ಬೆಳಗಾವಿಯ ಚನ್ನಮ್ಮಾಜಿ ವೃತ್ತದಲ್ಲಿರುವ ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಕರವೇ ಶಿವರಾಮೇಗೌಡ ಬಣದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೌದು ಬೆಳಗಾವಿಯ ಚನ್ನಮ್ಮಾಜಿ ವೃತ್ತದ ಒಂದು ಭಾಗದಲ್ಲಿ ಸೌಂದರ್ಯಿಕರಣ ಮಾಡುವ ಉದ್ದೇಶದಿಂದ 2011ರಲ್ಲಿ ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ ತಮ್ಮ ವಯಕ್ತಿಕ ಖರ್ಚಿನಲ್ಲಿ ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್ ವಿಎಸ್‍ಎಲ್ ಎಂದು ತಡೆಗೋಡೆ ಮೇಲೆ ಬರೆದಿರುವ ಆಕರ್ಷಕ ನಾಮಫಲಕವನ್ನು ಅನಾವರಣಗೊಳಿಸಿದ್ದರು. …
Read More »ಮತ್ತೆ M.E.S. ಕಿರಿಕ್: ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಆಗ್ರಹ
ಖಾನಾಪುರ ತಾಲೂಕಿನ ಹಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿಯ ದಾಖಲೆಗಳನ್ನು ಮರಾಠಿಯಲ್ಲಿಯೇ ನೀಡುವಂತೆ ಎಂಇಎಸ್ ಆಗ್ರಹಿಸಿದೆ. ಹಲಸಿ ಗ್ರಾಮ ಪಂಚಾಯಿತಿಯವರು ಕನ್ನಡ ಭಾμÉಯಲ್ಲಿ ಸರಕಾರಿ ದಾಖಲೆ ಹಾಗೂ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಮರಾಠಿ ಭಾಷಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಶೇ.21ಕ್ಕಿಂತ ಹೆಚ್ಚಿದ್ದಾರೆ. ಅಲ್ಲದೇ ಹಲಸಿ, ಹಲಸಿವಾಡಿ, ನರಸೇವಾಡಿ, ಭಾಂಬರಡಾ ಗ್ರಾಮಗಳಲ್ಲಿ ಶೇ.90ಕ್ಕೂ ಹೆಚ್ಚು ಮರಾಠಿ …
Read More »ಎಲ್ಲ ಗ್ರಾಮ ಪಂಚಾಯತಗಳು ಈ ಯೋಜನೆಯನ್ನು ಸದ್ಬಳಕೆ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ತೋಟದ ರಸ್ತೆ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅನುಮತಿ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಇತ್ತೀಚೆಗೆ ಕೋರಿದ್ದರು ಎಂಬುದು ಉಲ್ಲೇಖಾರ್ಹ. *ಎಲ್ಲ ಗ್ರಾಮ ಪಂಚಾಯತಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ :* ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರ ಆದೇಶಿಸಿದ್ದು, ಎಲ್ಲ ಗ್ರಾಮ ಪಂಚಾಯತಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ …
Read More »ನರೇಗಾ ಯೋಜನೆಯಡಿ ರೈತರ ತೋಟದ ರಸ್ತೆಗಳ ಸುಧಾರಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ*
ಗೋಕಾಕ : ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಆದೇಶ ಹೊರಡಿಸಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಈ ತೋಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದು, ಒಟ್ಟು ಕಾರ್ಮಿಕ ಆಯವ್ಯಯದ ಶೇ 25 ರ ಮಿತಿಗೆ ಒಳಪಟ್ಟು ರೈತರ ಜಮೀನುಗಳಿಗೆ ಹೋಗುವ …
Read More »ಗ್ರಾಮ ಒನ್ ಗೆ ಇನ್ನಷ್ಟು ಸೇವೆ ಸೇರ್ಪಡೆ: C.M. ಬೊಮ್ಮಾಯಿ
ಬೆಂಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ಗ್ರಾಮ ಒನ್ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು ಗುರುತಿಸಿ, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಜಿಲ್ಲೆಗಳಿಗೆ ವಿಶಿಷ್ಟವಾದ ಸೇವೆಗಳನ್ನು ಆಯಾ ಜಿಲ್ಲೆಗಳಿಗೆ …
Read More »ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ಚುನಾವಣಾ ತಂತ್ರ: KPCC ಕಚೇರಿಯಲ್ಲಿ ಸಭೆ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ಚುನಾವಣಾ ತಂತ್ರಗಾರ ಸುನಿಲ್ ಕನುಗೊಳ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಈ ಸಭೆ ನಡೆಯುತ್ತಿದೆ. ಎಐಸಿಸಿ ಸೂಚನೆಯಂತೆ ರಾಜ್ಯದಲ್ಲಿನ ಕಾಂಗ್ರೆಸ್‌ನ ಸ್ಥಿತಿಗತಿ ಬಗ್ಗೆ ಸುನಿಲ್ ಕನುಗೊಳ್ ತಂಡ ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಈಗಾಗಲೇ ಈ ಸಮೀಕ್ಷೆಯ ವರದಿಯನ್ನು ಎಐಸಿಸಿಗೆ ತಂಡ ಸಲ್ಲಿಸಿದೆ. …
Read More »ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇನಾಡಿಯಲ್ಲಿ ಮನೆಯ ಬೀಗ ಮುರಿದು ಒಳಹೊಕ್ಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ.12ರಂದು ಮಧ್ಯಾಹ್ನ 3 ರಿಂದ ಸಂಜೆ 5 ರ ಅವಧಿಯಲ್ಲಿ ತಮ್ಮ ಮನೆಯ ಬೀಗ ಮುರಿದು ಒಳಹೊಕ್ಕಿ ತಿಜೋರಿಯಲ್ಲಿದ್ದ ಲಾಕರ್ ತೆರೆದು 1.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 9 ಸಾವಿರ ರೂ. ನಗದು ಕಳುವು ಮಾಡಿದ ಬಗ್ಗೆ ಮಾಧುರಿ ಶರದ ಪಿಂಪಳೆ ಎಂಬುವವರು …
Read More »ಬೆಳವಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ ಬೆಳಗಾವಿ “ಗಾಲ್ಫ ಕ್ಲಬ್ ಚಿರತೆಯೊ ಅಥವಾ ಇದು ಬೇರೆ ಚಿರತೆಯೊ..?
ಬೆಳಗಾವಿಯಿಂದ 18 ಕಿ.ಮೀ. ದೂರದ ಬೆಳವಟ್ಟಿಯಲ್ಲಿ ರವಿವಾರ ಮುಂಜಾನೆ ಚಿರತೆಯು ಕಾಣಿಸಿಕೊಂಡಿದೆ. ಈ ಚಿರತೆ ಬೆಳಗಾವಿ “ಗಾಲ್ಫ ಕ್ಲಬ್ ಚಿರತೆಯೊ ಅಥವಾ ಇದು ಬೇರೆ ಚಿರತೆಯೊ..? ಎಂಬ ಅನುಮಾನ ಮೂಡಿದೆ. ಹೌದು ಇದೇ ಅಗಸ್ಟ್ 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಮಟ ಮಟ ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡು ಕಟ್ಟಡ ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿ ಮಾಯವಾದ ಚಿರತೆಯ ಶೋಧಕ್ಕಾಗಿ ಅರಣ್ಯ ಇಲಾಖೆಯು ನಡೆಸಿದ ಪ್ರಯತ್ನಗಳಿಗೆ ಇನ್ನೂ ಫಲ ಸಿಕ್ಕಿಲ್ಲ. …
Read More »ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡ:B.S.Y.ಶುಭ ಕೋರಿದ ಗಣ್ಯರು
ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಹೌದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಶು¨s ಕೋರಿದರು. ಈ ವೇಳೆ ಯಡಿಯೂರಪ್ಪನವರಿಗೆ ಶಾಲು ಹೊದಿಸಿ ಸನ್ಮಾನಿಸಿ …
Read More »ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸ
ಬೆಂಗಳೂರು: ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಭಾರತೀಯ ಜನತಾ ಪಾರ್ಟಿ ಸಂಸದೀಯ ಮಂಡಳಿ ಸಭೆಯ ಸದಸ್ಯರಾಗಿರುವುದಕ್ಕೆ ಅತೀವ ಸಂತೋಷವಾಗಿದೆ. ಬಿಜೆಪಿಯ ಅತ್ಯಂತ ಉನ್ನತ ಎನಿಸಿರುವ ಸಂಸದೀಯ ಮಂಡಳಿಗೆ ಅವರನ್ನು ನೇಮಕ ಮಾಡುವ ಮೂಲಕ ಪಕ್ಷ ಅವರಿಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೆ ಸಿಎಂ …
Read More »
Laxmi News 24×7