Breaking News
Home / ಜಿಲ್ಲೆ / ಬೆಳಗಾವಿ / ಬೈಲ್ ಹೊಂಗಲ್ / ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಲುಬಾಂದಾರಗಳನಿರ್ಮಾಣ

ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಲುಬಾಂದಾರಗಳನಿರ್ಮಾಣ

Spread the love

ಬೈಲಹೊಂಗಲ: ಬಾಂದಾರಗಳನ್ನು ನಿರ್ಮಾಣ ಮಾಡುವುದರಿಂದ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ  ಸಣ್ಣ ನೀರಾವರಿ ಇಲಾಖೆಯಲ್ಲಿ ಟಿಎಸ್‍ಪಿ ಅನುದಾನದಡಿ 40 ಲಕ್ಷ ರೂ ವೆಚ್ಚದಲ್ಲಿ ಚೆಕ್ ಡ್ಯಾಂ ಬಾಂದಾರ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಹೊಸ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಶುದ್ಧ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದುದು. ಗ್ರಾಮಾಂತರ ಭಾಗದ ಜನರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಈ ಘಟಕ ಆರಂಭಿಸಲಾಗುತ್ತಿದ್ದು ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗವುದು ಎಂದರು.

 ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ಬಾಗೇವಾಡಿ, ತಾ.ಪಂ ಸದಸ್ಯೆ ಲಕ್ಷ್ಮೀ ತಳವಾರ, ಉಪಾಧ್ಯಕ್ಷ ಬಸವರಾಜ ಉಳವಿ, ಎಪಿಎಂಸಿ ಸದಸ್ಯ ಬಿ.ಎಫ್. ಕೊಳದೂರ, ಬಿಜೆಪಿ ಮುಖಂಡ ರಾಯನಗೌಡ ಜಕ್ಕನ್ನವರ, ಪಿಡಿಓ ಶಿವಾನಂದ ಕಲ್ಲೂರ,    ಡಾ. ಸಂತೋಷ ಗೋವಿ,ಎಇಇ ಎಂ.ಆರ್. ಪಾಟೀಲ, ಗುತ್ತಿಗೆದಾರ ಬಾಳನಗೌಡ ಪಾಟೀಲ, ಬಿ.ಎಂ. ವಡ್ಡರ, ಸಿ.ಎಸ್. ಮುತ್ತಲಮರಿ, ಭರತೇಶ ಬಿಲ್ ಹಾಗೂ ಹಣಬರಟ್ಟಿ, ಹೊಸಕೋಟಿ  ಇದ್ದರು. 


Spread the love

About Laxminews 24x7

Check Also

SSLC ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ?

Spread the love ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹಣಬರಹಟ್ಟಿಯ ಸರ್ಕಾರಿ ಪ್ರೌಢಶಾಲೆ ಕೇಂದ್ರದಿಂದ ಸೋರಿಕೆಯಾಗಿದೆ ಎನ್ನಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗಣಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ