Breaking News

ನೀರು ಪೂರೈಕೆ ಯೋಜನೆ ಪ್ರಗತಿ ಪರಿಶೀಲನೆ

Spread the love

ಬೆಳಗಾವಿ: ತಾಲ್ಲೂಕಿನ ತುಮ್ಮರಗುದ್ದಿ, ಕುಂದರಗಿ, ಬಸವಸನಕೊಳ್ಳ ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಮಂಗಳವಾರ ಭೇಟಿ ನೀಡಿದರು.

ಮಂಡಳಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಸೆ. 15ರಂದು ಬೆಂಗಳೂರಿನಲ್ಲಿ ಮಂಡಳಿ ಸಭೆ ನಡೆಯಲಿದೆ. ಮಂಡಳಿತ ಅಧ್ಯಕ್ಷರೊಂದಿಗೆ ಚರ್ಚಿಸಿ, ಅಭಿವೃದ್ಧಿ ಕೆಲಸಕ್ಕೆ ವೇಗ ನೀಡಲಾಗುವುದು. ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಮಂಡಳಿಯ ಎಇ ವಿ.ಎಲ್. ಚಂದ್ರಪ್ಪ, ಎಇಇ ಎಸ್.ಬಿ. ಹಾಲನ್ನವರ, ಸತೀಶ ಶಹಾಪುರಕರ ಇದ್ದರು.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ