Breaking News

ಜಿಲ್ಲೆ

BIG BREAKING ಸುರೇಶ್ ಅಂಗಡಿ ದೆಹಲಿ ಏಮ್ಸ್ ಆಸ್ಪತ್ರೆ ಯಲ್ಲಿ ವಿಧಿವಶ

ಬೆಳಗಾವಿ ಸಂಸದ ನಮ್ಮ ಬೆಳಗಾವಿ ಜನ ನಾಯಕ ಸುರೇಶ್ ಅಂಗಡಿ ವಿಧಿವಶ ಸಪ್ಟೆಂಬರ್ 11ರಂದು ಕ ರೋನ ಧೃಡ ಆಗಿದ್ದರ್ ಬಗ್ಗೆ ಟ್ವೀಟ್ ಯಾವುದೇ ಲಕ್ಷಣ ಇಲ್ಲ ಆದ್ರೂ ಚಿಕಿತ್ಸೆ ತಿಗೊಳುತ್ತಿದ್ದೇನೆ ಎಂದು ಟ್ವೀಟ್ ದೆಹಲಿ ಏಮ್ಸ್ ಆಸ್ಪತ್ರೆ ಯಲ್ಲಿ ರೈಲ್ವೇ ಸಚಿವ ಸುರೇಶ್ ಅಂಗಡಿ ವಿಧಿವಶ  ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ (55) ಅವರು ದಿಲ್ಲಿಯ …

Read More »

ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಧ್ರುವ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಧ್ರುವ ಬಹು ನಿರೀಕ್ಷೆಯ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಈಗ ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಚಿತ್ರತಂಡ ‘ಪೊಗರು’ ಸಿನಿಮಾದ ಟೈಟಲ್ ಸಾಂಗ್ ಸೆರೆಹಿಡಿಯುತ್ತಿದೆ. ಈ ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೇ ‘ಪೊಗರು’ ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 1.50 ಕೋಟಿಯ …

Read More »

ಹಬ್ಬಕ್ಕೆ ಸಾಮಗ್ರಿ ತರಲು ಹೋದ ಮಹಿಳೆ – ವಾಪಸ್ ಬರುವಾಗ ಲಾರಿ ಡಿಕ್ಕಿ

ಮಂಡ್ಯ: ಹಬ್ಬಕ್ಕೆಂದು ಸಾಮಗ್ರಿಗಳನ್ನು ತರಲು ಹೋಗಿದ್ದ ಮಹಿಳೆಗೆ ಗಣಿಗಾರಿಕೆಯ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ. ಚೋಕನಹಳ್ಳಿ ಗ್ರಾಮದ ಜ್ಯೋತಿ ಮೃತ ಮಹಿಳೆ. ಜ್ಯೋತಿ ಇಂದು ಮಧ್ಯಾಹ್ನ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಚೋಕನಹಳ್ಳಿಯಿಂದ ಬೂಕನಕೆರೆಗೆ ಬಂದಿದ್ದರು. ನಂತರ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ವಾಪಸ್ಸು ಹೋಗುವ ವೇಳೆ ಗಣಿಗಾರಿಕೆಯ ಲಾರಿಯೊಂದು ಜ್ಯೋತಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ …

Read More »

ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ …

Read More »

ಕೆಪಿಸಿಸಿ_ಕಾರ್ಯಾಧ್ಯಕ್ಷ_ಸತೀಶ_ಜಾರಕಿಹೊಳಿ_ನೇತೃತ್ವದಲ್ಲಿ_ಸಹಕಾರ_ಸಚಿವ_ಟಿ_ಸೋಮಶೇಖರಗೆ_ಮನವಿ…

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು. ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ …

Read More »

ಕೋವಿಡ್ ನಿರ್ವಹಣೆ ಹಾಗೂ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ವಹಣೆಗೆಂದೇ ಸರಕಾರ ಕೋಟ್ಯಾಂತರ ರೂ ತಹಶೀಲ್ದಾರ ಖಾತೆಗೆ ಹಣ ಜಮಾ: ತಹಶೀಲ್ದಾರ ಖಾತೆಯಿಂದಲೇ ಲಕ್ಷಾಂತರ ಹಣ ಲೂಟಿ

ಯಾದಗಿರಿ: ಕೋವಿಡ್ ನಿರ್ವಹಣೆ ಹಾಗೂ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ವಹಣೆಗೆಂದೇ ಸರಕಾರ ಕೋಟ್ಯಾಂತರ ರೂ ತಹಶೀಲ್ದಾರ ಖಾತೆಗೆ ಹಣ ಜಮಾ ಮಾಡುತ್ತದೆ. ಆದರೆ, ಈಗ ತಹಶೀಲ್ದಾರ ಖಾತೆಯಿಂದಲೇ ಲಕ್ಷಾಂತರ ಹಣ ಲೂಟಿ ಮಾಡಿದ್ದಕ್ಕೆ ಈಗ ತಹಶೀಲ್ದಾರರಿಗೆ ಟೆನ್ಶನ್​​ ಶುರುವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿಯೇ ಸರಕಾರಕ್ಕೆ ವಂಚನೆ ಮಾಡಿದ್ದ ದಂಧೆ ಬೆಳಕಿಗೆ ಬಂದಿದೆ. ಸುರಪುರ ತಹಶೀಲ್ದಾರ ನಿಂಗಪ್ಪ ಬಿರಾದಾರ ಹೆಸರಿನಲ್ಲಿಯೇ ಚೆಕ್ ಪಡೆದು ತಹಶೀಲ್ದಾರ ಸುರಪುರ ಹೆಸರಿನಲ್ಲಿ ನಕಲಿ ಸಹಿ …

Read More »

ದಿಗಂತ್‍ಗೆ 2ನೇ ಬಾರಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಬೆಂಗಳೂರು: ಡ್ರಗ್ಸ್ ಮಾಫಿಯಾ ನಂಟಿನ ಆರೋಪದ ಮೇರೆಗೆ ಸ್ಯಾಂಡಲ್‍ವುಡ್ ಸ್ಟಾರ್ ನಟ ದೂದ್‍ಪೇಡ ದಿಗಂತ್‍ರನ್ನು ಸಿಸಿಬಿ ಪೊಲೀಸರು 2ನೇ ಬಾರಿ ವಿಚಾರಣೆ ಆರಂಭಿಸಿದ್ದಾರೆ. ದಿಗಂತ್‍ಗೆ 2ನೇ ಬಾರಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸಿಸಿಬಿ ಅಧಿಕಾರಿಗಳ ನೋಟಿಸ್ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದಲ್ಲಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ದಿಗಂತ್, ಚಿತ್ರೀಕರಣ ಅರ್ಧಕ್ಕೆ ಮೊಟಕುಗೊಳಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಿಗ್ಗೆ 11.30ಕ್ಕೆ ಹಾಜರಾದ ದಿಗಂತ್‍ರನ್ನು ಸಿಸಿಬಿ ತನಿಖಾಧಿಕಾರಿ ಪುನೀತ್ ತೀವ್ರ …

Read More »

ಅಂಗಡಿ ಮುಂದೆ ಎಂಜಲು ಉಗಿದ ಎಂಬಕಾರಣಕ್ಕೆ ಯುವಕನ ಕೊಲೆ

ಚಿಕ್ಕಬಳ್ಳಾಪುರ:ಅಂಗಡಿ ಮುಂದೆ ಎಂಜಲು ಉಗಿದ ಎಂಬಕಾರಣಕ್ಕೆ ಯುವಕನ ಕೊಲೆಯೇ ಆಗಿಹೋಗಿದೆ. ತನ್ನ ಅಂಗಡಿ ಮುಂದೆ ಎಂಜಲು ಉಗಿದ ಯುವಕನನ್ನು ಅಂಗಡಿ ಮಾಲೀಕ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಪ್ರಕರಣ ನಡೆದಿದೆ. ಕೊಲೆಗೀಡಾದ ಯುವಕನನ್ನು ಗ್ರಾಮದ ಮುನಿಕೃಷ್ಣ ಎಂದು ಗುರುತಿಸಲಾಗಿದ್ದು ಕೊಲೆ ಆರೋಪಿ ಅದೇ ಗ್ರಾಮದ ಚೇತನ್. ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ ಬೆಳಗ್ಗೆ …

Read More »

ತರಕಾರಿಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ.

ಬೆಳಗಾವಿ :ಅತ್ತ ಕೊರೊನಾ ಬಿಟ್ಟು ಬಿಡದೇ ಕಾಡುತ್ತಿದೆ. ಇತ್ತ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಜನ ಇದ್ದಾರೆ. ಇದರ ನಡುವೆ ಒಂದೊಂದೆ ಬೆಲೆ ಏರಿಕೆಗಳು ಜನರ ಕೈ ಸುಡುತ್ತಿವೆ. ಇದರ ಮಧ್ಯೆ ತರಕಾರಿ ಬೆಲೆಗಳು ಗಗನಕ್ಕೇರುತ್ತಿವೆ. ಮೊದಲೇ ದುಡಿಮೆ ಇಲ್ಲದೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿರುವ ಬೆನ್ನಲ್ಲೇ ಇದೀಗ ತರಕಾರಿಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ. ಹೌದು, ಉತ್ತರ ಕರ್ನಾಟಕದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಾಶವಾಗುತ್ತಿವೆ. ಹೀಗಾಗಿ ತರಕಾರಿಗಳ ಬೆಲೆ ಏರಿಕೆ …

Read More »

ಅಥಣಿ …..ಎರಡನೇ ದಿನ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

ಅಥಣಿ …..ಎರಡನೇ ದಿನ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ. ಅಥಣಿ: ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ತಳವಾರ ಸಮುದಾಯದ ಕೆಲವು ಬಾಂಧವರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪಟ್ಟನದ ಮಿನಿ ವಿಧಾನಸೌಧದಲ್ಲಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿವಾರ-ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದವರು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಲಿ ಎಂದು ಒತ್ತಾಯಿಸಿ ತಳವಾರ ಸಮಾಜದ ಮುಖಂಡ ರಾಜು ಜಮಖಂಡಿಕರ ಮುಂದಾಳತ್ವದಲ್ಲಿ ಪ್ರತಿಭಟನೆ ಕೈಗೊಂಡು, ವಿಧಾನಸಭಾ ಕಲಾಪ ಮುಗಿಯುವವರೆಗೆ …

Read More »