ಬೆಳಗಾವಿ:ವಿಶ್ವದಲ್ಲಿ ಸದೃಢ ಪ್ರಜಾಪ್ರಭುತ್ವ ದೇಶವಾಗಿ ಭಾರತ ನಿಂತಿರುವುದಕ್ಕೆ ಸಂವಿಧಾನದ ಆಶಯಗಳೇ ಬಹುಮುಖ್ಯ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನಿಗೆ ಸಾಮಾಜಿಕ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು ಎಂಬ ವೈವಿದ್ಯಮಯ ಚಿಂತನೆಗಳಿಂದ ಕೂಡಿದ ಸಂವಿಧಾನವನ್ನು ಬಾಬಾ ಸಾಹೇಬ್‌ರು ನಮಗೆ ನೀಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ದೇಶದಲ್ಲಿ ಬೇರೂರಿದ್ದ ಜಾತಿತಾರತಮ್ಯ, ಅಸಮಾನತೆ, ದುರ್ಬಲರ ಮೇಲಿನ ಶೋಷಣೆ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಸವೆಸಿದರು. ಶೋಷಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶಿಕ್ಷಣವನ್ನು ಪ್ರತಿಪಾದಿಸಿದ ಅಂಬೇಡ್ಕರ್ ಅವರ ಅಮೂಲ್ಯವಾದ ಜೀವನದ ಆದರ್ಶಗಳನ್ನು ಅನುಕರಿಸುವ ಮೂಲಕ ನಾಗರಿಕರ ಹಕ್ಕುಗಳ ರಕ್ಷಣೆಗೆ ಮತ್ತು ಸಂವಿಧಾನದ ಉಳಿವಿಗಾಗಿ ಬದ್ಧರಾಗೋಣ ಎಂದು ಹೇಳಿದರು.
ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಯಲ್ಲೇಶ ಕೋಲಕಾರ, ಪ್ರಧಾನ ಕಾರ್ಯದರ್ಶಿ ಧನಶ್ರೀ ದೇಸಾಯಿ, ಮುರೇಂದ್ರಗೌಡ ಪಾಟೀಲ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ, ಸಾಮಾಜಿಕ ಜಾಲತಾಣ ರಾಜ್ಯ ಸಮಿತಿ ಸದಸ್ಯ ನೀತಿನ ಚೌಗಲೆ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸುಭಾಷ ಸಣ್ಣವೀರಪ್ಪನವರ, ಕಾರ್ಯದರ್ಶಿ ಮಂಜುನಾಥ ಪಮ್ಮಾರ, ಕೋಶಾಧ್ಯಕ್ಷ ಸಂತೋಷ ದೇಶನೂರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಆನಂದ ಅತ್ತುಗೋಳ,ಸಿದ್ದು ಪಾಟೀಲ,ಪ್ರವೀಣ ಮಾಳೇದವರ, ವೀರಭದ್ರ ಪೂಜಾರ ಇತರರಿದ್ದರು.
Laxmi News 24×7