ಬೆಳಗಾವಿ-ಬೆಳಗಾವಿ ಜಿಲ್ಲಾ ಪಾಲಿಟಿಕ್ಸ್ ನಲ್ಲಿ ಈಗ ಮತ್ತೆ ಕತ್ತಿ ವರಸೆ ಆರಂಭವಾಗಿದ್ದು,ರಾಜ್ಯ ಸಭಾ ಸ್ಥಾನಕ್ಕೆ ಕತ್ತಿ ಸಹೋದರರು ಪಟ್ಟು ಹಿಡಿದಿದ್ದು,ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆಗೆ,ತಳಮಳ ಶುರುವಾಗಿದೆ.
ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಪೈಪೋಟಿ ನಡೆದಿದ್ದು. ರಾಜ್ಯಸಭೆ ಟಿಕೆಟ್‌ಗೆ ಮಾಜಿ ಸಂಸದ ರಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ.
ಇಂದು ಬೆಳಗಿನ ಜಾವ
ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಬೆಳಗಾವಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರದ ಅವಧಿ,ಜೂನ್ 25ಕ್ಕೆ ಮುಗಿಯುತ್ತದೆ. ಪ್ರಭಾಕರ್ ಕೋರೆಯವರ ರಾಜ್ಯಸಭಾ ಅವಧಿ ಅಂತ್ಯಗೊಳ್ಳಲಿದ್ದು ಈ ಸ್ಥಾನ ನಮಗೆ ಕೊಡಿ ಎಂದು ಕತ್ತಿ ಸಹೋದರರು ಪಟ್ಟು ಹಿಡಿದಿದ್ದಾರೆ.
ಜೂನ್ 2ನೇ ವಾರದಲ್ಲಿ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಮಧ್ಯೆ ಪೈಪೋಟಿ ಶುರುವಾಗಿದ್ದು,ಈ ವಿಷಯದಲ್ಲಿ ಯಾರು ಕಮಾಲ್ವಮಾಡ್ತಾರೆ,ಯಾರು ಕಂಗಾಲ್ ಆಗ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ