ಬೆಂಗಳೂರು, ಏ. 27: ಪಾದರಾಯನಪುರ ಗಲಭೆ ಪ್ರಕರಣ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ಕೋವಿಡ್ ಸೋಂಕಿನ ಪರೀಕ್ಷಾ ವರದಿ ಇವತ್ತು ಬರಲಿದೆ. ಪರೀಕ್ಷೆಗೆ ಒಳಪಟ್ಟಿರುವ ಸಿಬ್ಬಂದಿ ಕುರಿತು ಗೃಹ ಇಲಾಖೆ ಕೂಡ ಆತಂಕದಲ್ಲಿದೆ. ಕಳೆದ ಏಪ್ರಿಲ್ 19 ರಂದು ಕೊರೊನಾ ವೈರಸ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾದರಾಯನಪುರ ಪುಂಡರನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದಾಗ ಹಲ್ಲೆ ನಡೆದಿತ್ತು.
ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮೂಲಕ ಶಂಕಿತರನ್ನು ವಶಕ್ಕೆ ಪಡೆದು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದಾಗ 5 ಪುಂಡರಲ್ಲಿ ಸೋಂಕು ಪತ್ತೆಯಾಗಿದೆ. ಪಾದರಾಯನಪುರದಲ್ಲಿ ಈವರೆಗೆ ಒಟ್ಟು 25 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಹೀಗಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 186ಕ್ಕೂ ಹೆಚ್ಚು ಪೊಲೀಸರಿಗೆ ಕೂಡ ಕೊರೊನಾ ವೈರಸ್ ತಪಾಸಣೆಗೆ ಥ್ರೋಟ್ ಸ್ವಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರಿಗೆ ಮಾಡಲಾಗಿದ್ದ ಕೊರೊನ ತಪಾಸಣೆಯ ವರದಿ ಇವತ್ತು ಬರಲಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಕೂಡ ಸ್ವಲ್ಪ ಆತಂಕದಲ್ಲಿದ್ದಾರೆ