Breaking News

ಜಿಲ್ಲೆ

ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿತ

ಆಸ್ತಿ ವಿಚಾರವಾಗಿ ಮಾತನಾಡುವುದಿದೆ ಬಾ ಎಂದು ಕರೆದು ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಬೆಳಗಾವಿಯ ಅಂಕಲಗಿ ಮದುವಾಲ್‍ನಲ್ಲಿ ನಡೆದಿದೆ. ಅಂಕಲಿಗಿಯ ಮದುವಾಲ್ ಗ್ರಾಮದಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳಲ್ಲಿ ವಿವಾದ ಉಂಟಾಗಿದೆ. ಈ ವೇಳೆ ಹಿರಿಯರು ಕೂಡಿದ್ದಾರೆ ಬಾ ಎಂದು ಕರೆದು ಸವಿತಾ ಹಾಗೂ ಬಸಣ್ಣಿ ಸುತಗಟ್ಟಿ ಎಂಬ ದಂಪತಿಗಳನ್ನು ಹಿರಿಯರ ಸಮ್ಮುಖದಲ್ಲಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಾಳು ಸವಿತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ …

Read More »

ಕುಂದಾನಗರಿಯಲ್ಲಿ ಮಳೆಯ ಆರ್ಭಟ

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಸಾಯಂಕಾಲ ಮಳೆಯ ಆರ್ಭಟ ಜೋರಾಗಿದ್ದು. ಸತತ ಎರಡು ಘಂಟೆಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಹೈರಾಣಾದರು. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಏಕಾಏಕಿ ಮಳೆಯ ಆರ್ಭಟಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದರು. ಸತತ ಎರಡು ಗಂಟೆಗಳಿಂದ ನಿರಂತರ ಮಳೆ ಆದರಿಂದ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಯ್ತು. ಇನ್ನು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಡೇಬಜಾರ್‍ಗೆ ಹೋಗುವ ರಸ್ತೆ ಮೇಲೆ …

Read More »

ರಾಜ್ಯ ಸರ್ಕಾರದಿಂದ `SC-ST’ ಸಮುದಾಯಕ್ಕೆ ಸಿಹಿಸುದ್ದಿ : ಶೀಘ್ರವೇ ಉಚಿತ ವಿದ್ಯುತ್ ಅನುಷ್ಠಾನ

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ನೀಡುವ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.   ವಿಕಾಸಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಇಂಧನ ಇಲಾಖೆ ಜಾರಿಗೆ ತಂದಿರುವ ಉಚಿತ ವಿದ್ಯುತ್ ಯೋಜನೆಯನ್ನು ತ್ವರಿತವಾಗಿ ಜಾರಿಗೆ …

Read More »

ಸಿದ್ದರಾಮಯ್ಯ ಜನ್ಮದಿನಕ್ಕೆ ಹೊರಟಿದ್ದ ವಾಹನ ಅಪಘಾತ: ಒಬ್ಬ ಸಾವು

ಬಾಗಲಕೋಟೆ : ಜಿಲ್ಲೆಯ ಹೂಲಗೇರಿ ಕ್ರಾಸ್ ಬಳಿ ಸಿದ್ದರಾಮಯ್ಯ ಅವರ‌ ಜನ್ಮ ದಿನಕ್ಕೆ ಹೊರಟಿದ್ದ ಕ್ರೂಷರ್, ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದು ಒಬ್ಬರು ಮೃತರಾಗಿದ್ದಾರೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ಹಿರೇಆಲಗುಂಡಿ ಬಿ.ಕೆ. ಹಾಗೂ ಚಿಕ್ಕ ಆಲಗುಂಡಿ ಗ್ರಾಮದವರು. ಮಂಗಳವಾರ ಸಂಜೆ ವಾಹನ ಗ್ರಾಮದಿಂದ ಹೊರಟಿತ್ತು. ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ ಎಂಬುವವರು‌ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಐವರನ್ನು ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಜಿಲ್ಲಾ …

Read More »

ಅಲೋಕ್​ ಕುಮಾರ್​ ಎಚ್ಚರಿಕೆಗೆ ಹೆದರಿ ಕೋರ್ಟ್​ಗೆ ಶರಣಾದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ

ವಿಜಯಪುರ: ಎಡಿಜಿಪಿ ಅಲೋಕ್​ ಕುಮಾರ್​ ಖಡಕ್​ ಎಚ್ಚರಿಕೆಗೆ ಹೆದರಿದ ಭೀಮಾತೀರದ ಕುಖ್ಯಾತ ಹಂತಕ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಚಡಚಣ ನ್ಯಾಯಾಲಯಕ್ಕೆ ಆಗಮಿಸಿ ಬಂದು ಶರಣಾಗಿದ್ದಾಳೆ. ವಿಜಯಪುರ 4ನೇ JMFC ನ್ಯಾಯಾಲಯಕ್ಕೆ ಆಗಮಿಸಿ ವಿಮಲಾಬಾಯಿ ಶರಣಾಗಿದ್ದಾಳೆ. 2020ರ ನವೆಂಬರ್ 2 ರಂದು ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ನಡೆದ ದಾಳಿಯ ಬಳಿಕ ವಿಮಲಾಬಾಯಿ ಭೂಗತಳಾಗಿದ್ದಳು. ಕೆಲ ದಿನಗಳ ಹಿಂದಷ್ಟೇ ಅಲೋಕ್​ ಕುಮಾರ್​ ಅವರು ಭೂಗತರಾದ ಚಡಚಣ ಗ್ಯಾಂಗ್‌ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. …

Read More »

ಕಳೆದ 8 ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಆದರೆ, ಮೌಢ್ಯ, ಮೂಢನಂಬಿಕೆ ಇರುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.

ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸುವ ಮೂಲಕ ಘಟಪ್ರಭಾದ ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹೌದು ಇಂದು ಮಂಗಳವಾರ ಘಟಪ್ರಭಾದಲ್ಲಿ ನಾಗಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಘಟಪ್ರಭಾ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಹಾಲಿನ ಪಾಕೇಟ್‍ಗಳನ್ನು ವಿತರಿಸಲಾಯಿತು. …

Read More »

ಸಿದ್ದರಾಮೋತ್ಸವ’ಕ್ಕೆ ಹೊರಟಿದ್ದ ಬಸ್ ಅಪಘಾತ : ಓರ್ವ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರ ಪೈಕಿ ಶಾಬಾಜ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಮಹಮ್ಮದ್ ಉಸ್ಮಾನ್, ಶಿಫಾ, ರಿಯನ್ , ಖಮರುನ್ನಿಸಾ, ಜಬ್ರನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಜೋಗ್ ಜಲಪಾತ ವೀಕ್ಷಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಬಸ್ ನಲ್ಲಿದ್ದವರು ದಾವಣಗೆರೆ ಮೂಲದವರು. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ …

Read More »

ಕಳ್ಳತನ ಪ್ರಕರಣ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 51,000/- ರೂ ಮೊತ್ತದ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2,00,000/- ರೂ ಮೌಲ್ಯದ ಅಷೆ ಟಂಟಂ ವಾಹನವನ್ನು ಹಾಗೂ ಒಂದು ರಾಡ್ ಸೇರಿದಂತೆ ಒಟ್ಟು-2,51,000/- ರೂ ಮೌಲ್ಯದ ವಸ್ತುಗಳನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ರಾಮದುರ್ಗ ಡಿ.ಎಸ್.ಪಿ …

Read More »

ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ: ಗೋಕಾಕ

ಗೋಕಾಕ :ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೋಕಾಕದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಚಿಕ್ಕ ಮಕ್ಕಳ ವೈದ್ಯರಾದ ಡಾ ಗೋಪಾಲ ಹೊಂಗಲ ಮತ್ತು ಡಾ ಸಂಜೀವಿನಿ ಉಮರಾಣಿ ಯವರು ತಾಯಂದಿರಿಗೆ ಎದೆಹಾಲಿನ ಮಹತ್ವ ಬಗ್ಗೆ ಹೇಳಿದರು. ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹುಟ್ಟಿದ ಪ್ರತಿ ಮಗುವೂ ಬದುಕಬೇಕು, ತಾಯಿಯೂ ಆರೋಗ್ಯವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು …

Read More »

ಬಸವ ಪಂಚಮಿ: ರೋಗಿಗಳಿಗೆ ಹಾಲು ವಿತರಿಸಿದ ರಾಹುಲ್ ಜಾರಕಿಹೊಳಿ

  ಬೆಳಗಾವಿ: ಮಾನವ ಬಂಧುತ್ವ ವೇದಿಕೆಯ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗಿದ್ದು, ಬೆಳಗಾವಿ, ಗೋಕಾಕ, ಘಟಪ್ರಭ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿಯೂ ಬಸವ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸಲಾಯಿತು. ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಂಗಳವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ಹಾಲು ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಕಳೆದ ನಾಲ್ಕು …

Read More »