Breaking News

ಒಪಿಡಿ ಚೀಟಿ ತರಲು ಹೇಳಿದ್ದಕ್ಕೆ ಬ್ರಿಮ್ಸ್‌ ವೈದ್ಯರ ಮೇಲೆ ಹಲ್ಲೆ – 7 ಜನ ಅರೆಸ್ಟ್

Spread the love

ಬೀದರ್: ಒಪಿಡಿ ಚೀಟಿ ತರಲು ಹೇಳಿದ್ದಕ್ಕೆ ಜಿಲ್ಲೆಯ ಬ್ರಿಮ್ಸ್ ವೈದ್ಯರ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.

ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ವಿಜಯ್ ಸಿಂಗ್ ಎಂಬಾತನನ್ನು ಸ್ನೇಹಿತರು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಒಪಿಡಿ ಚೀಟಿ ತರದೇ ಚಿಕಿತ್ಸೆ ಕೊಡಲು ಆಗಲ್ಲ ಅಂತ ನೈಟ್‌ಶಿಫ್ಟ್ ವೈದ್ಯ ತುಕಾರಾಂ ಅವರು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗಾಯಾಳು ಜೊತೆಗಿದ್ದ ಸ್ನೇಹಿತರು ಒಪಿಡಿ ಚೀಟಿ ಮತ್ತು ಎಂಎಲ್‌ಸಿಗೆ (ಮೆಡಿಕೋ ಲೀಗಲ್ ಕೇಸ್) ಯಾಕೆ ಬರೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ತುರ್ತು ಚಿಕಿತ್ಸಾ ಘಟಕದ ಒಳಗಡೆ ಹಲ್ಲೆ ಮಾಡಿ, ವೈದ್ಯರನ್ನು ಕೆಳಗಡೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ.

ಘಟನೆ ಖಂಡಿಸಿ ಬ್ರಿಮ್ಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನಿಲ್ಲಿಸಿದರು. ಅಲ್ಲದೇ 500ಕ್ಕೂ ಅಧಿಕ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಘಟನೆ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಗೆ ಡಾ.ತುಕಾರಾಂ ಭಾಲ್ಕೆ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಹಲ್ಲೆ ಗ್ಯಾಂಗ್‌ನ 7 ಜನರನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ