Breaking News

ಜಿಲ್ಲೆ

ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಅಧಿಸೂಚ‌ನೆ: ರಮೇಶ್ ಲ. ಜಾರಕಿಹೊಳಿ

ಮೈಸೂರು: ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಅಧಿಸೂಚ‌ನೆ ಹೊರಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಅವರೊಂದಿಗೆ ಮುಂದಿನ ಶನಿವಾರ ಸಭೆ ನಡೆಸಿ, ಕರ್ನಾಟಕದಲ್ಲಿ ಈ ಅಧಿಸೂಚನೆ ಜಾರಿಗೊಳಿಸಲು ಕ್ರಮವಹಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರಾದ ರಮೇಶ್ ಲ. ಜಾರಕಿಹೊಳಿ ಅವರು ತಿಳಿಸಿದರು.  ಗುರುವಾರ ಮೈಸೂರಿನ ಜಲದರ್ಶಿನಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮಾಜದ ಮುಖಂಡರು ಹಾಗೂ ವಿವಿಧ ಗ್ರಾಮದ ಯಜಮಾನರೊಂದಿಗೆ …

Read More »

ವಿದ್ಯುತ್ ಕ್ಷೇತ್ರ ಸುಧಾರಣೆಗೆ ಪ್ರಧಾನಿ ಮೋದಿ ಮಹತ್ವದ ಸಲಹೆ

ನವದೆಹಲಿ, ಮೇ 28- ಗ್ರಾಹಕರು ಮತ್ತು ಬಳಕೆದಾರರ ಸಂತೃಪ್ತಿಯನ್ನು ಹೆಚ್ಚಿಸುವ ಅಗತ್ಯದ ಜೊತೆ ಕಾರ್ಯನಿರ್ವಹಣಾ ಕ್ಷಮತೆ ಮತ್ತು ಆರ್ಥಿಕ ಸುಸ್ಥಿರತೆ ವೃದ್ಧಿಗೂ ಆದ್ಯತೆ ನೀಡುವಂತೆ ವಿದ್ಯುತ್ ವಲಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ. ದೆಹಲಿಯಲ್ಲಿ ವಿದ್ಯುತ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಗಳೊಂದಿಗೆ ಅವುಗಳ ಕಾರ್ಯನಿರ್ವಹಣೆ ಕುರಿತು ಮೋದಿ ಪರಾಮರ್ಶೆ ನಡೆಸಿದರು. ದೇಶದ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಸೇರಿದಂತೆ ಈ ವಲಯದಲ್ಲಿ ಎದುರಾಗಿರುವ …

Read More »

ಕೊರೊನಾ ಪೀಡಿತರ ಸಂಖ್ಯೆ 2493ಕ್ಕೆ ಏರಿಕೆ – ಒಟ್ಟು 28 ಮಂದಿ ಡಿಸ್ಚಾರ್ಜ್

ಬೆಂಗಳೂರು: ಕರ್ನಾಟಕದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಒಟ್ಟು 75 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ. 75 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಮರಳಿದ್ದರೆ, 6 ಮಂದಿ ತಮಿಳುನಾಡಿನಿಂದ ಬಂದಿದ್ದಾರೆ. ಉಡುಪಿಯಲ್ಲಿ ಒಟ್ಟು 27 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 26 ಮಂದಿ ಮಹಾರಾಷ್ಟ್ರದಿಂದ ಬಂದಿದ್ದರೆ, ತೆಲಂಗಾಣದಿಂದ ಬಂದ ಓರ್ವ ಮಹಿಳೆಗೆ ಸೋಂಕು ಬಂದಿದೆ. ಹಾಸನದಲ್ಲಿ ಒಟ್ಟು 13 ಮಂದಿಯಲ್ಲಿ ಪಾಸಿಟಿವ್ ಕಾಣಿಸಿದ್ದು, 10 …

Read More »

ಆರೋಪ ಮಾಡಿ ರುದ್ರ ಭೂಮಿಯನ್ನು ರದ್ದು ಮಾಡುವಂತೆಮಾಡಿದ್ದಮನವಿತೆಗೆದು ಹಾಕಬೇಕೆಂದು ವಿನಂತಿ

ಗೋಕಾಕ ನಗರದ ವಾರ್ಡ ನಂಬಯ 31 ರಲ್ಲಿ ಇರುವ ಕ್ರಶ್ಚಿಯನ್ ಸಮುದಾಯದ ರುದ್ರಭೂಮಿಯು ಅಧಿಕೃತವಾಗಿದೆ ಆದರೂ ಕೆಲವರು ಅದನ್ನು ರದ್ದು ಮಾಡುವಂತೆ ಮನವಿ ಮಾಡಿದ್ದು ಅದನ್ನು ತಿರಸ್ಕರಿಸಬೇಕೆಂದು ಗೋಕಾಕ ಕ್ರೈಸ್ಥ ಸಮುದಾಯದ ಟ್ರಸ್ಟ ವತಿಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು ಇಂದು ಮನವಿ ಸಲ್ಲಿಸಿದ ಅವರು ಗೋಕಾಕ ನಗರದಲ್ಲಿರ ವಾರ್ಡ್ ನಂ 31 ರಲ್ಲಿ ಬರುವ ಜ್ಞಾನ ಮಂದಿರ ಹತ್ತಿರದ ಕ್ರೈಸ್ಥರ 0.10 ಗುಂಟೆ ರುದ್ರ ಭೂಮಿಯು …

Read More »

ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಳ್ಳಿ ಹಾಕಿರುವ ಹೈಕೊರ್ಟ್

ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಳ್ಳಿ ಹಾಕಿರುವ ಹೈಕೊರ್ಟ್, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ನಿರ್ದೇಶನ ಕೋರಿ ವಕೀಲ ಲೋಕೇಶ್ ಎಂಬುವವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್‌ …

Read More »

ಕಿರಣ ಜಾಧವ ನೇತೃತ್ವದ ಫೌಂಡೇಶನ್ ಗೆ ಎಲ್ಲ ಸಹಕಾರ ನೀಡಿವ ಭರವಸೆ:ರಮೇಶ ಜಾರಕಿಹೊಳಿ

ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬುಧವಾರ ನಗರದ ವಿಮಲ್ ಫೌಂಡೇಶನ್ ಕಚೇರಿಗೆ ಭೇಟಿ ನೀಡಿ ಫೌಂಡೇಶನ್ ಕಾರ್ಯವನ್ನು ಪ್ರಶಂಸಿಸಿದರು. ವಿಮಲ್ ಫೌಂಡೇಶನ್ ಚೇರಮನ್ ಕಿರಣ ಜಾಧವ ಮತ್ತು ತಂಡ ಕಳೆದ ಬಾರಿ ಪ್ರವಾದ ಸಂದರ್ಭದಲ್ಲಿ ಮತ್ತು ಈಚಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ಜನಪರ ಕಾರ್ಯವನ್ನು ರಮೇಶ ಜಾರಕಿಹೊಳಿ ಶ್ಲಾಘಿಸಿದರು. ಸಂಸ್ಥೆಯ ಎಲ್ಲ ಒಳ್ಳೆಯ ಕೆಲಸದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ ರಮೇಶ ಜಾರಕಿಹೊಳಿ, ಮುಂಬರುವ ಮಳೆಗಾಲದಲ್ಲಿ …

Read More »

ಐರ್ಲೆಂಡ್‍ನ ದುಬ್ಲಿನ್ ನಿಂದ ಬೆಂಗಳೂರಿಗೆ ಬಂದಿಳಿದ 136 ಪ್ರಯಾಣಿಕರು ……

ಬೆಂಗಳೂರು, ಮೇ 28- ಐರ್ಲೆಂಡ್‍ನ ದುಬ್ಲಿನ್‍ನಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ತನೇ ಏರ್ ಇಂಡಿಯಾ ವಿಮಾನದಲ್ಲಿ 136 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಬಂದಿಳಿದ ಒಟ್ಟು 136 ಮಂದಿ ಪ್ರಯಾಣಿಕರಲ್ಲಿ ಒಂದು ಮಗು ಸೇರಿದಂತೆ 75 ಪುರುಷರು ಮತ್ತು 61 ಮಹಿಳೆಯರು ಇದ್ದಾರೆ. ನಂತರ ಏರ್ ಇಂಡಿಯಾ …

Read More »

ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ

ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ ಎಂಬ ಆರೋಪವೊಂದು ವೈದ್ಯರ ವಿರುದ್ಧ ಕೇಳಿಬಂದಿದೆ. ಮೇ 12ರಂದು ದುಬೈನಿಂದ ಗರ್ಭಿಣಿ ಏರ್ ಲಿಫ್ಟ್ ಆಗಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಆಕೆಯನ್ನು ಹೊಟೇಲ್ ಕ್ವಾರಂಟೈನ್ ಆಗಿದ್ದರು. ಮರುದಿನ ನಡೆದ ತಪಾಸಣೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಗರ್ಭಿಣಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಗರ್ಭಿಣಿಯ ಆರೋಗ್ಯ ತಪಾಸಣೆ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ …

Read More »

ಕೊರೊನಾ ಸಮಯದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ

ಬೆಂಗಳೂರು: ಕೇವಲ ಏಳು ದಿನಕ್ಕೆ ಬಿಎಂಟಿಸಿ ಲಾಕ್‍ಡೌನ್ ನಿಯಮಗಳನ್ನು ಬ್ರೇಕ್ ಮಾಡಿದೆ. ಇದನ್ನ ಸರಿ ಮಾಡಬೇಕಾದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಮಾತ್ರ ಅವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಸಚಿವರ ಮಾತುಗಳನ್ನು ಕೇಳಿದ್ರೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ರಾಜ್ಯದಲ್ಲಿ ಲಾಕ್‍ಡೌನ್ ರಿಲೀಫ್ ಸಿಕ್ಕಾಗ ಜನ ಬಿಂದಾಸ್ ಆಗಿ ಎಲ್ಲೆಂದರಲ್ಲಿ ಓಡಾಡೋಕೆ ಶುರುಮಾಡಿದರು. ನಂತರದ ದಿನಗಳಲ್ಲಿ ಒಂದಷ್ಟು ನಿಯಮಗಳನ್ನ ಹಾಕಿ ಸಾರ್ವಜನಿಕ ಸಾರಿಗೆ …

Read More »

ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ.

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹೊಸ ಸೂತ್ರ ಸಿದ್ಧತೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲೂ ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ ಮಾಡಲಾಗುತ್ತಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲೂ ಆರೋಗ್ಯ ನೋಂದಾವಣೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವಾಗಿ ಆರೋಗ್ಯ ನೋಂದಾವಣೆ ಬಗ್ಗೆ ಅಧಿಕೃತ ಆದೇಶಕ್ಕೆ ಸರ್ಕಾರ ತಯಾರಿ ಮಾಡುತ್ತಿದೆ ಎಂದು …

Read More »