Breaking News

ಜಿಲ್ಲೆ

ವಿಶ್ವದಲ್ಲಿ ಭಾರತ ನಿಂತಿರುವುದಕ್ಕೆ ಸಂವಿಧಾನದ ಆಶಯಗಳೇ ಕಾರಣ

ಬೆಳಗಾವಿ:ವಿಶ್ವದಲ್ಲಿ ಸದೃಢ ಪ್ರಜಾಪ್ರಭುತ್ವ ದೇಶವಾಗಿ ಭಾರತ ನಿಂತಿರುವುದಕ್ಕೆ ಸಂವಿಧಾನದ ಆಶಯಗಳೇ ಬಹುಮುಖ್ಯ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ನಗರದ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನಿಗೆ ಸಾಮಾಜಿಕ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು ಎಂಬ ವೈವಿದ್ಯಮಯ ಚಿಂತನೆಗಳಿಂದ ಕೂಡಿದ ಸಂವಿಧಾನವನ್ನು ಬಾಬಾ ಸಾಹೇಬ್‌ರು ನಮಗೆ ನೀಡಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ …

Read More »

7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್‌

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಗೆಲ್ಲಿಸಿಕೊಂಡು ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್‌, ಸುರ್ಜೇವಾಲಾ ಅವರ ಎದುರಲ್ಲೇ ಓಪನ್ ಆಗಿ ಹೇಳಿದ್ದೆ ಎಂದು ಸಚಿವ ಜಮೀರ್‌ ಅಹ್ಮದ್‌ ತಿಳಿಸಿದರು. ಬೆಂಗಳೂರಿನಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್‌ ಕೊಡದಿದ್ದಕ್ಕೆ ಅಸಮಾಧಾನ ಇದ್ದದ್ದು ನಿಜ, ಆ ನಂತರ ಎಲ್ಲವೂ ಸರಿಹೋಗಿದೆ. ಜಬ್ಬಾರ್‌ ಜೊತೆಗೆ 7 ಮುಸ್ಲಿಂ …

Read More »

2028ಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ, ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಇದೆ: ಆರ್. ಅಶೋಕ್ ‌

ಮಂಡ್ಯ: 2028ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮಗೆ ಅಧಿಕಾರಕ್ಕೆ ಬರುವುದು ಮುಖ್ಯವೇ ಹೊರತು ಸಿಎಂ ಯಾರಾಗಬೇಕು ಎಂಬುದು ಮುಖ್ಯವಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್  ಹೇಳಿದ್ದಾರೆ. ನಾಳೆ ಮಂಡ್ಯ  ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ಶ್ರೀಕ್ಷೇತ್ರಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿರ್ಮಲಾನಂದನಾಥ ಸ್ವಾಮೀಜಿಗಳೊಂದಿಗೆ ಸಿದ್ಧತೆ …

Read More »

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ !!! ಬೇರೆ ರಾಜ್ಯದಲ್ಲಿ ಶವ ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪ್ರಕರಣವನ್ನು ಬೇಧಿಸಿದ ಸಿಪಿಐ ಜಾವೀದ್ ಮುಶಾಪುರೆ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣವನ್ನು ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರು ಬೇಧಿಸಿದ್ದಾರೆ. ಪ್ರೀತಿ ಹಾಗೂ ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದಂತಾಗಿದೆ. ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ …

Read More »

ಕೆರೂರ ಗ್ರಾಮದಲ್ಲಿ 110 ಕೆ.ವಿ. ಸ್ಟೇಶನ್ ಕಾಮಗಾರಿಗೆ 19 ಕೋಟಿ ರೂ. ಮಂಜೂರು – ಪ್ರಕಾಶ ಹುಕ್ಕೇರಿ

ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಅವರು ಗ್ರಾಮದ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆರೂರ ಗ್ರಾಮದಲ್ಲಿ ಸುಸಜ್ಜಿತ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಕಾಮಗಾರಿಗಾಗಿ ಬರೋಬ್ಬರಿ 19 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸುವಲ್ಲಿ ತಂದೆ ಹಾಗೂ ಮಗನ ಜೋಡಿ ಯಶಸ್ವಿಯಾಗಿದೆ. ಈ ಮಹತ್ವದ ಯೋಜನೆಯ ಅಧಿಕೃತ ಕಾಮಗಾರಿ …

Read More »

ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ: ಶಾಸಕ ಯತ್ನಾಳ್ ಕಿಡಿ

ವಿಜಯಪುರ: ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ, ಎರಡೂ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿ ಮಾಡ್ಕೊಂಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ದಾವಣಗೆರೆ ಪಂಚಮಸಾಲಿ ಪೀಠದ ಬಗ್ಗೆ ಮಾತನಾಡಿದ ಅವರು, ಎರಡು ಪೀಠದ ಟ್ರಸ್ಟ್‌ಗಳು ನಂಬಿಕೆ ಕಳೆದುಕೊಂಡಿವೆ. ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ. ಎರಡು ಕಡೆ ಇದೇ ನಡೆಯುತ್ತಿದೆ. ಇದನ್ನ ಖಾಸಗಿ ಆಸ್ತಿ ಮಾಡಿಕೊಂಡವರಿದ್ದಾರೆ. ಇವರಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಪ್ರಾಮಾಣಿಕರು, ಸಮಾಜಕ್ಕಾಗಿ ಕೆಲಸ ಮಾಡುವವರು ಯಾರು ಟ್ರಸ್ಟ್‌ನಲ್ಲಿ …

Read More »

ತರುಣ ಭಾರತ ದಿನಪತ್ರಿಕೆ ವಿರುದ್ಧ ಅಂಬೇಡ್ಕರ ಅಭಿಮಾನಿಗಳ ಆಕ್ರೋಶ

ತರುಣ ಭಾರತ ದಿನಪತ್ರಿಕೆ ಬೆಳಗಾವಿ ಈ ಪತ್ರಿಕೆಯಲ್ಲಿ ಇವತ್ತು ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಜಯಂತಿ ಶುಭಾಶಯ ಕೋರುವ ಬದಲು ಶ್ರದ್ಧಾಂಜಲಿ ಅಂತ ತರುಣ ಭಾರತ ಪತ್ರಿಕೆಯ ಮುಂಗಡ ಪೇಜ್ ನಲ್ಲಿ ಹಾಕಿದ್ದು ಇವತ್ತು ಬಾಬಾ ಸಾಹೇಬರ ಎಲ್ಲಾ ಅನುಯಾಯಿಗಳಿಗೆ ಹಾಗೂ ಅಭಿಮಾನಿಗಳಿಗೆ ದೇಶ ಪ್ರೇಮಿಗಳಿಗೆ ಅಗೌರವ ತೋರಿ ಅವಮಾನಿಸುವ ಪ್ರಯತ್ನ ಮಾಡಿದ್ದನ್ನು ಖಂಡಿಸಿ ಇವತ್ತು ತರುಣ ಭಾರತ ದಿನಪತ್ರಿಕೆ ಕಚೇರಿಗೆ ನುಗ್ಗಿ ಪತ್ರಿಕೆಯ ಸಂಪಾದಕರಿಗೆ ಮಾಲೀಕನಾದ ಕಿರಣ್ ಠಾಕೂರ್ …

Read More »

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

ಕೊಪ್ಪಳ: ಈಗಿರುವ 25 ಸಚಿವರನ್ನು ಸಂಪುಟದಿಂದ  ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಿದರೆ ಅನುಭವ ಬರುತ್ತದೆ. ಖಾಯಂ‌ ಇವರೇ ಇರಬೇಕೆಂದರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಕೊಪ್ಪಳ(Koppala) ಜಿಲ್ಲೆಯ ಕುಕನೂರುನಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಸಿಎಂ‌ ಸ್ಥಾನ ಕೇಳುವುದರಲ್ಲೂ ತಪ್ಪಿಲ್ಲ. ಶಾಸಕರ ದೆಹಲಿ ಪ್ರವಾಸ ಕೈಗೊಂಡರೆ ತಪ್ಪೇನಿದೆ ಎಂದು ಕೇಳಿದರು. ನನ್ನನ್ನು ಮಂತ್ರಿ, ಸಿಎಂ …

Read More »

ಸಂಪುಟ ಪುನಾರಚನೆ ಸುಳಿವು ಇದೆ: ಪರಮೇಶ್ವರ್

ತುಮಕೂರು: ಸಂಪುಟ ಪುನಾರಚನೆಯ  ಸುಳಿವು ಇದೆ. ಈ ಮುನ್ಸೂಚನೆ ಇರೋದರಿಂದಲೇ 30 ಜನ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿದ್ದಲ್ವಾ ಎಂದು ಹೇಳುವ ಮೂಲಕ ಸಂಪುಟ ಪುನಾರಚನೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್  ಅಧಿಕೃತಗೊಳಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೂರ್ನಾಲ್ಕು ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳೋದು ಅವರ ಹಕ್ಕು ಅದರಲ್ಲಿ ತಪ್ಪೇನಿಲ್ಲ. ಆದರೆ ಸಿಎಂ ಬದಲಾವಣೆ ವಿಚಾರ ಆಗಲಿ ಅಥವಾ ಸಂಪುಟ ಪುನಾರಚನೆ ಆಗಲಿ ಎಲ್ಲವೂ …

Read More »

ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಶಾಸಕ ಆಸಿಫ್ ರಾಜು ಸೆಟ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಚಾವಟಗಲ್ಲಿ ನಿವಾಸಿಗಳು

ಬೆಳಗಾವಿ ಬೆಳಗಾವಿ ಉತ್ತರ ಮತಕ್ಷೇತ್ರದ ಚಾವಟಗಲ್ಲಿ ರೇಹಿವಾಸಿಗಳು ತಮಗೆ ಕುಡಿಯುವ ನೀರಿನ ಸೌಲಭ್ಯ ನೀಡಿದ್ದಕ್ಕಾಗಿ ಹಾಗು ಬಹಳ ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಹದಿಗೊಟ್ಟು ಇರುವ ಕಾರಣದಿಂದಾಗಿ ಚಾವುಟದಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಪರದಾಟ ಮಾಡುವ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ ರಾಜು ಸೇಟ್ ಗಮನಿಸಿ ಚವಟಗಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಅಲ್ಲಿ ಮಹಿಳಾ ಸಂಘಟನೆ ಹಾಗೂ ವಿವಿಧ ನಾಗರಿಕರು ಬೆಳಗಾವಿ ಉತ್ತರ ಮತಕ್ಷೇತ್ರದ …

Read More »