೇಶ್ವರ …
Read More »ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಸಚಿವ ಬಸವರಾಜ ಬೊಮ್ಮಾಯಿ
ಹಾವೇರಿ: ‘ಮನೆ ಕಳೆದು ಕೊಂಡವರಿಗೆ ತಕ್ಷಣ ₹10 ಸಾವಿರ ಪರಿಹಾರ ಪಾವತಿ ನೀಡಬೇಕು. ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯ ಕುರಿತು ಸಮೀಕ್ಷೆ ನಡೆಸಲಾಗುವುದು ಹಾಗೂ ತೊಂದರೆಗೊಳದವರಿಗೆ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರವಾಹ ಹಾಗೂ ಅತಿವೃಷ್ಟಿ ಪರಿಶೀಲನೆಗಾಗಿ ಶನಿವಾರ ಶಿಗ್ಗಾವಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ದೊಡ್ಡ ಪ್ರಮಾಣದ ಮಳೆ ಕಾರಣ ಜಿಲ್ಲೆಯ …
Read More »ಬೆಂಗಳೂರು; ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರ ದುರ್ಮರಣ
ಬೆಂಗಳೂರು: ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಭದ್ರಪ್ಪ ಲೇಔಟ್ನಲ್ಲಿ ಸಂಭವಿಸಿದೆ. ಓರ್ವ ಪುರುಷ(30) ಮತ್ತು ಓರ್ವ ಮಹಿಳೆ(40) ಮೃತ ಪಟ್ಟಿದ್ದಾರೆ. ರೈಲು ಬರುವುದು ಗಮನಿಸದೆ ಹಳಿ ದಾಟಲು ಯತ್ನಿಸಿದ್ದು ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಬೈಯಪ್ಪನ ಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್ನಲ್ಲಿ ಘಟನೆ ನಡೆದಿದೆ. ಸದ್ಯ ಎರಡು ಮೃತದೇಹಗಳನ್ನು ಬೋರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು ಪೊಲೀಸರು …
Read More »ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜಕೀಯ ಅನಿಶ್ಚಿತತೆ ಇದೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಆಡಳಿತ, ಜನರಿಗೆ ಕೊಟ್ಟ ಕೊಡುಗೆ ಎಂದರು. ಇನ್ನು ಬಿಎಸ್ವೈಗೆ ಹೈಕಮಾಂಡ್‌ನಿಂದ ಸಂದೇಶ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇವತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಊರಲ್ಲಿಲ್ಲ ಅಂತ ಪರೋಕ್ಷವಾಗಿ ಇಂದು ಸಿಎಂ ಬದಲಾಗಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದರು. ಕೊವಿಡ್ ಸ್ಥಿತಿ ಬಗ್ಗೆ ನಮ್ಮ ತಂಡ ಅಧ್ಯಯನ ವರದಿ ನೀಡಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಕೂಡ ಮಾಡಿಲ್ಲ. ಕೊವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾವು ಸಮರ್ಥವಾಗಿ ಕೊವಿಡ್ ನಿರ್ವಹಣೆ ಮಾಡಿದ್ದೇವೆ. ಎರಡೂವರೆ ಕೋಟಿ ಜನರಿಗೆ ನಾವು ಸಹಾಯ ಮಾಡಿದ್ದೇವೆ. ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಅಂತಾರೆ. ಕೇಂದ್ರದ ಸಚಿವರೇ ಸಂಸತ್ನಲ್ಲಿ ಹೀಗೆ ಉತ್ತರ ಕೊಡುತ್ತಾರೆ. ಆದರೆ ಇಲ್ಲಿ ಮೃತರ ಕುಟುಂಬಕ್ಕೆ ಸಿಎಂ ಏಕೆ ಪರಿಹಾರ ಕೊಟ್ಟರು? ಎಂದು ಕೆಪಿಸಿಸಿ ಅಧ್ಯಕ್ಷ ಪ್ರಶ್ನಿಸಿದ್ದಾರೆ. ಕಳೆದ ವರ್ಷ ಮನೆ ಕಳೆದುಕೊಂಡವರಿಗೇ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡಿಲ್ಲ ಎಂದ ಮೇಲೆ ಸರ್ಕಾರ ಏಕೆ ನಡೆಸಬೇಕು. ಬಿಜೆಪಿಗೆ ಜನರ ಸೇವೆ ಮಾಡಲು ಆಗಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೆರೆ ವೇಳೆ ಹಿಂದೆ ಪ್ರಧಾನಿಗಳು ಬೇರೆ ರಾಜ್ಯಕ್ಕೆ ಹೋಗಿದ್ರು. ಆದರೆ ನಮ್ಮ ರಾಜ್ಯಕ್ಕೆ ಮಾತ್ರ ಪ್ರಧಾನಿ ಮೋದಿ ಬರಲಿಲ್ಲ. ಪ್ರಧಾನಿಯಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜಕೀಯ ಅನಿಶ್ಚಿತತೆ ಇದೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಆಡಳಿತ, ಜನರಿಗೆ ಕೊಟ್ಟ ಕೊಡುಗೆ ಎಂದರು. ಇನ್ನು ಬಿಎಸ್ವೈಗೆ ಹೈಕಮಾಂಡ್‌ನಿಂದ ಸಂದೇಶ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇವತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಊರಲ್ಲಿಲ್ಲ ಅಂತ ಪರೋಕ್ಷವಾಗಿ ಇಂದು ಸಿಎಂ ಬದಲಾಗಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದರು. ಕೊವಿಡ್ ಸ್ಥಿತಿ ಬಗ್ಗೆ ನಮ್ಮ ತಂಡ ಅಧ್ಯಯನ ವರದಿ …
Read More »ಉತ್ತರಪ್ರದೇಶದಂತೆ ಇಲ್ಲೂ ಮಠಾಧೀಶರನ್ನ ಸಿಎಂ ಮಾಡಿ: ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಶ್ರೀ
ಬೆಂಗಳೂರು: ಉತ್ತರಪ್ರದೇಶದಂತೆ ಇಲ್ಲೂ ಮಠಾಧೀಶರನ್ನ ಸಿಎಂ ಮಾಡಿ ಎಂದು ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಶ್ರೀ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧೀಶರ ಸಮಾವೇಶದಲ್ಲಿ ಹೇಳಿಕೆ ನೀಡಿರುವ ಶ್ರೀಗಳು, ಧರ್ಮವನ್ನ ಕಾಪಾಡಲು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನ ಸಿಎಂ ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಗಿಗಳನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ. “ರಾಜ್ಯದಲ್ಲಿ ಹಲವಾರು ಜಾತಿ ವ್ಯವಸ್ಥೆ ಇದೆ. ಆ ಜಾತಿಯಲ್ಲಿ ಮಠಾಧೀಶರು ಕೂಡ ಇದ್ದಾರೆ. ಯಾವುದೇ …
Read More »ರಾಜೀನಾಮೆ ನೀಡುವವರೆಗೂ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್‌ನಿಂದ ಮೊಟ್ಟೆ ಕೊಡುವ ಅಭಿಯಾನ!
ಬೆಂಗಳೂರು,: “ರಾಜ್ಯದಲ್ಲಿ ಅಪೌಷ್ಠಿಕತೆ ನೀಗಿಸಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡಲಾಗುವ ಮೊಟ್ಟೆಯಲ್ಲೂ ದುಡ್ಡು ಮಾಡಲು ಅಮಾನವೀಯ ಹೆಜ್ಜೆ ಇಟ್ಟುವ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ತನಿಖೆಯಾಗಬೇಕು’ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕಿಯರು ಜಂಟಿ ಸುದ್ದಿಗೋಷ್ಠಿ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿದರು. ಮಾಜಿ ಸಚಿವೆ ಉಮಾಶ್ರೀ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ …
Read More »
Laxmi News 24×7