Home / ಜಿಲ್ಲೆ / ಉಡುಪಿ (page 2)

ಉಡುಪಿ

ಮಲ್ಪೆ ಬಂದರಿನಲ್ಲಿ ಬಲೆಗೆ ಬಿದ್ವು 750, 250 ಕೆ.ಜಿ.ತೂಕದ ಮೀನುಗಳು- ಕ್ರೇನ್ ಬಳಸಿ ಸಾಗಣೆ

ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಮೀನುಗಳು ಬಲೆಗೆ ಬಿದ್ದಿವೆ. ಭಾರೀ ಗಾತ್ರದ ಎರಡು ತೊರಕೆ ಮೀನುಗಳು ಆಳಸಮುದ್ರ ದೋಣಿಯ ಮೀನುಗಾರರ ಬಲೆಗೆ ಬಿದ್ದಿವೆ. ಒಂದು ಮೀನು 750 ಕೆ.ಜಿ. ಹಾಗೂ ಇನ್ನೊಂದು 250 ಕೆ.ಜಿ. ತೂಗುತ್ತಿದೆ. ಮಲ್ಪೆ ಸುಭಾಸ್ ಸಾಲಿಯಾನ್ ಅವರ ಮಾಲೀಕತ್ವದ ನಾಗಸಿದ್ಧಿ ದೋಣಿಯ ಬಲೆಗೆ ಬಿದ್ದಿರುವ ಈ ಮೀನುಗಳನ್ನು ಬಂದರಿನಲ್ಲಿ ಕ್ರೇನ್ ಮೂಲಕ ಇಳಿಸಲಾಯಿತು. ತೊರಕೆ ಮೀನು ತುಂಬಾ ರುಚಿಕರವಾಗಿದ್ದು, ವಿದೇಶಗಳಿಗೆ ರಫ್ತಾಗುತ್ತದೆ. ಬೃಹತ್ …

Read More »

ಕಾಪು ಬೀಚ್‍ಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಉಡುಪಿ: ಜಿಲ್ಲೆಯ ಕಾಪು ಬೀಚ್‍ಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಬೆಂಗಳೂರಿನ ಹೇಸರಘಟ್ಟದಿಂದ ಐವರು ಯುವಕರ ತಂಡ ಉಡುಪಿ ಪ್ರವಾಸಕ್ಕೆ ಬಂದಿತ್ತು. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಸಂಜೆ ಕಾಪು ಬೀಚ್‍ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಾಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. …

Read More »

50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ

ಉಡುಪಿ ; ಮಹಿಳೆಯೊಬ್ಬರು ರಿಕ್ಷಾದಲ್ಲಿ ಮರೆತು ಬಿಟ್ಟುಹೋದ 50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ ಅಂಬಲಪಾಡಿಯ ಜಯ ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ. ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ರಿಕ್ಷಾದಿಂದ ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಮಹಿಳೆಯನ್ನು ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ …

Read More »

ಕಡಲ ಒಡಲಲ್ಲಿ ನಾಪತ್ತೆಯಾಗುತ್ತಿರುವ ಮೀನುಗಾರರಿಗೆ ಬೇಕಿದೆ ಉಪಗ್ರಹ ಆಧಾರಿತ ನೇವಿಗೇಷನ್‌ ವ್ಯವಸ್ಥೆ..

ಉಡುಪಿ: ಅರಬ್ಬೀ ಸಮುದ್ರ ಕಳೆದ ಒಂದೆರಡು ವರ್ಷಗಳಿಂದ ಆತಂಕದ ಸಮುದ್ರ ಆಗ್ತಿದೆ. ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ದಡದಿಂದ ಹೊರಟು 15 ದಿನ ಸಮುದ್ರದಲ್ಲಿ ಜೀವನ ಮಾಡೋ ಕಡಲ ಮಕ್ಕಳು ಇದೀಗ ಉಪಗ್ರಹ ಆಧಾರಿತ ನೇವಿಗೇಷನ್‌ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಮೋದಿ ಸರ್ಕಾರದ ಮೀನುಗಾರಿಕಾ ಸಚಿವಾಲಯದ ಕದ ತಟ್ಟಿದ್ದಾರೆ. ಅರಬ್ಬೀ ಸಮುದ್ರ ಒಂದು ಕಾಲದಲ್ಲಿ ಸೇಫ್‌ ಸಮುದ್ರ ಎಂಬ ಖ್ಯಾತಿ ಪಡೆದಿತ್ತು. ಕಡಲ ಮಕ್ಕಳು ಕಸುಬು ಮಾಡಿ …

Read More »

ಡಿಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ -ಸಂಸದೆ ಶೋಭಾ

ಉಡುಪಿ: RR ನಗರದಿಂದ ದಿ. ಡಿಕೆ ರವಿ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸ್ಪರ್ಧೆಗೆ ಇಳಿದಿರುವ ವಿಚಾರಕ್ಕೆ ಸಂಬಂಧಿಸಿ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶೋಭಾ ಡಿಕೆ.ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿಕೆ ರವಿ ಓರ್ವ ದಕ್ಷ ಅಧಿಕಾರಿಯಾಗಿದ್ರು, ಆದ್ರೆ ಇಂದು ಅವರು ನಮ್ಮ ಜೊತೆಯಲಿಲ್ಲ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ …

Read More »

ಪ್ರೀಮಿಯರ್ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಅಪಾಟ್ರ್ಮೆಂಟ್‍ನ ಹಿಂಭಾಗದ ತಡೆಗೋಡೆ ಕುಸಿದಿದೆ.

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿರುವ ಪ್ರೀಮಿಯರ್ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಅಪಾಟ್ರ್ಮೆಂಟ್‍ನ ಹಿಂಭಾಗದ ತಡೆಗೋಡೆ ಕುಸಿದಿದೆ. ಕಮರ್ಷಿಯಲ್ ಕಂಪ್ಲೆಕ್ಸ್ ಆಗಿರುವ ಪ್ರೀಮಿಯರ್ ಕಟ್ಟಡದ ಜೊತೆ ವಸತಿ ಸಮುಚ್ಛಯ ಸಹ ಇರುವುದರಿಂದ ಅಲ್ಲಿನ ಎಲ್ಲ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇದೇ ಕಟ್ಟಡದಲ್ಲಿ ವಾಸವಿದ್ದು, ಸದ್ಯ ಕಾಲೇಜುಗಳು ತೆರೆಯದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಮ್ಮಿ ಇದೆ. …

Read More »

ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ,

ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದ ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ …

Read More »

ದುಷ್ಕರ್ಮಿಗಳು ಎಸ್‍ಪಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಸೃಷ್ಟಿ

ಉಡುಪಿ: ದುಷ್ಕರ್ಮಿಗಳು ಎಸ್‍ಪಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಸೃಷ್ಟಿ ಮಾಡಿದ್ದಾರೆ. ಕೋಸ್ಟ್ ಗಾರ್ಡ್ ಎಸ್‍ಪಿ ಚೇತನ್ ಕುಮಾರ್ ಹೆಸರಿನಲ್ಲಿ ಅಕೌಂಟ್ ತೆರೆದಿರುವ ಕಿಡಿಗೇಡಿಗಳು ದುಷ್ಕೃತ್ಯ ಎಸಗುವ ಹುನ್ನಾರ ಮಾಡಿದ್ದರು. ಕೋಸ್ಟಲ್ ಎಸ್‍ಪಿ ಎಸ್‍ಪಿ ಸಿಂಗ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಿ, ಚೇತನ್ ಕುಮಾರ್ ಅವರ ಫೋಟೋ ಬಳಸಲಾಗಿತ್ತು. ಇದಾಗಿ ಕೇವಲ ಅರ್ಧಗಂಟೆಯಲ್ಲಿ ದುಷ್ಕೃತ್ಯ ಬೆಳಕಿಗೆ ಬಂದಿದೆ. ಉಡುಪಿಯ ಮತ್ತು ಬೆಂಗಳೂರಿನ ಸೈಬರ್ ಕ್ರೈಂಗೆ ಎಸ್‍ಪಿ ಚೇತನ್ ಕುಮಾರ್ ದೂರು …

Read More »

ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ

ಉಡುಪಿ: ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನನ್ನು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಲಾಗುತ್ತದೆ. ಬೋಟ್‍ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಖಾಲಿ ಮಾಡಲಾಗುತ್ತದೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ನೀರಿನಲ್ಲಿ ಇದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಬಂದಿದೆ. ಮೀನು ಖಾಲಿ ಮಾಡುವ ಸಂದರ್ಭ ಗೂಡ್ಸ್ ಟೆಂಪೋವನ್ನು ಬೋಟಿಗೆ …

Read More »

ಒಂದು ಕೋಟಿ ರೂ. ಸಾಲ ಮಾಡಲು ಮುಂದಾಗಿದೆ.ದಉಡುಪಿ ಶ್ರೀಕೃಷ್ಣ ಮಠ

ಉಡುಪಿ: ಕೊರೊನಾ ಸಂಕಷ್ಟ ಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠ ಸಾಲ ಮಾಡಲು ಮುಂದಾಗಿದೆ. ಮಠದ ನಿರ್ವಹಣೆಗೆ ಒಂದು ಕೋಟಿ ರೂ. ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಕೃಷ್ಣಮಠ ಸಾಲ ಮಾಡಲು ಮುಂದಾಗಿದ್ದು ಮಠದ ಭಕ್ತರಿಗೆ ನೋವುಂಟು ಮಾಡಿದೆ. ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಮಠ ಕಳೆದ ಐದು ತಿಂಗಳಿಂದ ತೆರೆದಿಲ್ಲ. ಯಾವುದೇ ಧಾರ್ಮಿಕ ಸೇವೆ ನಡೆಯದೆ ಆರ್ಥಿಕ ಚಟುವಟಿಕೆ ಆರಂಭವಾಗಿದೆ. ದಿನಕ್ಕೆ ಒಂದೂವರೆ ಲಕ್ಷ ರೂ. ಖರ್ಚು ಬರುತ್ತಿದೆ. ಈ ಬಗ್ಗೆ …

Read More »