Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ 11 ಜನರಿಗೆ ಕೊರೋನಾ ಸೋಂಕು; ಮಾದಾವರ ಬಳಿ ಹೈ ಅಲರ್ಟ್

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ 11 ಜನರಿಗೆ ಕೊರೋನಾ ಸೋಂಕು; ಮಾದಾವರ ಬಳಿ ಹೈ ಅಲರ್ಟ್

Spread the love

ಬೆಂಗಳೂರು (ಮೇ 06); ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (Bangalore International Exhibition Centre) ಕೆಲಸ ಮಾಡುವ ಉತ್ತರಪ್ರದೇಶ ಮೂಲದ 11 ಜನರಲ್ಲಿ ಇದೀಗ ಕೊರೋನಾ ಸೋಂಕು ಪತ್ತೆಯಾಗಿದ್ದು ಮಾದಾವರ ಬಳಿ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರಿ ಮಾದಾವರ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಅನೇಕ ಉತ್ತರ ಭಾರತೀಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ  ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿದ ವೇಳೆ ಹೈ ಟೆಂಪರೇಚರ್ ಕಂಡುಬಂದಿತ್ತು. ಹೀಗಾಗಿ 11 ಜನರನ್ನು ನೆನ್ನೆ ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಇಂದು ಸಿವಿ ರಾಮನ್ ಆಸ್ಪತ್ರೆಗೆ ಇವರನ್ನು ರವಾನೆ ಮಾಡಲಾಗಿದ್ದು ಗಂಟಲ ದ್ರವ ಪರೀಕ್ಷೆ ವರದಿ ಬರುವವರೆಗೂ ಎಲ್ಲರಿಗೂ ಸಿವಿ ರಾಮನ್ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇಡಲು ನಿರ್ಧರಿಸಲಾಗಿದೆ.

ಇಲ್ಲಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸುಮಾರು 3,000ಕ್ಕೂ ಅಧಿಕ ಜನ ವಲಸೆ ಕಾರ್ಮಿಕರಿದ್ದಾರೆ. ಈ ಪೈಕಿ 1,000 ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗಿದ್ದು, ಇವರಿಗೆ ಹೈಟೆಂಪರೇಚರ್ ಬಂದ ಬೆನ್ನಲ್ಲೆ ಉಳಿದ ಎಲ್ಲಾ ಕಾರ್ಮಿಕರು ಬಿಐಇಸಿ ಖಾಲಿ ಮಾಡಿದ್ದಾರೆ.

ಒಂದೆ ಜಾಗದಲ್ಲಿ 3000 ಜನ ಇದ್ದರೆ ಸಮಸ್ಯೆ ಎದುರಾಗುವ ಭೀತಿಯಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಾ ವಲಸಿಗರ ವಿಳಾಸ ಹಾಗೂ ಮಾಹಿತಿ ಸಂಗ್ರಹಿಸಿ ನಿನ್ನೆ ರಾತ್ರಿಯೇ ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡಿ ಎಲ್ಲರನ್ನೂ ಅವರವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ. ಉಳಿದವರಿಗೆ ಅವರವರ ನಿವಾಸಗಳ ಬಳಿ ಥರ್ಮಲ್ ಸ್ಕ್ಯಾನಿಂಗ್ ಮಾಡಲು ಉದ್ದೇಶಿಸಲಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ