Breaking News

ಪೋಲೀಸರ ಕಣ್ತಪ್ಪಿಸಿ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಬಂದ ವಾಟಾಳ್ ನಾಗರಾಜ್

Spread the love

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪೋಲೀಸರ ಕಣ್ತಪ್ಪಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಕನ್ನಡದ ಪರ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ಬಂದಿದ್ದಾರೆ.

ಈ ಕುರಿತಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸುದ್ದಿಗಾರರು ನಿಮ್ಮನ್ನ ಪೋಲೀಸರು ಬೆಳಗಾವಿಗೆ ಆಗಮಿಸಲು ಬಿಡುವುದಿಲ್ಲ ಹಿರೆ ಬಾಗೇವಾಡಿಯಲ್ಲೆ ಬಂಧಿಸುತ್ತಾರೆ. ಹೇಗೆ ಆಗಮಿಸುವಿರಿ ಎಂದಿದ್ದರು. ಈ ಸಾರಿ ಹೇಗಾದರು ಸರಿಯೇ ಬೆಳಗಾವಿ ಸುವರ್ಣ ಸೌಧದ ಮುಂದೆ ಹೋರಾಟ ನಡೆಸಿಯೇ ತೀರುತ್ತೇನೆ ಎಂದಿದ್ದ ವಾಟಾಳರು ಪೋಲೀಸರ ಕಣ್ತಪ್ಪಿಸಿ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣ ಸೌಧಕ್ಕೆ ಬಂದಿಳಿದರು.

ಸರ್ಕಾರದ ವಿರುದ್ದ ವಾಟಾಳ್ ಗುಡುಗು

ಕರೋನಾ ಕೈಬಿಟ್ಟು ಸರ್ಕಾರ ಜನರ ಪ್ರಾಣ ಉಳಿಸದೆ ಜನರು ಸಾಯುತ್ತಿದ್ದರು ಸುಮ್ಮನಿದೆ ಎಂದರು.

ಉತ್ತರ ಕರ್ನಾಟಕದ ಅಬಿವೃದ್ದಿ ಹಾಗು ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ