Breaking News

ಜಿಲ್ಲೆ

ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಕಾರು ಅಪಘಾತ; ಓರ್ವನ ದುರ್ಮರಣ, ಮೂವರಿಗೆ ಗಾಯ

ಬೆಳಗಾವಿ: ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟದ ಹೊರವಲಯದಲ್ಲಿ ಸಂಭವಿಸಿದೆ. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮುರಗೋಡ ಗ್ರಾಮದ ಸಂಜಯ ಜಯಸಿಂಗ್ ಚೌಗಲೆ (58) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು …

Read More »

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಭಗತ್‍ಸಿಂಗ್‍ರವರಿಗೆ ಶ್ರದ್ಧಾಂಜಲಿ

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಮಿಟಿಯ ಅಲ್ಪಸಂಖ್ಯಾತರ ಘಟಕ ವತಿಯಿಂದ ಶಹಿದ ಭಗತ ಸಿಂಗ ಅವರ ಪುಣ್ಯ ತಿಥಿಯ ದಿವಸ ಶ್ರದ್ಧಾಜಂಲಿಯನ್ನು ಸಮರ್ಪಿಸಲಾಯಿತು. ಹೌದು ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಗತ್ ಸಿಂಗ್‍ರವರ ಪುಣ್ಯತಿಥಿಯ ಪ್ರಯುಕ್ತ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಭಗತ್ ಸಿಂಗ್‍ರ ಭಾವಚಿತ್ರಕ್ಕೆ ಪುಷ್ಪ ಮಾಲೆಯನ್ನು ಹಾಕಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ …

Read More »

ದೇವನಹಳ್ಳಿ: ಸಿಮೆಂಟ್ ಲಾರಿಗಳ ಡಿಕ್ಕಿ, ಚಾಲಕ ಸಜೀವ ದಹನ

ಬೆಂಗಳೂರು: ಎರಡು ಸಿಮೆಂಟ್ ಲಾರಿಗಳು ಡಿಕ್ಕಿಯಾಗಿ, ಹೊತ್ತಿಕೊಂಡ ಬೆಂಕಿಯಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಭುಕ್ತಿ ಡಾಬಾ ಬಳಿ ಸಂಭವಿಸಿದ ಅಪಘಾತದಲ್ಲಿ ಎರಡೂ ಸಿಮೆಂಟ್ ಸಾಗಣೆ ಲಾರಿಗಳು ಹೊತ್ತಿ ಉರಿದವು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಓರ್ವ ಚಾಲಕನನ್ನು ಸ್ಥಳೀಯರು ರಕ್ಷಿಸಿದರು. ಆದರೆ ಮತ್ತೋರ್ವ ಚಾಲಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ. ಅಪಘಾತ ಮತ್ತು ಬೆಂಕಿಯಿಂದಾಗಿ ರಾಷ್ಟ್ರೀಯ …

Read More »

ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವುದು ಬಿಜೆಪಿ ಹಿಡನ್ ಅಜೆಂಡಾ- ಸತೀಶ ಜಾರಕಿಹೊಳಿ

ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವುದು ಬಿಜೆಪಿ ಹಿಡನ್ ಅಜೆಂಡಾ- ಸತೀಶ ಜಾರಕಿಹೊಳಿ ಬೆಳಗಾವಿ: ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ದೇಶ. ವಿವಿಧ ಜಾತಿ, ಧರ್ಮ ಕೂಡಿದ ದೇಶ. ಎಲ್ಲರೊಂದಿಗೂ ಸಂಬಂಧ ಇರುತ್ತದೆ. ಮುಸ್ಲಿಮ್‌ರಿಗೆ ವ್ಯಾಪಾರ ನಿರ್ಬಂಧಿಸುವುದು ಅಸಾಧ್ಯ. ಎಲ್ಲ ಸಮುದಾಯಗಳು …

Read More »

ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ 

ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ   ಈ ಬಾರಿ ಕೋವಿಡ್ ಲಕ್ಷಣಗಳು ಕಡೆಮೇ ಆದರೂ ಸಹ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ತಾಲ್ಲೂಕು ಆಡಳಿತ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷೆ ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಿದ್ದಾರೆ,   ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣ ‌ಅಧಿಕಾರಿ‌ ಬಿ ಇ ಒ ಅವರು ನೇತೃತ್ವದಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ರೀತಿಯ …

Read More »

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಂಧಾನದ ಫಲ ಯಶಸ್ವಿ

    ಮೂಡಲಗಿ : ಇಂದಿನಿoದ ನಡೆಯಬೇಕಿದ್ದ ಪದವಿ(ಕಲಾ ವಿಭಾಗ) ಪರೀಕ್ಷೆಗಳನ್ನು ಮಾರ್ಚ 25 ರಿಂದ ಎಪ್ರೀಲ್ 11 ರವರೆಗೆ ನಡೆಸಲು ಉದ್ಧೇಶಿಸಲಾಗಿದ್ದು, ಪರೀಕ್ಷಾ ಕೇಂದ್ರದ ಬದಲಾವಣೆ ಕುರಿತಂತೆ ಎದ್ದಿರುವ ವಿವಾದವು ಇದೀಗ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ಬಗೆಹರಿದಿದ್ದು, ಪರೀಕ್ಷೆಯನ್ನು ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂಡಲಗಿ ಪಟ್ಟಣದ ಎಂಇಎಸ್ ಕಾಲೇಜಿನ ಕಲಾ ವಿಭಾಗದ ಕೇಂದ್ರವನ್ನು ನೆರೆಯ …

Read More »

ಕೋ-ಜನರೇಷನ್​ಗೆ ಬೇಕಿದೆ ನವೀಕರಣ; 62 ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟ!

ಬೆಳಗಾವಿ :ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 72 ಸಕ್ಕರೆ ಕಾರ್ಖಾನೆಗಳ ಪೈಕಿ 60 ಸಕ್ಕರೆ ಕಾರ್ಖಾನೆಗಳು ಕೋಜನರೇಷನ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ನೆರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಠಿಯಿಂದ ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಯುನಿಟ್​ಗೆ 5.80 ರೂ. ವಿದ್ಯುತ್ ದರ ನೀಡುತ್ತಲಿದೆ. ಆದರೆ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಕೋ-ಜನರೇಷನ್ ವಿದ್ಯುತ್ ಉತ್ಪಾದನೆಯ …

Read More »

ಗಜೇಂದ್ರಗಡ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲು

ಗಜೇಂದ್ರಗಡ(ಗದಗ): ತಾಲೂಕಿನ ಜಿಗೇರಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಶನಿವಾರ ನಡೆದಿದೆ. ಮೃತ ದುರ್ದೈವಿ ಗಜೇಂದ್ರಗಡ ಪಟ್ಟಣದ ನಿವಾಸಿ ಶಂಕರ ಬೆರಗಿ(25) ಎಂದು ತಿಳಿದು ಬಂದಿದೆ. ಶಂಕರ ತನ್ನ ಸ್ನೇಹಿತರೊಂದಿಗೆ ಜಿಗೇರಿ ಕೆರೆಗೆ ಈಜಲು ತೆರಳಿದ್ದ. ಮೇಲಿಂದ ಕೆರೆಗೆ ಹಾರಿದ ವೇಳೆ ಕೆರೆಯ ಹುದುಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನು ಕಂಡ ಸ್ನೇಹಿತ ಹಾಗೂ ಮತ್ತಿತರರು ತಕ್ಷಣವೇ ನೀರಿಗೆ ಹಾರಿ ಸ್ನೇಹಿತನ ರಕ್ಷಿಸಲು ಪ್ರಯತ್ನಿಸಿದರೂ, ಅದಾಗಲೇ ಶಂಕರ್ ಬೆರಗಿ …

Read More »

100 ಕೋಟಿ ರೂ. ವೆಚ್ಚದಲ್ಲಿ ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ

  ಗೋಕಾಕ : ರೈತರಿಗೆ ದಿನನಿತ್ಯ ಕನಿಷ್ಠ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲು ಉದ್ಧೇಶಿಸಿದ್ದು, ಇದಕ್ಕಾಗಿ ನೂರು ಕೋಟಿ ರೂ. ವೆಚ್ಚದ ಅಂದಾಜು ಪತ್ರಿಕೆಯನ್ನು ತಯಾರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.   ಶುಕ್ರವಾರ ಸಂಜೆ ತಾಲೂಕಿನ ಗೋಸಬಾಳ ಗ್ರಾಮದ ಹೊರವಲಯದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 15 …

Read More »

ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಬ್ಯಾಟ್ ಹಿಡಿದು ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಬ್ಬಾಳಕರ್,

ಬೆಳಗಾವಿ  ಗ್ರಾಮೀಣ ಕ್ಷೇತ್ರದ ಚಂದನಹೊಸೂರ ಗ್ರಾಮದ ಪವರ್ ಸ್ಟಾರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಸಂಜೆ ಉದ್ಘಾಟಸಿದರು. ಈ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ನೀಡಲಾಗುತ್ತಿದೆ. ಬ್ಯಾಟ್ ಹಿಡಿದು ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಹೆಬ್ಬಾಳಕರ್, ರಾಜಕೀಯಕ್ಕಷ್ಟೇ ಅಲ್ಲ ಕ್ರೀಡೆಗೂ ಸೈ ಎಂದು ತೋರಿಸಿದರು. ಕಲಹೊತ್ತು ಕ್ರಿಕೆಟ್ ಆಡಿ ಕ್ರೀಡಾಪಟುಗಳನ್ನು …

Read More »