Breaking News

ಜಿಲ್ಲೆ

ಮುಖ್ಯಮಂತ್ರಿ ಕಚೇರಿಯಿಂದ ಯಡಿಯೂರಪ್ಪ ತಂಡ ಹೊರಕ್ಕೆ: ವಿಶೇಷ ಅಧಿಕಾರಿಗಳ ಕಾರ್ಯಮುಕ್ತಿ ಆದೇಶ ಪ್ರಕಟ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ (ಮುಖ್ಯಮಂತ್ರಿಗಳ ಸಚಿವಾಲಯ) ನಿಯೋಜನೆ, ಒಪ್ಪಂದ ಹಾಗೂ ಗುತ್ತಿಗೆ ಆಧಾರದ ಮೆಲೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕಾರ್ಯಮುಕ್ತಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್​ ಆದೇಶ ಹೊರಡಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಸೇರಿದಂತೆ ಒಟ್ಟು 19 ಅಧಿಕಾರಿಗಳನ್ನು ಕರ್ತವ್ಯಮುಕ್ತಗೊಳಿಸಲಾಗಿದೆ. ನಿಯೋಜನೆ / ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ …

Read More »

ಸಂಪುಟ ರಚನೆ: ಸಂಭವನೀಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸಚಿವ ಸಂಪುಟ ರಚನೆ ನಿಟ್ಟಿನಲ್ಲಿ ವರಿಷ್ಠರ ಸಮ್ಮತಿ ಪಡೆದು ವಾಪಸ್ ಆಗಲಿದ್ದಾರೆ. ನೂತನ ಸಚಿವರ ಲಿಸ್ಟ್ ನೊಂದಿಗೆ ಸಂಜೆ 5:40ಕ್ಕೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದು ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ. ನಾಳೆಯೇ ಸಂಪುಟ ರಚನೆಗೆ ಮುಹೂರ್ತ ಫೈನಲ್ ಆಗಲಿದ್ದು, ಮಂಗಳವಾರ ಅಥವಾ ಬುಧವಾರ ನೂತನ ಸಚಿವರು ಪ್ರಮಾಣವಚನ …

Read More »

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಾರ್ಡ್ ಗೆ *ಇ-ಕೆವೈಸಿ* ಮಾಡಲಾಗುವುದು.  

*ದಿನಾಂಕ 01:08:21 ರಿಂದ 10:08:21 ರ ವರೆಗೆ* ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಾರ್ಡ್ ಗೆ *ಇ-ಕೆವೈಸಿ* ಮಾಡಲಾಗುವುದು.   *ಇ-ಕೆವೈಸಿ ಎಂದರೇನು?* ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ನ ಜೋಡಣೆಯ ಉದ್ದೇಶದಿಂದ ಪಡೆಯುವ ಬೆರಳಚ್ಚು ಆಗಿದೆ.   *ಇ-ಕೆವೈಸಿ ಏಕೆ ಮಾಡಿಕೊಳ್ಳಬೇಕು?* ಒಂದು ವೇಳೆ ಇ-ಕೆವೈಸಿ ಆಗದ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುವ ಅಥವಾ ಪಡಿತರ ನಿಲ್ಲಿಸುವ ಸಂಭವವಿರುವುದರಿಂದ …

Read More »

ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ

ಬೆಂಗಳೂರು: ಮೇಕೆದಾಟು ವಿಚಾರವಾಗಿ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೆಡಾರ್‍ನ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ ಸಿಂಗಂ ಅಂತಲೇ ಹೆಸರಾಗಿದ್ದ ಅಣ್ಣಾಮಲೈಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಅವರು ಅವರ ಕೆಲಸ ಮಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. …

Read More »

ಸಿಎಂ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ‌ಮೇಜರ್ ಸರ್ಜರಿ!

ಬೆಂಗಳೂರು: ರಾಜ್ಯದಲ್ಲಿ ಹೊಸ ಸಿಎಂ ಅಧಿಕಾರ ವಹಿಸಿಕೊಂಡ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ‌ಮೇಜರ್ ಸರ್ಜರಿ ಆಗಲಿದೆ. ನಗರ ಪೊಲೀಸ್ ಆಯುಕ್ತ ಸ್ಥಾನಕ್ಕೇರಲು ನಾಲ್ವರು ಅಧಿಕಾರಿಗಳು ರೇಸ್​ ನಲ್ಲಿದ್ದಾರೆ. ಆಗಸ್ಟ್​ಗೆ ಪೊಲೀಸ್ ಆಯುಕ್ತರ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಗುಪ್ತಚರ ವಿಭಾಗದ ಬಿ. ದಯಾನಂದ್, ಪೊಲೀಸ್ ತರಬೇತಿ ವಿಭಾಗದ ಅಮೃತ್ ಪೌಲ್, ರಾಜ್ಯ …

Read More »

ಯಾವುದೇ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರು, ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ: ಸತೀಶ ಜಾರಕಿಹೊಳಿ

        ಗೋಕಾಕ: ಸಮೀಪದ ಸತ್ತಿಗೇರಿ ತೋಟದಲ್ಲಿ ಇಂದು ಹಮ್ಮಿಕೊಂಡಿದ್ದ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.   ನಂತರ ಮಾತನಾಡಿದ ಅವರು, ಸಂಘದವರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕುರಿಗಾಹಿಗಳು ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು.   ಯಾವುದೇ ಸಂಘ …

Read More »

ಚಿಕ್ಕೋಡಿ: ಕಾಲೇಜು ಕಾಂಪೌಂಡ್​ ಗೋಡೆಗೆ ಅಳವಡಿಸಿದ್ದ ಗೇಟ್​​ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವು

ಚಿಕ್ಕೋಡಿ: ಕಾಲೇಜು ಕಾಂಪೌಂಡ್​ ಗೋಡೆಗೆ ಅಳವಡಿಸಿದ್ದ ಗೇಟ್​​ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಚಿಕ್ಕೋಡಿಯ ಆರ್.ಡಿ ಕಾಲೇಜಿನಲ್ಲಿ ನಡೆದಿದೆ. ಚಿಕ್ಕೋಡಿ ನಗರದ ಇಂದಿರಾನಗರ ನಿವಾಸಿಯಾಗಿದ್ದ ಸೂಫಿಯಾನ್ ರಾಜು ಮುಲ್ಲಾ (10) ಮೃತ ದುರ್ದೈವಿ. ಬಾಲಕ ಗೇಟ್ ದಾಟಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಸೋಮವಾರ ಸಂಪುಟ ರಚನೆ ಬಗ್ಗೆ ಫೈನಲ್ ಆಗುವುದು ಬಹುತೇಕ ಖಚಿತ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕರ ಸ್ವೀಕರಿಸಿರುವ ಬೆನ್ನಲ್ಲೇ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಈ ನಡುವೆ ಸೋಮವಾರ ಸಂಪುಟ ರಚನೆ ಬಗ್ಗೆ ಫೈನಲ್ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ನಿನ್ನೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸಚಿವ …

Read More »

ಸಿಎಂ ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಸವರಾಜ ಬೊಮ್ಮಾಯಿ ಟಾಂಗ್

ನವದೆಹಲಿ: ಸಿಎಂ ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ. ನನ್ನ ಆಡಳಿತದಲ್ಲಿ ಬಿಜೆಪಿ ಸ್ಟ್ಯಾಂಪ್ ಇರುತ್ತದೆ. ಮೋದಿ, ಅಮಿತ್ ಶಾ, ಬಿ.ಎಸ್.ವೈ. ಆಡಳಿತದ ಬಿಜೆಪಿಯ ಸಿದ್ಧಾಂತದಡಿ ಮಾಡಿದ ಸ್ಟ್ಯಾಂಪ್ ಇರುತ್ತದೆ. ನಾನು ಯಾವುದೇ ವ್ಯಕ್ತಿಯ ಸ್ಟಾಂಪ್ ಆಗಿರುವುದಿಲ್ಲ ಎಂದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರ ಸರ್ಕಾರವನ್ನು ಜನ ತಿರಸ್ಕರಿಸಿದ್ದರು. ಅವರಿಗೆ ಯಾವ …

Read More »

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕ್ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಹಾರವಾಡ ಕ್ರಾಸ್ ಬಳಿ ಶುಕ್ರವಾರ ನಡೆದಿದೆ. ತಾಲೂಕಿನ ಹೊನ್ನಳ್ಳಿ ನಿವಾಸಿ ರವಿ ಲೋಕು ಗೌಡ( 29) ಮೃತಪಟ್ಟ ವ್ಯಕ್ತಿ. ಬೇಲೇಕೇರಿ ಸಿಬರ್ಡ್ ಕಾಲೊನಿ ನಿವಾಸಿ ಹರೀಶ ಒಮು ಗೌಡ (28) ಗಂಭೀರ ಗಾಯಗೊಂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಟಿಪ್ಪರ್ ಚಾಲಕ ಅನಿಸ್ ಅಲಿ …

Read More »