ಬೆಳಗಾವಿ: ಗಂಟಲು ನೋವು, ಊತ, ನುಂಗಲು ತೊಂದರೆಯ ಸಮಸ್ಯೆಯೊಂದಿಗೆ ಉಲ್ಬಣಗೊಂಡಿದ್ದ ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಗೆ ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2ರಿಂದ 3 ವರ್ಷಗಳಲ್ಲಿ ಉಲ್ಭಣಗೊಂಡು ರೋಗಿಯು ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. …
Read More »ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷ ಮತಗಳಿಂದ ಆಯ್ಕೆ ಮಾಡಿ.-ಸರ್ವೋತ್ತಮ ಜಾರಕಿಹೊಳಿ
ಗೋಕಾಕ: ಕಳೆದ ಎರಡು ದಶಕದಿಂದ ಅರಭಾವಿ ಕ್ಷೇತ್ರದ ಶಾಸಕರಾಗಿ, ಆ ಭಾಗದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡುವ ಸಂಕಲ್ಪವನ್ನು ಕಾರ್ಯಕರ್ತರು ಮಾಡುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು, ಅರಭಾವಿ ಕ್ಷೇತ್ರದ ಹಳ್ಳೂರ, ಮೆಳವಂಕಿ, ಕೌಜಲಗಿ ಮತ್ತು ವಡೇರಹಟ್ಟಿ ಜಿಲ್ಲಾ ಪಂಚಾಯತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಾಲಚಂದ್ರ ಜಾರಕಿಹೊಳಿ ಅವರ ಜನಪರ …
Read More »ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ
ಬೆಳಗಾವಿ; ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕಿತ್ತೂರಿನ ನಾವಲಗಟ್ಟಿ ಗ್ರಾಮದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಯಲ್ಲಪ್ಪ ಉಪ್ಪಾರಟ್ಟಿ, ಭೀಮಮೂಡಲಗಿ, ರಾಜು ಕಲ್ಲೂರ, ಸಂತೋಷ ಕಲ್ಲೂರ ಸೇರಿದಂತೆ ಎಲ್ಲರನ್ನೂ ಕಾಂಗ್ರೆಸ್ ಮುಖಂದ ನಾನಾಸಾಹೇಬ್ ಪಾಟೀಲ್ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
Read More »ಪ್ರತಿಮನೆಯ ಯಜಮಾನಿಗೆ 2000 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ : ಸಿಎಂ ಇಬ್ರಾಹಿಂ ವ್ಯಂಗ್ಯ
ಚಿಕ್ಕಮಗಳೂರು : 2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಕಡೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಯ ಯಜಮಾನಿಗೆ 2000 ರೂ ಹಣ ನೀಡುತ್ತಾರೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. 2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಯ ಯಜಮಾನಿಗೆ 2000 …
Read More »ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತಾ ಅವರು ಜೆಡಿಎಸ್ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ
ಬೆಂಗಳೂರು : ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತಾ ಅವರಿಗೆ ಕೈ ಟಿಕೆಟ್ ತಪ್ಪಿದ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಮುಂದಿನ ವಿಧಾನ ಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಸಿಗುವ ಅಕಾಂಕ್ಷೆಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತಾ ಅವರು ಜೆಡಿಎಸ್ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ …
Read More »ಸೌಮ್ಯಾ ರೆಡ್ಡಿ ಗಿಫ್ಟ್ ಪಾಲಿಟಿಕ್ಸ್ʼ :ಗಿಫ್ಟ್‌ಗಳ ವಸ್ತುಗಳು ಪತ್ತೆಯಾದ ಬೆನ್ನಲ್ಲೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಮುಂದಿನ ವಿಧಾನಸಭೆ ಚುನಾವಣೆ ಮತದಾರರ ಸೆಳೆಯೋದಕ್ಕೆ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಗಿಫ್ಟ್‌ಗಳ ವಸ್ತುಗಳು ಪತ್ತೆಯಾದ ಬೆನ್ನಲ್ಲೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲಾಗಿದೆ. ಮತದಾರರಿಗೆ ಹಂಚೋದಕ್ಕೆ ವಸ್ತುಗಳ ಕೊಂಡೊಯ್ಯುವಾಗ ವಸ್ತುಗಳನ್ನು ಜಪ್ತಿಯಾಗಿದ್ದು, ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರಾದ ಎನ್ಆರ್ ರಮೇಶ್, ಭಾಸ್ಕರ್ ರಾವ್ ದೂರು ನೀಡಿದೆ. ಅಷ್ಟೇ ಅಲ್ಲದೇ ಶಾಸಕಿ ಸೌಮ್ಯಾ ರೆಡ್ಡಿ ಮಾಲೀಕತ್ವದ ಕಾರನ್ನು ಚೆಕ್ಪೋಸ್ಟ್ನಲ್ಲಿ ರಾಮಚಂದ್ರ ಕಾರು ಚಾಲಕ …
Read More »ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸ್ನೇಹಿತೆಯರಿಬ್ಬರು ಸಾವನ್ನಪ್ಪಿದಾರೆ
ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಸ್ನೇಹಿತೆಯರು – ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು. ಬೆಳ್ತಂಗಡಿ(ದಕ್ಷಿಣ ಕನ್ನಡ): ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸ್ನೇಹಿತೆಯರಿಬ್ಬರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಿನ್ನೆ(ಏ.6) ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆಯಲ್ಲಿ ನಡೆದಿದೆ. ಮೃತ ಯುವತಿಯರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತಾ ದಂಪತಿ ಪುತ್ರಿ ರಕ್ಷಿತಾ (22) ಹಾಗೂ ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ …
Read More »ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟಕರ ಲಕ್ಷ್ಮಣ ಸವದಿ ಹೇಳಿಕೆ
ಪಕ್ಷ ನನಗೆ ಮೋಸ ಮಾಡುವುದಿಲ್ಲ. ಶೇ 99ರಷ್ಟು ನನಗೆ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸವಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಪಂಚಮಸಾಲಿ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಕ್ಷ್ಮಣ ಸವದಿಚಿಕ್ಕೋಡಿ : ಅಥಣಿಯಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟಕರ ಎಂದು ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಗಿ ಸಾಂಸ್ಕ್ರತಿಕ …
Read More »ಬಿಜೆಪಿ ಟಿಕೆಟ್ ವಿಚಾರ ಕತ್ತಿ ಕುಟುಂಬದವರೇ ತೀರ್ಮಾನಿಸಲಿ
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಮೊದಲ ಪಟ್ಟಿ ಪ್ರಕಟಿಸಿರುವ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಆದರೆ ಬಿಜೆಪಿ ಮಾತ್ರ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಇದರ ಮಧ್ಯೆ ಸಚಿವರಾಗಿದ್ದ ಉಮೇಶ್ ಕತ್ತಿ ಪ್ರತಿನಿಧಿಸುತ್ತಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವನ್ನು ಕತ್ತಿ ಕುಟುಂಬದವರೇ ತೀರ್ಮಾನಿಸಲಿ ಎಂಬ ಅಭಿಪ್ರಾಯವನ್ನು …
Read More »ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರಿಗೆ ಗಂಭೀರ ಗಾಯ
ರಾಯಚೂರು : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದ ನೇತಾಜಿ ನಗರದ ಮನೆಯೊಂದರಲ್ಲಿ ನಡೆದಿದೆ. ಶಂಕುದ್ದೀನ್ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಪೋಟವಾಗಿದ್ದು, ಮನೆಯಲ್ಲಿದ್ದ ಅಂಜುಮ್, ನಪೀಜಾ ಬಾನು ಹಾಗೂ ಪದ್ಮಾವತಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಂದರ್ಭಿಕ ಚಿತ್ರ ದಲಿತ ಕುಟುಂಬದ ಮೇಲೆ ಹಲ್ಲೆ : ಪೊಲೀಸರ ನಡೆ ಖಂಡಿಸಿ ಇಂದು …
Read More »
Laxmi News 24×7