ಗುಡಿಬಂಡೆ : ತಾಲೂಕಿನ ಜಂಬಿಗೇಮರದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ.
ಗ್ರಾಮದ ನಿವಾಸಿಗಳು ಅಂಗನವಾಡಿಗೆ ಭೇಟಿ ನೀಡಿದಾಗ ಮಕ್ಕಳಿಗೆ ಕಳಪೆ ಆಹಾರ ವಿತರಿಸುವುದು ಬೆಳಕಿಗೆ ಬಂದಿದೆ.
ಕೇಂದ್ರದಲ್ಲಿಸಂಗ್ರಹಿಸಿರುವ ಒಡೆದ ಮೊಟ್ಟೆ ನೋಡಿ ಬೇಸರಗೊಂಡ ಅವರು, ಕಳಪೆ ಮಟ್ಟದ ಆಹಾರ ಸೇವಿಸುತ್ತಿರುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿ, ಇದನ್ನು ಕಂಡು ಕಾಣದಂತೆ ವರ್ತಿಸುವ ಸಿಡಿಪಿಒ, ಅಂಗನವಾಡಿ ಸಿಬ್ಬಂದಿ ನಿರ್ಲಕ್ಷತ್ರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.