Breaking News
Home / ಜಿಲ್ಲೆ / ಬೆಳಗಾವಿ / ನಿಪ್ಪಾಣಿ (page 3)

ನಿಪ್ಪಾಣಿ

ಅಭಿವೃದ್ಧಿಯೇ ನಮ್ಮ ಮೂಲಮಂತ್ರ ಸಚಿವೆ – ಶಶಿಕಲಾ ಜೊಲ್ಲೆ

ಚಿಕ್ಕೋಡಿ- ನಿಪ್ಪಾಣಿ ನಗರಸಭೆ ಕಾರ್ಯಾಲಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಜಯವಂತ ಬಾಟಲೆ ಹಾಗೂ ಉಪಾಧ್ಯಕ್ಷರಾದ  ನೀತಾ ಬಾಗಡಿ ಅವರ ಪದಗ್ರಹಣ ಸಮಾರಂಭ ನಡೆಯಿತು. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ  ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ  ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು. …

Read More »

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಹೇಳಿಕೆ

ಪೀರನವಾಡಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ವಿವಾದ ‌ವಿಚಾರ ಲಾಠಿ ಚಾರ್ಜ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಹೇಳಿಕೆ ಘಟನೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ ಈ ಬಗ್ಗೆ ಡಿಸಿ, ಎಸ್ ಪಿ ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೆವೆ ಕಾನೂನು ರೀತಿ ಕ್ರಮ ಕೈ ಗೊಳ್ಳಲು ಸೂಚನೆ ನೀಡುತ್ತೆನೆ ರಾಯಣ್ಣ ಅಭಿಮಾನಿಗಳ ಮೇಲೆ …

Read More »

ವೈದ್ಯ ಹಾಗೂ ಸಿಬ್ಬಂದಿಗೆ ಬೆದರಿಸಿ ಕೊರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿರುವ ಘಟನೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸಿಬ್ಬಂದಿಗೆ ಬೆದರಿಸಿ ಕೊರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಆಗ ವೈದ್ಯರು ಕೊವಿಡ್-19 ನಿಯಮಗಳ ಪ್ರಕಾರ ಗರ್ಭಿಣಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ಕೊರೊನಾ ಸೋಂಕು …

Read More »

ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ ಎಂದ ಸಚಿವೆ

ನಿಪ್ಪಾಣಿ –  ಪಟ್ಟಣದ ಹೊರವಲಯದಲ್ಲಿ ಗವಾನ ಗ್ರಾಮಕ್ಕೆ ಕೊವಿಡ್-೧೯ ಮುನ್ನಚ್ಚರಿಕೆ ಕ್ರಮವಾಗಿ ನಿರ್ಮಿಸಲಾದ ೫೦ ಹಾಸಿಗೆಗಳ ಕೊವಿಡ್ ಸೆಂಟರ್ ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ.  ಭಯಂಕರ ರೋಗವೊಂದು ಇಡೀ ಸಮಾಜವನ್ನು ಅಲ್ಲೋಲ ಕಲ್ಲೋಲವಾಗಿಸುತ್ತಿರುವ …

Read More »

ನಿಪ್ಪಾಣಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ!

ನಿಪ್ಪಾಣಿಯಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಮಿತ ಸಾಳವೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಯಗೌಡ ಕಲಗೌಂಡ ಕೆಳಗಿನಮಣಿ …

Read More »

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ, ನಿಪ್ಪಾಣಿಯ ಶ್ರೀ ವಿದ್ಯಾಮಂದಿರ ಶಾಲೆಯ ನೂತನ ಸಭಾಗೃಹ ನಿರ್ಮಾಣ ಕಾಮಗಾರಿ

ನಿಪ್ಪಾಣಿ :ಶೈಕ್ಷಣಿಕವಾಗಿ ಮಾತ್ರಲ್ಲ, ಶಿಕ್ಷಣೇತರ ಚಟುವಟಿಕೆಗಳೊಂದಿಗೆ ದೇಶದ ಭಾವೀ ಪ್ರಜೆಗಳ ಭವಿಷ್ಯ ಸಮೃದ್ಧಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು ಬಾಲ್ಯದಲ್ಲಿಯೇ. ವಿದ್ಯಾರ್ಥಿಯಾಗಿರುವಾಗಲೇ ಉತ್ತಮ ಶಿಕ್ಷಣದೊಂದಿಗೆ, ಶಿಕ್ಷಣೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದಲ್ಲಿ, ಮಗುವಿಗೆ ಸುಂದರ ಭವಿಷ್ಯ ನೀಡಲು ಸಾಧ್ಯ. ದೇಶದ ಸದ್ಭವಿಷ್ಯದ ಭವಿಷ್ಯವನ್ನು ಅತ್ಯುತ್ತಮವಾಗಿ ರೂಪಿಸುವ ಇಚ್ಛೆ! ಈ ನಿಟ್ಟಿನಲ್ಲಿ, ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ, ನಿಪ್ಪಾಣಿಯ ಶ್ರೀ ವಿದ್ಯಾಮಂದಿರ ಶಾಲೆಯ ನೂತನ ಸಭಾಗೃಹ ನಿರ್ಮಾಣ …

Read More »

ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ ಈ 19 ಜನರ ವಿರುದ್ಧ ಕೇಸ್ ದಾಖಲಾಗಿದೆ. ಲಾಕ್‍ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿಯೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು. ದಾಸಗಾಂವ – ಮಾಗಾಂವ – ಮೀರಜ್ …

Read More »

ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಮಹಿಳೆ

ನಿಪ್ಪಾಣಿ: ನಿನ್ನೆ ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಹಾಸನದ ಮಹಿಳೆ‌ಗೆ ಕೊನೆಗೂ ಮನೆಗೆ ತೆರಳು ಅನುಮತಿಯನ್ನು ನೀಡಲಾಗಿದೆ. ಕೊರೋನಾ ಹಿನ್ನೆಲೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮಹಾರಾಷ್ಟ್ರದಿಂದ ಹಾಸನಕ್ಕೆ ತೆರಳಲು ಅನುಮತಿ ಸಿಗದೆ ಇರದ ಕಾರಣ ಕೊಗನೊಳ್ಳಿ ಚೆಕ್ ಪೊಸ್ಟ್ ಸುಮಾರು ನಾಲ್ಕು ದಿನಗಳಿಂದ ಮಹಿಳೆ‌ ಮತ್ತು ಅವರ 15 ಸದಸ್ಯರ ಕುಟುಂಬ ಪರದಾಡುತ್ತಿದ್ದರು. ಊಟ ಮತ್ತು …

Read More »

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು

ನಿಪ್ಪಾಣಿ: ’ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು ಕಂಡುಬಂದಿದ್ದಾರೆ. ಕೇವಲ ರಾಯಬಾಗ ತಾಲ್ಲೂಕಿನಲ್ಲಿ ೧೮ ಜನರು ಮತ್ತು ಹುಕ್ಕೇರಿ ತಾಲ್ಲೂಕಿನಲ್ಲಿ ಒಬ್ಬರು ಒಳಗೊಂಡಿದ್ದಾರೆ. ಇತರೆ ತಾಲ್ಲೂಕುಗಳಲ್ಲಿ ಒಬ್ಬರೂ ಸೋಂಕಿತರು ಇಲ್ಲ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೨೩೪ ಜನರು ವಿದೇಶದಿಂದ, ೧೫೮೭೯ ಜನರು ಪರರಾಜ್ಯದಿಂದ ಮತ್ತು ೧೦೭೧೮ ಜನರು ಹೊರಜಿಲ್ಲೆಗಳಿಂದ ಬಂದಿದ್ದು ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ. …

Read More »

ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿ……..

ಬೆಳಗಾವಿ – ಮಹಾರಾಷ್ಟ್ರದಿಂದ ಔಷಧಿ ಸಾಗಿಸುವ ಕಂಟೇನರ್ ನಲ್ಲಿ ಕದ್ದು ಮುಚ್ವಿ ಕರ್ನಾಟಕದ ಗಡಿ ಪ್ರವೇಶ ಮಾಡಲು ಪ್ರಯತ್ನಿಸಿದ್ದ 24 ಜನರನ್ನು ತಡೆದಿರುವ ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿಯಾಗಿದ್ದಾರೆ . ಏಪ್ರಿಲ್ 16 ರಂದು ಔಷಧಿ ಸಾಗಿಸುವ ಕಂಟೇನರ್ ಕಾಗಲ್ ಬಳಿ ಕರ್ನಾಟಕದ ಗಡಿ ಪ್ರವೇಶಿಸುವಾಗ ಕಂಟೇನರ್ ತಡೆದು ಕಂಟೇನರ್ ಚೆಕ್ ಮಾಡಿದಾಗ 24 ಜನರು ಔಷಧಿ ಭಾಕ್ಸ್ ಗಳ ನಡುವೆ ಮುಚ್ಚಿ ಕುಳಿತುಕೊಂಡಿದ್ದರು ಅವರನ್ನು ವಶಕ್ಕೆ …

Read More »