Breaking News
Home / ಜಿಲ್ಲೆ / ಆನಲೈನ್ ಮುಖಾಂತರ ವೆಬ್‌ಪೇಜ್‌ನಲ್ಲಿ ಶೀತಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಗೊಳಗಾದ ಪ್ರಕರಣಗಳ ವರದಿ ನೀಡಲು ಸೂಚನೆ

ಆನಲೈನ್ ಮುಖಾಂತರ ವೆಬ್‌ಪೇಜ್‌ನಲ್ಲಿ ಶೀತಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಗೊಳಗಾದ ಪ್ರಕರಣಗಳ ವರದಿ ನೀಡಲು ಸೂಚನೆ

Spread the love

ಬೆಳಗಾವಿ: ಜಿಲ್ಲೆಯಲ್ಲಿ kpme.karnataka.tech ವೆಬ್‌ಪೇಜಗೆ ಸಂಬಂಧಿಸಿದಂತೆ ಇನ್ನೂ ಸುಮಾರು ಖಾಸಗಿ ಆರೋಗ್ಯ ಸಂಸ್ಥೆ/ಆಸ್ಪತ್ರೆ/ ಕ್ಲೀನಿಕಗಳಿಗೆ User ID ಹಾಗೂ ಪಾಸ್ ವರ್ಡ್ ಸಿಗದೇ ಇರುವ ಬಗ್ಗೆ ಈ ಕಚೇರಿಗೆ ದೂರವಾಣಿ ಮುಖಾಂತರ ಮಾಹಿತಿ ಸ್ವೀಕೃತವಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿದ್ದಾರೆ.

ಆರೋಗ್ಯ ಸಂಸ್ಥೆ/ಆಸ್ಪತ್ರೆ/ಕ್ಲಿನಿಕ್‌ನವರು ತಮ್ಮ ಕೆ.ಪಿ.ಎಂ.ಇ ನೊಂದಣಿ ಪ್ರಮಾಣ ಪತ್ರ ಹಾಗೂ ದೂರವಾಣಿ ಸಂಖ್ಯೆ ಮತ್ತು ಪೂರ್ಣ ವಿಳಾಸದೊಂದಿಗೆ ಈ ಕಚೇರಿಯ ಕೆ.ಪಿ.ಎಂ.ಇ ವಿಭಾಗಕ್ಕೆ ಸಲ್ಲಿಸಿ User ID ಹಾಗೂ ಪಾಸ್ ವರ್ಡ್ ಪಡೆದುಕೊಳ್ಳಲು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹತೋಟಿಗೆ ತರುವ ಹಿನ್ನೆಲೆಯಲ್ಲಿ ಎಲ್ಲ ಶೀತಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಗೊಳಗಾದ ರೋಗಿಗಳ ಪತ್ತೆ ಹಚ್ಚುವ ನಿಟ್ಟಿನಲ್ಲಿ kpme.karnataka.tech ವೆಬ್ ಪೇಜನಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆ/ಆಸ್ಪತ್ರೆ/ಕ್ಲೀನಿಕಗಳಲ್ಲಿ ಉಪಚರಿಸಲಾದ ಶೀತಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಗೊಳಗಾದ ಪ್ರಕರಣಗಳ ವರದಿಗಳನ್ನು ಆನಲೈನ್ ಮುಖಾಂತರ ವೆಬ್‌ಪೇಜ್‌ನಲ್ಲಿ ಅಪ್‌ಲೋಡ್ ಮಾಡುವುದು ಸರ್ಕಾರದ ಆದೇಶದಂತೆ ಉಪಚರಿಸಿದ ಆಸ್ಪತ್ರೆ/ಕಿನಿಕ್‌ಗಳ ಜವಾಬ್ದಾರಿಯಾಗಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿದ್ದಾರೆ.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ