Breaking News
Home / ಜಿಲ್ಲೆ / ಜೀವದ ಹಂಗು ತೊರೆಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ ……….

ಜೀವದ ಹಂಗು ತೊರೆಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ ……….

Spread the love

ಮೂಡಲಗಿ : ದು ಜನರಿಕೊರೊನಾ ವೈರಸ್ ನಿಯಂತ್ರಣಕ್ಕೆ ಸೈನಿಕರಂತೆ ತಮ್ಮ ಜೀವದ ಹಂಗು ತೊರೆಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ  ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ  ತೇರದಾಳ ಹೇಳಿದರು.

ಸಮೀಪದ ಹಳ್ಳೂರ ಗ್ರಾಮದ ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ ತೇರದಾಳ ಅವರು ಹುಟ್ಟು ಹುಬ್ಬದ ಪ್ರಯುಕ್ತ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಉಡಿ ತುಂಬವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು.

ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ಅಲ್ಪ ಸಹಾಯಧನದಲ್ಲೆ, ತಮ್ಮ ಪ್ರಾಣ ಲೆಕ್ಕಿಸದೆ ಕೊರೊನಾ ಲಾಕ್ ಡೌನದ ಸಂದಿಗ್ಧ ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ತೆರಳಿ ಮನೆ ಮನೆಗೆ ಸುತ್ತಾಡಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಜನರಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ಜನ ಸಾಮಾನ್ಯರ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಅವರ ಸೇವೆ ನಿಜಕ್ಕೂ ಸ್ಮರಣಿಯವಾದುದ್ದು ಹಾಗೂ ಜನರ ಸೇವೆ ಮಾಡಲು ಅವಕಾಶ ನೀಡಿದಂತ ನನ್ನ ಎಲ್ಲ ಜನರಿಗೂ ಮತ್ತು ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಜಜಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೂಡಾ ಅಭಿನಂದನೆ ಸಲ್ಲಿಸಿದರು.
    
ಪಿಕೆಪಿಎಸ್ ಸದಸ್ಯ ಹಣಮಂತ ತೇರದಾಳ ಮಾತನಾಡಿ, ಮಹಿಳೆಯರಿಗೆ ಉಡಿ ತುಂಬುವ ಪದ್ದತಿ ಭಾರತೀಯ ಸಂಸ್ಕೃತಿಯ ಪ್ರತೀಕ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ನಮ್ಮ ಗ್ರಾಮದ 12 ಜನ ಆಶಾ ಕಾರ್ಯಕರ್ತೆಯರು ಹಾಗೂ 40 ಜನ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೋಲಿಸ್ ಇಲಾಖೆ ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಪತ್ರಕರ್ತರಿಗೆ ಸನ್ಮಾನಿಸಿದರು.

ಮೂಡಲಗಿ ಆರಕ್ಷಕ ಠಾಣೆಯ ಪಿಎಸ್‌ಆಯ್ ಮಲ್ಲಿಕಾರ್ಜುನ ಸಿಂಧೂರ , ತಾಪಂ ಸದಸ್ಯೆ ಸವಿತಾ ಡಬ್ಬನ್ನವರ, ಶಿವಲೀಲಾ ಪಾಟೀಲ್, ಉಷಾ ಲೋಕನ್ನವರ, ಶಿವಲೀಲಾ ಚಂಡಕಿ, ಮಾನಂದಾ ಹುಬ್ಬಳ್ಳಿ ಹಾಗೂ ಹಣಮಂತ ತಾಳಿಕೋಟಿ, ಸುರೇಶ ಕತ್ತಿ, ಬಿ ಜಿ ಸಂತಿ, ಮಲ್ಲಪ್ಪ ಛಬ್ಬಿ, ಶ್ರೀಶೈಲ ಬಾಗೋಡಿ, ಕುಮಾರ ಲೋಕನ್ನವರ, ರಾಘು ಕೊಕಟನೂರ, ಚನ್ನಪ್ಪ ಅಥಣಿ, ಶಿವು ಚಂಡಕಿ, ರಮೇಶ ಪಾಟೀಲ್, ಅಡಿವೇಪ್ಪ ಪಾಲಬಾಂವಿ, ಸಂಗಪ್ಪ ಪಟ್ಟಣಶೆಟ್ಟಿ, ಕೆಂಪ್ಪಣ್ಣ ಹುಬ್ಬಳ್ಳಿ, ಲಕ್ಕಪ್ಪ ಸಪ್ತಸಾಗರ, ಲಕ್ಷ್ಮಣ  ಗೌರವಗೋಳ, ಅಶೋಕ ತೇದಾಳ, ಸಂತೋಷ ಉಪಾದ್ಯ, ಬಾಳೇಶ ನೇಸೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ, ಡಿಸಿಎಂ, ರಾಹುಲ್ ಗಾಂಧಿಗೆ ಕೋರ್ಟ್ ಸಮನ್ಸ್‌

Spread the loveಬೆಂಗಳೂರು, (ಮಾರ್ಚ್ 28): ಕಳೆದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಚುನಾವಣೆ (Karnataka Assembly Elections 2023) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ