ಬೆಳಗಾವಿ – ಕೇಂದ್ರ ಮಾಜಿ ಸಚಿವ ದಿ.ಸುರೇಶ ಅಂಗಡಿ ಅವರ ಸಹೋದರರಾಗಿದ್ದ ಡಾ. ಸಿ.ಸಿ.ಅಂಗಡಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದಾಗಿ ಅವರು ಬೆಳಗಾವಿಯ ವಿಶ್ವೇಶ್ವರ ನಗರದ ನಿವಾಸದಲ್ಲಿ ಕೊನೆಯುಸಿರೆಳೆದರು. ನಿವೃತ್ತ ಶಿಕ್ಷಕರಾಗಿರುವ ಅವರಿಗೆ ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣುಕ್ಕಳಿದ್ದಾರೆ. ಬೆಳಗಾವಿಯ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.
Read More »ರಾಜ್ಯಪಾಲ ಹುದ್ದೆಗಾಗಿ ಮನವೊಲಿಕೆ ಯತ್ನ? ಬಿ.ಎಸ್.ಯಡಿಯೂರಪ್ಪ ಆರ್ ಎಸ್ ಎಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಕ್ಕೆ ಕಾರಣ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಆರ್ ಎಸ್ ಎಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೇಶವ ಕೃಪಾ ಆರ್ ಎಸ್ ಎಸ್ ಕಚೇರಿಗೆ ತೆರಳಿರುವ ಯಡಿಯೂರಪ್ಪ ಆರ್ ಎಸ್ ಎಸ್ ಮುಖಂಡ ಮುಕುಂದ್ ಹಾಗೂ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ರಾಜ್ಯಪಾಲರ ಹುದ್ದೆ ಬೇಡವೆಂದಿರುವ ಯಡಿಯೂರಪ್ಪನವರನ್ನು ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಮುಖಂಡರು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Read More »ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವೃದ್ಧ.
ಬೆಳಗಾವಿ : ಬೆಳಗಾವಿಯ ಹಳೆ ಗಾಂಧಿನಗರದ ಬಳಿಯಿರುವ ರೈಲು ಹಳಿಯ ಮೇಲೆ ವೃದ್ಧನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಬೆಳಗಾವಿಯ ಹಳೆ ಗಾಂಧಿನಗರ ಹೈವೆ ಸೇತುವೆ ಹತ್ತಿರ ಇರುವ ರೈಲು ಹಳಿಯ ಮೇಲೆ ಆ ವೃದ್ಧ ಬೆಳಿಗ್ಗೆಯಿಂದ ಕುಳಿತಿದ್ದನಂತೆ, ಮಧ್ಯಾಹ್ನ 3:15 ರ ವೇಳೆಗೆ ಬೆಳಗಾವಿ – ಶೇಡಬಾಳ ರೈಲು ಸಾಂಬ್ರಾ ಕಡೆಯಿಂದ ಬರುತ್ತಿದ್ದಂತೆಯೇ ತಕ್ಷಣ ಹಳಿಯ …
Read More »ಪಾಶ್ಚಾಪುರ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಾಶ್ಚಾಪುರ, ಮಾವನೂರ, ಪರಕನಟ್ಟಿ, ಗುಮಚಿನಮರಡಿ, ಕಣವಿನಹಟ್ಟಿ ಗ್ರಾಮಗಳಿಗೆ ಇಂದು ಭೇಟಿ ನೀಡಿ, ಮಳೆ ಹಾಗೂ ಪ್ರವಾಹದಿಂದಾದ ಹಾನಿಯನ್ನು ಪರಿಶೀಲಿಸಿದರು. ಪ್ರಿಯಾಂಕಾ ಅವರು ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬೆಳೆ ಹಾನಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ವೀಕ್ಷಿಸಿದರು. ಹಾನಿಯ …
Read More »ಕಡೋಲಿ, ಕಾಕತಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹ ಹಾನಿ ಪರಿಶೀಲಿಸಿದ ರಾಹುಲ್ ಜಾರಕಿಹೊಳಿ
ಬೆಳಗಾವಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಜಾಪರವಾಡಿ, ಕಡೋಲಿ, ದೇವಗಿರಿ ಹಾಗೂ ಕಾಕತಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾಕತಿ, ಹೊನಗಾ, ಜಮನಾಳ, ಕೆಂಚನಟ್ಟಿ, ಬೈಲೂರ, ಮಳವಳ್ಳಿ, ಹೊಸವಂಟಮುರಿ ಗ್ರಾಮಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದರು. ಈ ಗ್ರಾಮಗಳಲ್ಲಿ ಪ್ರವಾಹ ಹಾಗೂ ಮಳೆಯಿಂದಾಗಿ ಮನೆ, ಬೆಳೆ, ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳನ್ನು …
Read More »ಪಾಶ್ಚಾಪುರ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಾಶ್ಚಾಪುರ, ಮಾವನೂರ, ಪರಕನಟ್ಟಿ, ಗುಮಚಿನಮರಡಿ, ಕಣವಿನಹಟ್ಟಿ ಗ್ರಾಮಗಳಿಗೆ ಇಂದು ಭೇಟಿ ನೀಡಿ, ಮಳೆ ಹಾಗೂ ಪ್ರವಾಹದಿಂದಾದ ಹಾನಿಯನ್ನು ಪರಿಶೀಲಿಸಿದರು. ಪ್ರಿಯಾಂಕಾ ಅವರು ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬೆಳೆ ಹಾನಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ವೀಕ್ಷಿಸಿದರು. …
Read More »ಸಿಎಂ ನಿರ್ಧಾರಕ್ಕೆ ಬದ್ಧ: ಮಾಜಿ ಸಚಿವ ನಿರಾಣಿ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರಬೇಕು ಎಂದರು. ನಿನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಮೊದಲ ಸಚಿವ …
Read More »ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು!
ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮುಂಭಾಗ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಘಟನೆ ನಡೆಯುವಾಗ ಮುಖ್ಯಮಂತ್ರಿಯವರ ಕಾರಿನಲ್ಲಿದ್ದರು ಎಂದು ವರದಿಯಾಗಿದೆ. ಘಟನೆಯ ವಿವರ: ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶಿವರಾಮ್ ಹೆಬ್ಬಾರ್ ಇದ್ದರು. ವಿಮಾನ ನಿಲ್ದಾಣದಿಂದ …
Read More »ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ. 11.25 ರಿಂದ ಶೇ.21.50 ಕ್ಕೆ ಹೆಚ್ಚಳ
ಬೆಂಗಳೂರು: ಸಾರಿಗೆ ಇಲಾಖೆ 4 ನಿಗಮಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಶೇಕಡ 11.25 ರಿಂದ ಶೇಕಡ 21.50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜುಲೈ 27 ರಂದು ರಾಜ್ಯ ಸಾರಿಗೆ ಇಲಾಖೆ 4 ನಿಗಮಗಳ ನೌಕರರ ಡಿಎ ಹೆಚ್ಚಳ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
Read More »ಯಾವ ಖಾತೆ ಕೊಟ್ಟರೂ ಸಹ ಸಮರ್ಥವಾಗಿ ನಿಭಾಯಿಸುತ್ತೇನೆ: ಶಾಸಕ ರೇಣುಕಾಚಾರ್ಯ ಹೇಳಿಕೆ
ಬೆಂಗಳೂರು:ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ರೆ ತಪ್ಪೇನಿಲ್ಲ, ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ ಎಂದು ಎದೆತಟ್ಟಿ ಹೇಳುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು. ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ, ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಆರು ಶಾಸಕರಿದ್ದು, ಜಿಲ್ಲೆಯನ್ನು ಕಡೆಗಣಿಸದಂತೆ ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಮ್ಮ ಜಿಲ್ಲೆಗೆ ಒಂದು ಸಚಿವ …
Read More »
Laxmi News 24×7