ಬೆಂಗಳೂರು: ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಗೆಳೆಯನನ್ನು ಕೊಲೆಗೈದಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡೇಟು ಸದ್ದು ಕೇಳಿದೆ. ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದ ಅನ್ನೋ ಕಾರಣಕ್ಕೆ ಕರಣ್ ಸಿಂಗ್ ಎಂಬವನ್ನ ರೌಡಿ ಶೀಟರ್ ಪ್ರಭು ಕೊಲೆ ಮಾಡಿದ್ದನು. ಇಂದು ಪೊಲೀಸರು ಆಚಾರ್ಯ ಕಾಲೇಜ್ ಬಳಿಯ ಸಾಸಿವೆಘಟ್ಟದಲ್ಲಿ ಪ್ರಭು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೇದೆ …
Read More »ಹಸಿರು ವಲಯದಲ್ಲಿರೋ ಚಾಮರಾಜನಗರಕ್ಕೆ ಕಂಟಕವಾಗ್ತಾರಾ ಪೊಲೀಸ್ ಪೇದೆ?
ಬೆಂಗಳೂರು: ಇಷ್ಟು ದಿನ ಲಾಕ್‍ಡೌನ್ ಆದಾಗಿನಿಂದ ಹಸಿರು ವಲಯದಲ್ಲಿರೋ ಚಾಮರಾಜನಗರ ಕೆಂಪು ವಲಯಕ್ಕೆ ಸೇರ್ಪಡೆಯಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಕೊರೊನಾ ಸೋಂಕಿತ ಪೊಲೀಸ್ ಪೇದೆ ಚಾಮರಾಜನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿರೋ ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ. ಇಂದು ಇವರೆಲ್ಲರ ವರದಿ ಬರುವ ಸಾಧ್ಯತೆಗಳಿವೆ. ಪೊಲೀಸ್ ಪೇದೆ ಬೆಂಗಳೂರಿನಲ್ಲಿಯೂ ನಾಲ್ಕು ಜನರ ಜೊತೆ ಸಂಪರ್ಕದಲ್ಲಿದ್ದನು. …
Read More »ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು…………..
ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ. ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ. …
Read More »ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭ
ಬೆಂಗಳೂರು: ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭವಾಗಲಿದೆ. ಡಿಎಲ್/ ಎಲ್‍ಎಲ್ ಲೈಸೆನ್ಸ್ ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ.50 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕವನ್ನು ಆರ್‌ಟಿಒ ಅಭ್ಯರ್ಥಿಗಳ ಮೊಬೈಲ್‍ಗೆ ಸಂದೇಶ ಕಳುಹಿಸಿದೆ. ಹಸಿರು ವಲಯದಲ್ಲಿರುವ 14 ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, …
Read More »ಸ್ಥಳೀಯರ ಮನವೊಲಿಸಿ 17 ತಬ್ಲಿಘಿಗಳು ತುಮಕೂರಿನಲ್ಲಿ ಕ್ವಾರಂಟೈನ್…………
ತುಮಕೂರು: ಶತಾಯಗತಾಯ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಗ್ರಾಮಸ್ಥರ ಮನವೊಲಿಸಿ 17 ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ. ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಪಾವಗಡದ ವೈ.ಎನ್.ಹೊಸಕೋಟೆಯ 13 ಜನರಿದ್ದು, ಉಳಿದ 5 ಜನ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ. ಕ್ವಾರಂಟೈನ್ ಮಾಡಲು ಅವಕಾಶ ಕೊಡದೆ ಸ್ಥಳೀಯರು ಆರಂಭದಲ್ಲಿ ತಗಾದೆ …
Read More »ಆಸ್ಪತ್ರೆ ಆರಂಭಿಸಿ ಚಿಕಿತ್ಸೆ ನೀಡದಿದ್ದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ
ಬೆಳಗಾವಿ, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ಕಾಯ್ದೆ ಅಡಿ ನೋಂದಣಿಯಾಗಿರುವ ಎಲ್ಲ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ತಕ್ಷಣವೇ ಆಸ್ಪತ್ರೆಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಬೇಕು. ಒಂದು ವೇಳೆ ಜನರಿಗೆ ವೈದ್ಯಕೀಯ ಸೇವೆ ನೀಡದಿದ್ದರೆ ಲೈಸೆನ್ಸ್ ರದ್ದುಪಡಿಸುವುದರ ಜತೆಗೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಕೋವಿಡ್ ಹೊರತುಪಡಿಸಿ ಇತರೆ …
Read More »ಧಾರಾವಾಹಿ ಶೂಟಿಂಗ್‍ಗೆ ಸರ್ಕಾರದಿಂದ ಅನುಮತಿ..!
ಬೆಂಗಳೂರು : ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿರುವ ಧಾರಾವಾಹಿ ಶೂಟಿಂಗ್‍ಗಳಿಗೆ ಸರ್ಕಾರ ಅನುಮತಿ ನೀಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಲಾಕ್‌ಡೌನ್‌ನಿಂದ ಕಿರುತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದು ಒಂದೂವರೆ ತಿಂಗಳಾಗಿವೆ. ಈ ಮಧ್ಯೆ ಲಾಕ್‌ಡೌನ್ ಕೊಂಚ ಸಡಲಿಕೆಯಾಗಿರುವುದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದರಿಂದ, ಕಿರುತೆರೆಯ ಚಿತ್ರೀಕರಣಕ್ಕೂ ಅನುವು ಮಾಡಿಕೊಡಬೇಕೆಂದು ಹಲವರು ಇದೀಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಕುರಿತು ಮಂಗಳವಾರ ಮಾತನಾಡಿದ್ದ ಕಂದಾಯ ಸಚಿವ ಆರ್. ಅಶೋಕ್, ಧಾರಾವಾಹಿ ಮತ್ತು …
Read More »ಕುಡುಕರ ಅವಾಂತರದಿಂದ ಮತ್ತೊಂದು ಕೊಲೆ!
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ 43 ದಿನಗಳಿಂದ ಮದ್ಯ ಸಿಗದೆ ಪರದಾಡಿದ್ದ ಕುಡುಕರು ಸೋಮವಾರ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮದ್ಯ ಸೇವಿಸಿ ಸುಮ್ಮನಿರದ ಕೆಲವರು ಕೊಲೆ, ಹಲ್ಲೆಗೆ ನಡೆಸಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಇಂತಹದ್ದೇ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಪುರುಷೋತ್ತಮ್ ಕೊಲೆಯಾದ ವ್ಯಕ್ತಿ. ಕಾಮಾಕ್ಷಿಪಾಳ್ಯದ ಆದಿತ್ಯ ಬಾರ್ ಮುಂದೆ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ …
Read More »2ನೇ ದಿನವೂಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ. ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್) ನಿಂದ …
Read More »ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 73 ಜನರಲ್ಲಿ ಸೋಂಕು ಪತ್ತೆಯಾಗಿರುತ್ತದೆ. ಇದೀಗ ಒಟ್ಟಾರೆ 34 ಜನರು ಗುಣಮುಖ
ಬೆಳಗಾವಿ: ಕೊರೊನಾ ಸೋಂಕು ತಗುಲಿದ್ದ ಒಬ್ಬ ಮಹಿಳೆಯು ಸೇರಿದಂತೆ ಒಟ್ಟು 8 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕು ಕುಡಚಿಯ 5 ಜನರು ಮತ್ತು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-224 ಪಿ-225 ಪಿ-243 ಪಿ-244 ಪಿ-245 ಪಿ-289 ಪಿ-294 …
Read More »
Laxmi News 24×7