Breaking News

ಬೆಳಗಾವಿ

ನೂತನ ಎಂಎಸ್ಎಂಇ ನೀತಿ ಹಿನ್ನೆಲೆಯಲ್ಲಿ ಸಮಾಲೋಚನೆ

ಬೆಳಗಾವಿ : ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬುಧವಾರ ಪಾಲುದಾರರೊಂದಿಗೆ ಸಮಾಲೋಚನೆ ನಡೆಯಿತು. ಜಿಲ್ಲಾ ಕೈಗಾರಿಕೆ ಕೇಂದ್ರ ಹಾಗೂ ಬೆಳಗಾವಿ ವಾಣಿಜ್ಯೋದ್ಯಮ ಸಂಘಗಳ ಸಹಯೋಗದಲ್ಲಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ವಿವಿಧ ತಜ್ಞರು ವಿಷಯಗಳನ್ನು ಮಂಡಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಡಾ.ಸತೀಶ ಬಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕಡೆ ಪಾಲುದಾರರ ಸಮಾವೇಶ ನಡೆಸಿ, ಸಲಹೆ ಪಡೆದು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. …

Read More »

ಅಂಕಲಗಿ ಘಟಕ ಹೋಮ್‌ಗಾರ್ಡಗೆ ಮುಖ್ಯಮಂತ್ರಿಗಳ ಸೇವಾ ಪದಕ ಶಾಸಕರಿಂದ ಸತ್ಕಾರ

ಗೋಕಾಕ: ತಾಲೂಕಿನ ಅಂಕಲಗಿ ಘಟಕ ಹೋಮ್‌ಗಾರ್ಡ ಆಗಿರುವ ಹೊಳೆಪ್ಪಾ ಬಸವಣ್ಣಿ ನೇಸರಗಿ ಅವರಿಗೆ ೨೦೨೫ರ ಮುಖ್ಯಮಂತ್ರಿಗಳ ಸೇವಾ ಪದಕ ದೊರೆತಿರುವುದಕ್ಕಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಹೊಳೆಪ್ಪಾ ನೇಸರಗಿ ಅವರ ಸಮರ್ಪಣಾ ಮನೋಭಾವವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು. ದೀರ್ಘಕಾಲದ ಸೇವೆ ಬಂದೋಬಸ್ತ್ ಕರ್ತವ್ಯ, ತುರ್ತು ಸಂದರ್ಭಗಳಲ್ಲಿ ಅಗ್ನಿ ಸುರಕ್ಷತೆ, ಮತ್ತು ಶೌರ್ಯ ಪ್ರದರ್ಶಿಸಿದ ಕಾರಣ ಸಿಎಂ ಪದಕ ಲಭಿಸಿದ್ದು ಇಂಥಹ ಸಿಬ್ಬಂದಿಗಳಿಗೆ …

Read More »

ಪೆಟ್ರೊಲ್ ಬಂಕ್ ನಲ್ಲಿ ಮಾರಾಮಾರಿ: ಬಿಸಿ ಮುಟ್ಟಿಸಿದ ಪೊಲೀಸರು

ಬೆಳಗಾವಿಯಲ್ಲಿ ಪೆಟ್ರೋಲ್, ಡೀಸಲ್ ಕೊರತೆ ಉಂಟಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿ ಸುದ್ದಿ ಹರಡಾಡಿದ ಪರಿಣಾಮ ಎಲ್ಲಾ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ವಾಹನ ಸವಾರರು ಮುಗಿಬಿದಿದ್ದರು. ಈ ವೇಳೆ ಹೋಡೆದಾಡಿಕೊಂಡ ಯುವಕರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಗಾವಿ ನಗರದ ರಾಮದೇವ ಹೋಟೆಲ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ನಡೆದ ಭೀಕರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಮುಂದೆ ಪೆಟ್ರೋಲ್ ಬಂಕ್‌ಗಳ ಬಳಿ ಇಂತಹ …

Read More »

ಚಿಕ್ಕೋಡಿಯ ಜಿಲ್ಲಾ ಕೋರ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

​ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಮಹಿಳಾ ದಿನಾಚರಣೆ ಹಾಗೂ ಕಾನೂನು ಮತ್ತು ಆಧ್ಯಾತ್ಮ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದು ನನಗೆ ಅತ್ಯಂತ ಸಂತಸ ಮತ್ತು ತೃಪ್ತಿ ನೀಡಿದ ಅನುಭವ ವಾಗಿದೆ. ​ಕಾನೂನು ಎನ್ನುವುದು ಸಮಾಜದ ಶಿಸ್ತಿನ ಕವಚವಾದರೆ, ಆಧ್ಯಾತ್ಮ ಎನ್ನುವುದು ಬದುಕಿನ ಅಂತರಂಗದ ಬೆಳಕು. ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ್ದು ಕಾರ್ಯಕ್ರಮದ ವಿಶಿಷ್ಟತೆಯಾಗಿತ್ತು. ​ ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಎ. ಎಸ್. …

Read More »

ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ

ಮಮದಾಪುರ: ಕತ್ತಲದಿಂದ ಅಧರ್ಮ ಜ್ಯೋತಿ ಮಾಯವಾಗಿ ಬೆಳಕಿನಡೆಗೆ ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ ಎಂದು ನದಿ ಇಂಗಳಗಾಂವನ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು. ಮುರುಘೇಂದ್ರ ಶಿವಯೋಗಿಗಳು ಅಥಣಿಯಿಂದ ಅಂಕಲಗಿ ಅಡವಿಸಿದ್ದೇಶ್ವರ ಮಠದವರೆಗೆ ಪಾದಯಾತ್ರೆ ಮೂಲಕ ಸಂಚರಿಸುವ ಸಂದರ್ಭದಲ್ಲಿ ತೆಪ್ಪೋತ್ಸವ ನೆರವೇರಿಸಿದ ಕೊಳವಿ    ಗ್ರಾಮದ  ಗುರುಲಿಂಗ  ಜಂಗಮ  …

Read More »

ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಹೊನ್ನಾಟದಲ್ಲಿ ಮಿಂದೆದ್ದ ಭಕ್ತಗಣ

ಮಲ್ಲಮ್ಮನ ಬೆಳವಡಿ: ಸಮೀಪದ ಪಟ್ಟಿಹಾಳ ಕೆ.ಬಿ.ಗ್ರಾಮದಲ್ಲಿ ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಅದ್ದೂರಿ ಹೊನ್ನಾಟ ಜರುಗಿತು. ತಳಿರು-ತೋರಣ ಹಾಗೂ ರಂಗೋಲಿ ಚಿತ್ತಾರಗಳಿಂದ ಗ್ರಾಮದ ಪ್ರಮುಖ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಗ್ರಾಮದ ಗುರು-ಹಿರಿಯರು ಅದ್ದೂರಿ ಹೊನ್ನಾಟಕ್ಕೆ ಚಾಲನೆ ನೀಡಿದರು. ವಿವಿಧ ವಾದ್ಯಮೇಳಗಳೊಂದಿಗೆ ಸಾಗಿದ ಹೊನ್ನಾಟದಲ್ಲಿ ಭಕ್ತರೆಲ್ಲ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮ ಸೇರಿ ಸವಟಗಿ, ಖೊದಾನಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ, ಭಕ್ತಿಯಿಂದ ದ್ಯಾಮವ್ವದೇವಿ ಹಾಗೂ ದುರ್ಗಾದೇವಿಯರಿಗೆ …

Read More »

ಕೇಂದ್ರ ಸರ್ಕಾರದಿಂದ ಜನಪರ ಯೋಜನೆಗಳು ಜಾರಿ

ಚಿಕ್ಕೋಡಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿ.ಎಂ ಆವಾಸ , ಜಲ ಜೀವನ, ಸ್ವಾಭಿಮಾನದ ಭಾರತ ಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರ ಜೀವನ ಮಟ್ಟದ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು. ಪಟ್ಟಣದ ಕೇಶವ ಕಲಾಭವನದಲ್ಲಿ ಕುಡಚಿ ಮಂಡಲ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡ ಮತ್ತು ಮಧ್ಯಮ …

Read More »

ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಬೆಳಗಾವಿ: ಕೆರೆಗಳ ಅಭಿವೃದ್ದಿಯಿಂದ ಮುಂಬರುವ ದಿನಗಳಲ್ಲಿ ಜನ ಜಾನುವಾರುಗಳಿಗೆ ಸಹಕಾರಿಯಾಗಲಿದೆ, ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ಯಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮಾಧವಪ್ರಭು ಅಭಿಪ್ರಾಯಪಟ್ಟರು.   ಜಿಲ್ಲೆಯ ಖಾನಾಪುರ ತಾಲೂಕಿನ ಹಲಶಿವವಾಡಿ ಗ್ರಾಮದಲ್ಲಿ ‘ಪ್ಯಾಸ್ ಫೌಂಡೇಶನ್’ ವತಿಯಿಂದ ಸಿಎಸ್‌ಆರ್ ಸಂಸ್ಥೆ ಮತ್ತು ಎಕೆಪಿ ಫೆರೋಕಾಸ್ಟ’ ಯೋಜನೆಯೊಂದಿಗೆ ಹಮ್ಮಿಕೊಂಡಿದ್ದ ಎರಡು ಕೆರೆಗಳ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ …

Read More »

ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್

ಚಿಕ್ಕೋಡಿ: ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ವದಂತಿ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಜಿಲ್ಲಾಡಳಿತ ಭರವಸೆ ನಡುವೆಯು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಿದ್ದು, ಬುಕ್ ಮಾಡಿದರೂ ಸಿಲಿಂಡರ್ ಪೂರೈಸುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳಿ ಬರುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಜ್ಯಕ್ಕೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಅಭಾವದ ವದಂತಿಯಿಂದ ಜನರು ತಮ್ಮ ಬಳಿ ಇರುವ ಹೆಚ್ಚುವರಿ ಸಿಲಿಂಡರ್ ತುಂಬಿಸಿಕೊಳ್ಳಲು ಗಣನೀಯ …

Read More »

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

ಚಿಕ್ಕೋಡಿ:  ಪಟ್ಟಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು,  ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ 14.48 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು. ಪಟ್ಟಣದ ಝಾರಿ ಗಲ್ಲಿ, ವಿಠ್ಠಲ ದಾಮೋದರ ನಗರ, ಆರ್. ಕೆ ಕಾಲೋನಿ, ಹುಡ್ಕೊ ಕಾಲೋನಿ, ಬಸವೇಶ್ವರ ನಗರ ಹಾಗೂ ಸಾಯಿ ಮಂದಿರ ಬಳಿ ಚರಂಡಿ, ಸೋಮವಾರ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತದಲ್ಲಿ 3 ಕೋಟಿ ರೂ.ವೆಚ್ಚದ ಕಾಮಗಾರಿಗೆ …

Read More »