Breaking News

ಎರಡನೇ ಮದ್ವೆಯಾದ ಪತಿ- ಪ್ರಶ್ನಿಸಿದ ಮೊದಲ ಪತ್ನಿ ಮೇಲೆ ಹಲ್ಲೆ………

Spread the love

ಬಾಗಲಕೋಟೆ: ಮೊದಲ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಮೊದಲ ಪತ್ನಿಯ ಮೇಲೆ ಪಾಪಿ ಪತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ.

ಬಾದಮಿಯ ಚಿಂಚಲಕಟ್ಟಿ ತಾಂಡಾದ ನಿವಾಸಿ ಶಂಕರ್ ಪಮ್ಮಾರ ಹಲ್ಲೆ ಮಾಡಿದ ಪತಿ ಎಂದು ಗುರುತಿಸಲಾಗಿದೆ. ಮೊದಲ ಪತ್ನಿ ಭಾರತಿ ಪಮ್ಮಾರಳನ್ನು ಮನಬಂದಂತೆ ಎಳೆದಾಡಿ ಥಳಿಸಿದ್ದಾನೆ. ಇದರ ಜೊತೆಗೆ ಪತ್ನಿ ಜೊತೆಗೆ ಇದ್ದ 15 ವರ್ಷದ ಮಗಳು ಸುಪ್ರೀತಾ ಮೇಲೂ ಹಲ್ಲೆ ಮಾಡಿದ್ದಾನೆ.

ಕುರಿ ವ್ಯಾಪಾರಿಯಾಗಿರುವ ಶಂಕರ್, ಭಾರತಿಯವರನ್ನು 20 ವರ್ಷದ ಹಿಂದೆ ಮದುವೆಯಾಗಿದ್ದ. ಮದುವೆಯಾಗಿ ಮಕ್ಕಳಿದ್ದರೂ ವಿಚ್ಛೇದನ ನೀಡದೆ ಮೂರು ತಿಂಗಳ ಹಿಂದೆ ಶಾರದಾ ಎಂಬವಳ ಜೊತೆ ಶಂಕರ್ ಮದುವೆಯಾಗಿದ್ದಾನೆ. ಈಗ ಆಕೆಯನ್ನು ಮನೆಗೆ ಕರೆತಂದಿದ್ದಾನೆ. ಇದರಿಂದ ಕೋಪಗೊಂಡ ಭಾರತಿ, ಶಂಕರ್ ಅನ್ನು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಕೋಪಗೊಂಡ ಶಂಕರ್ ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಈ ವಿಚಾರವಾಗಿ ಮೂರು ವರ್ಷದಿಂದ ಶಂಕರ್ ಮತ್ತು ಭಾರತಿ ನಡುವೆ ಜಗಳ ನಡೆಯುತ್ತಿತ್ತು. ಆದರೆ ಇಂದು ಈ ಜಗಳ ವಿಕೋಪಕ್ಕೆ ತಿರುಗಿ ಶಂಕರ್, ಭಾರತಿ ಕುತ್ತಿಗೆ, ನಡು, ಕೈಗೆ ಗಾಯವಾಗುವಂತೆ ಥಳಿಸಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆಕೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

About Laxminews 24x7

Check Also

ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Spread the love ಮುಧೋಳ : ಅತ್ಯಾಚಾರದಂತಹ ಹೇಯ ಕೃತ್ಯದಲ್ಲಿ ಯಾವುದೇ ಧರ್ಮದವರು ಭಾಗಿಯಾದರೂ ದೊಡ್ಡ ಅಪರಾಧ. ಅಂತಹ ಅಪರಾಧಿಗಳಿಗೆ ಕಠಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ