Breaking News
Home / ಜಿಲ್ಲೆ / ಬೆಂಗಳೂರು / ದೇಶದಲ್ಲೇ ಮೊದಲ ಬಾರಿಗೆ ಸಟ್ರಕ್ ವಾಹನದ ಮೂಲಕ ಔಷಧಿ ಸಿಂಪಡಣೆ ಕಾರ್ಯಕ್ಕೆ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ ಸಟ್ರಕ್ ವಾಹನದ ಮೂಲಕ ಔಷಧಿ ಸಿಂಪಡಣೆ ಕಾರ್ಯಕ್ಕೆ ಚಾಲನೆ

Spread the love

ಬೆಂಗಳೂರು, – ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ ಸಟ್ರಕ್ ವಾಹನದ ಮೂಲಕ ಔಷಧಿ ಸಿಂಪಡಣೆ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

ಭಾರತದಲ್ಲೇ ಮೊದಲು ಎನಿಸಿದ ಈ ವಾಹನದ ಮೂಲಕ ಸುಮಾರು 30 ರಿಂದ 45 ಅಡಿ ಅಂತರದವರೆಗೆ ರಾಸಾಯನಿಕಗಳನ್ನು ಬಳಸಿ ಸಿಂಪಡಣೆ ಮಾಡಿ ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಡೆಗಟ್ಟಬಹುದಾಗಿದೆ. ಮಹಾಲಕ್ಷ್ಮಿ ಲೇಔಟ್‍ನ ಶಾಸಕರೂ ಆಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಬಿಬಿಎಂಪಿ ಸದಸ್ಯ ರಾಜೇಂದ್ರಕುಮಾರ್ ಸೇರಿದಂತೆ ಮತ್ತಿತರರು ಚಾಲನೆ ನೀಡಿದರು.

ಪ್ರಾರಂಭಿಕ ಹಂತದಲ್ಲಿ 12 ಸಾವಿರ ಲೀಟರ್ ಸಾಮಥ್ರ್ಯದ ಈ ವಾಹನವು ಪ್ರಮುಖ ರಸ್ತೆಗಳಲ್ಲಿ ಅಂದರೆ 80 ರಿಂದ 100 ಅಡಿ ರಸ್ತೆ, 50 ರಿಂದ 60 ಅಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಿಂಪಡಣೆ ಮಾಡಲಿದೆ.

12 ಸಾವಿರ ಲೀಟರ್ ಸಿಂಪಡಣೆ ಸಾಮಥ್ರ್ಯವನ್ನು ಹೊಂದಿದ್ದು, ಸತತ 6 ಗಂಟೆಗಳ ಕಾಲ ಸಿಂಪಡಣೆ ಮಾಡಬಹುದಾಗಿದೆ. ರಸ್ತೆಯ ಎರಡೂ ಬದಿ ಸುಮಾರು 30 ರಿಂದ 45 ಅಡಿ ದೂರದವರೆಗೂ ಸಿಂಪಡಿಸಿ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಬಹುದು. ಕೇವಲ ಕೊರೊನಾ ಮಾತ್ರವಲ್ಲದೆ ಎಲ್ಲ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.

ಸೋಡಿಯಂ ಹೈಫೋ ಕ್ಲೋರೈಡ್ ರಾಸಾಯನಿಕ ವಸ್ತುವನ್ನು ಬಳಸಿ ಸಿಂಪಡಣೆ ಮಾಡಲಾಗುತ್ತದೆ. ಸದ್ಯ 12 ಸಾವಿರ ಲೀಟರ್ ಸಾಮಥ್ರ್ಯ ದ ಸಟ್ರಕ್ ವಾಹನವು ಕಾರ್ಯಾಚರಣೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ 18 ಸಾವಿರ, 8 ಸಾವಿರ, 5 ಸಾವಿರ ಮತ್ತು 3 ಸಾವಿರ ಸಾಮಥ್ರ್ಯದ ವಾಹನಗಳು ನಗರದಾದ್ಯಂತ ರಸ್ತೆಗಿಳಿಯಲಿವೆ.

ದೊಡ್ಡ ದೊಡ್ಡ ರಸ್ತೆಗಳಲ್ಲಿ 18, 12 ಸಾವಿರ ಲೀಟರ್ ಸಾಮಥ್ರ್ಯದ ವಾಹನಗಳು ಸಿಂಪಡಣೆ ಮಾಡಿದರೆ ಕಿರಿದಾದ ರಸ್ತೆಗಳಲ್ಲಿ 3 ಹಾಗೂ 5 ಸಾವಿರ ಲೀಟರ್ ವಾಹನಗಳು ಕಾರ್ಯಾಚರಣೆ ಮಾಡಲಿವೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋಪಾಲಯ್ಯ ಅವರು, ಸಟ್ರಕ್ ವಾಹನವು ಪ್ರಾಯೋಗಿಕವಾಗಿ ಮಹಾಲಕ್ಷ್ಮಿ ಲೇಔಟ್‍ನ ವಿವಿಧ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಮುಂದಿನ ದಿನಗಳಲ್ಲಿ ನಗರದಾದ್ಯಂತ ಹಂತ ಹಂತವಾಗಿ ಕಾರ್ಯಾಚರಣೆ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಬೇಸಿಗೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದೆ. ಹೀಗಾಗಿ ಇದನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಿಸುವ ಸದುದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಸಟ್ರಕ್ ವಾಹನದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 18 ಸಾವಿರ, 8, 5, 3 ಸಾವಿರ ಸಾಮಥ್ರ್ಯದ ವಾಹನಗಳು ರಸ್ತೆಗಳಿಯಲಿವೆ ಎಂದರು.

ಕೊರೊನಾ ನಿಯಂತ್ರಿಸುವುದು ಹೇಗೆ ಎಲ್ಲರ ಜವಾಬ್ದಾರಿಯಾಗಿದೆಯೋ ಅದೇ ರೀತಿ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗೋಪಾಲಯ್ಯ ಸಲಹೆ ಮಾಡಿದರು. ಸಟ್ರಕ್ ವಾಹನದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಕುಳಿತಲ್ಲೇ ಕಾರ್ಯಾಚರಣೆ ನಡೆಸಬಹುದಾಗಿದ್ದು, ನುರಿತ ತಜ್ಞರ ತಂಡ ಈ ವಾಹನವನ್ನು ಸಿದ್ಧಪಡಿಸಿದೆ.

ಈ ವೇಳೆ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಮುಖಂಡರಾದ ಜಯರಾಮಯ್ಯ, ಶ್ರೀನಿವಾಸ್, ಜಯಸಿಂಹ, ಶಿವಾನಂದಮೂರ್ತಿ, ಮಾಮಾ ವೆಂಕಟೇಶ್, ಬೆಂಗಳೂರು ನಗರ ಕಾರ್ಯದರ್ಶಿ ಗಂಗಹನುಮಯ್ಯ, ಮಹಾಲಕ್ಷ್ಮಿ ಲೇಔಟ್ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ರೈಲ್ವೆ ನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ