Breaking News
Home / ಜಿಲ್ಲೆ / ಬೆಳಗಾವಿ / 48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ

48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ

Spread the love

ಬೆಳಗಾವಿ- ಬೆಳಗಾವಿ ನಗರದ ದಾನಶೂರ ರಿಂದ ಕೇಂದ್ರ ಸರ್ಕಾರಕ್ಕೆ ಕೋಟ್ಯಾಂತರ ರೂ ಅನುದಾನ ಕೊಡಿಸಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಈಗ ಮತ್ತೊಂದು ಮಹತ್ಕಾರ್ಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ .

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮೀಕ್ಷೆ ಮಾಡಿ 48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ ನೀಡಿದ್ದಾರೆ.

ಬೆಳಗಾವಿಯ ಮಹಾವೀರ ಭವನದಲ್ಲಿ ಕಿಟ್ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಭಯ ಪಾಟೀಲ, ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮೀಕ್ಷೆ ಮಾಡಿ 48 ಸಾವಿರ ಜನರನ್ನು ಗುರುತುಸಲಾಗಿದೆ ದಾನಿಗಳ ಸಹಯೋಗದೊಂದಿಗೆ 48 ಸಾವಿರ ಕಿಟ್ ಗಳನ್ನು ಸಿದ್ದಪಡಿಸಿ ಕ್ಷೇತ್ರದಲ್ಲಿ 32 ಕೇಂದ್ರಗಳನ್ನು ತೆರೆದು ಎಲ್ಲರಿಗೂ ಕಿಟ್ ಗಳನ್ನು ಹಂಚುತ್ತೇವೆ.ಡೋನರ್ ಗಳ ಸಹಾಯದಿಂದ ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡಲು ಸಾದ್ಯವಾಗಿದೆ ಎಂದರು

ಇಂದು ಸಾಂಕೇತಿಕ ವಾಗಿ ಕಿಟ್ ಗಳನ್ನು ಹಂಚಿದ್ದೇವೆ ನಾಳೆಯಿಂದ ಹಂಚಿಕೆ ಕೇಂದ್ರಗಳ ಮೂಲಕ 48 ಸಾವಿರ ಕಿಟ್ ಗಳನ್ನು ವ್ಯವಸ್ಥಿತ ವಾಗಿ ಮುಟ್ಟಿಸುತ್ತೇವೆ ಎಂದು ಅಭಯ ಪಾಟೀಲ ಹೇಳಿದ್ರು


Spread the love

About Laxminews 24x7

Check Also

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

Spread the loveಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ