Breaking News

ಜಿಲ್ಲೆ

ಶಿರಹಟ್ಟಿ ಕೆ ಡಿ ಗ್ರಾಮದ ವ್ಯಕ್ತಿ ಶವವಾಗಿ ಪತ್ತೆ

, ಚಿಕ್ಕೋಡಿ: ಅನುಮಾನಾಸ್ಪದ ಸಾವು.!ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ. ಗ್ರಾಮದ ಭೀಮಣ್ಣ ಕಲ್ಲಪ್ಪ ಮುನ್ನೋಳಿ ಎಂಬ ವ್ಯಕ್ತಿ ನಿನ್ನೆ ರಾತ್ರಿ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬಾಗೇವಾಡಿ ರಸ್ತೆ ಪಕ್ಕ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದ್ದಾನೆ, ಮೇಲ್ನೋಟಕ್ಕೆ ಹತ್ಯೆ ಶಂಕೆ ಇರಬಹುದೆಂದು ಊಹಿಸಬಹುದಾಗಿದೆ. ಮೂಲತಃ ಹುಕ್ಕೆರಿ ತಾಲೂಕಿನ ಶಿರಹಟ್ಟಿ ಕೆಡಿ ಗ್ರಾಮದ ಭಿಮಣ್ಣ ಮುನ್ನೋಳಿ ಚಿಕ್ಕೋಡಿ ತಾಲೂಕಿನ ಕಬ್ಬೂರ ಬಾಗೆವಾಡಿ ರಸ್ತೆ ಕಾಲುವೆ ಮೇಲೆ ಶವವಗಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ …

Read More »

ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ: ₹10 ಕೋಟಿಗೆ ಹುದ್ದೆ:H.D.K.

ಬೆಂಗಳೂರು: ಇಂಧನ ಇಲಾಖೆಯಲ್ಲಿ ಹುದ್ದೆಗೆ ತಲಾ 10 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನೇರ ಆರೋಪ ಮಾಡಿದರು. ಈ ಸರಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಪೂರ್ಣವಾಗಿ ನಿರತವಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿದೆ ಎಂದು ಹೇಳಿ ತಮ್ಮ ಬಳಿ ಮಹತ್ವದ ದಾಖಲೆ ಇದೆ ಎಂದು ಒಂದು …

Read More »

ಇಂದೇ ಪ್ರತಿಪಕ್ಷ ನಾಯಕರ ಹೆಸರು ಪ್ರಕಟ?:BSY

ಬೆಂಗಳೂರು: ಉಭಯ ಸದನಗಳ ಪ್ರತಿಪಕ್ಷ ನಾಯಕರು ಮತ್ತು ನೂತನ ರಾಜ್ಯಾಧ್ಯಕ್ಷರ ನೇಮಕ ಕುರಿತು ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ ವಾಪಸಾಗಿದ್ದು ಇಂದೇ ಹೈಕಮಾಂಡ್ ಹೆಸರುಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸ ಧವಳಗಿರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಯಾರಾಗಬೇಕು …

Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಭಾರಿ ಕುಲಪತಿ ನೇಮಕ

ಬೆಳಗಾವಿ :ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಯನ್ನಾಗಿ ಪ್ರೊ.ವಿಜಯ ಎಫ್. ನಾಗಣ್ಣವರನ್ನು ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಅವರು ಇದುವರೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುಲಪತಿಯಾಗಿದ್ದ ಎಂ.ರಾಮಚಂದ್ರಗೌಡ ಅವರ ನಿವೃತ್ತಿಯಿಂದ ಇದೀಗ ನಾಗಣ್ಣವರನ್ನು ನೇಮಕ ಮಾಡಲಾಗಿದೆ.

Read More »

ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ

ಬೆಳಗಾವಿ :ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿದೆ. ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ ಜಗದಾರ(40) ಹಾಗೂ ರೇಣುಕಾ ಮಾಳಗಿ (42) ಹತ್ಯೆಗೀಡಾದವರು. ಕೊಲೆಗೈದ ವ್ಯಕ್ತಿ ಯಲ್ಲಪ್ಪ ಮಾಳಗಿ(45) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಶಂಕಿಸಿ ಪತಿ ಯಲ್ಲಪ್ಪ ಮನೆಯಲ್ಲಿದ್ದ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮಲ್ಲಿಕಾರ್ಜುನ ಮನೆಗೆ ಹೋಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ …

Read More »

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

ಹಾವೇರಿ: ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ …

Read More »

ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ನೂತನ ಕಸದ ವಾಹನಕ್ಕೆ ಚಾಲನೆ

ಬೆಳಗಾವಿಯ ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ನೂತನ ಕಸದ ವಾಹನಕ್ಕೆ ಚಾಲನೆ ನೀಡಲಾಯಿತು.   ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಕಸದ ಗಾಡಿಗಳು ಕಡಿಮೆ ಇದ್ದವು. ಮನೆಯ ತ್ಯಾಜ್ಯವನ್ನು ವಾರಕ್ಕೆ 3 ಬಾರಿ ಮಾತ್ರ ಸಂಗ್ರಹಿಸಲಾಗುತ್ತದೆ. ಇದನ್ನು ಗಮನಿಸಿದ ಕಾರ್ಪೊರೇಟರ್ ನಿತಿನ್ ಜಾಧವ್ ಅವರು ಅಭಯ ಪಾಟೀಲ ಅವರೊಂದಿಗೆ ಚರ್ಚಿಸಿ ನೂತನ ಕಸದ ವಾಹನಕ್ಕೆ ಅನುಮೋದನೆ ಪಡೆದು. ಸೋಮವಾರ ಕಸದ ವಾಹನ …

Read More »

ಸರ್ಕಾರದ ವಿರುದ್ಧ ಹೆಚ್ ​​ಡಿ ಕುಮಾರಸ್ವಾಮಿ ಆರೋಪಗಳಿಗೆ ನಮ್ಮ ಬೆಂಬಲವಿದೆ: ಬಿ ಎಸ್​ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಹೆಚ್​ಡಿಕೆ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ …

Read More »

ದ್ವಿತೀಯ ಪಿಯುಸಿ ಪಾಸ್ ಔಟ್ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿ ಲಾಕರ್​ನಲ್ಲಿ ಲಭ್ಯ

ಬೆಂಗಳೂರು : 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 5,24,128 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಅಂಕಪಟ್ಟಿಯನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. 2023ರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಜೂನ್ 26 ರಿಂದಲೇ ಡಿಜಿ ಲಾಕರ್​​ಗೆ ಅಪ್ಲೋಡ್​​ಗೆ ಮಾಡಲಾಗಿದೆ. ಹಾಗಾಗಿ …

Read More »

ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಬಹುದು : ಕುಮಾರಸ್ವಾಮಿ ಭವಿಷ್ಯ

ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ವ್ಯವಸ್ಥೆ ಹುಟ್ಟುಹಾಕುವ ಸಾಮರ್ಥ್ಯ ಇರುವಾಗ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಲೂಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​ಡಿಕೆ, ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಅಜಿತ್​ ಪವಾರ್​ …

Read More »