Breaking News
Home / ಜಿಲ್ಲೆ / ಶಿವಪುರಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿದ್ದೆಗೆಡಿಸುತ್ತಿರುವ ಕರಡಿ:

ಶಿವಪುರಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿದ್ದೆಗೆಡಿಸುತ್ತಿರುವ ಕರಡಿ:

Spread the love

ಶಿವಪುರಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿದ್ದೆಗೆಡಿಸುತ್ತಿರುವ ಕರಡಿ:ನಿದ್ರಿಸುತ್ತಿರುವ ಅರಣ್ಯ ಇಲಾಖೆ <-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಷ೯ದಿಂದ ಕರಡಿ ಕಾಣಿಸಿಕೊಳ್ಳೋ ಮೂಲಕ ಗ್ರಾಮಸ್ಥರ ರೈತರ ನಿದ್ದೆಗೆಡಿಸುತ್ತಿದೆ.ಆದರೆ ಅರಣ್ಯ ಇಲಾಖೆ ಕರಡಿ ಹಿಡಿಯದೇ ನಿದ್ರೆಗೆ ಜಾರಿದೆ ಎಂದು ಗ್ರಾಮಗಳ ಗ್ರಾಮಸ್ಥರು.

ರೈತರು.ಹಿರಿಯರು.ಸಂಘಟನೆಗಳಿಂದ ಇಲಾಖೆ ನಿಲ೯ಕ್ಷ್ಯವಿರುದ್ಧ ತೀವ್ರ ಆಕ್ರೋಶ ವೆಕ್ತವಾಗಿದೆ.ಕೈವಲ್ಯಾಪುರ ಗ್ರಾಮದ ದುರುಗಪ್ಪ.ಹೆಗ್ಡಾಳು.ಸಾಸಲಾವಡ.ಬಿ.ಬಿ.ತಾಂಡ.ಶಿವಪುರ.ಜಂಗಮಸೋವೇನಹಳ್ಳಿ ಗಳಲ್ಲಿಯ ರೈತರು ಕರಡಿದಾಳಿಗೊಳಗಾಗಿ ಖಾಯಂ ಅಂಗಹೂನರಾಗಿದ್ದಾರೆ.ಕೆಲವರಿಗೆ ಪರಿಹಾರವೂ ದೊರಕಿಲ್ಲ ರೈತರಿಗೆ ರೈತರ ಫಲಗಳಿಗೆ ಸೂಕ್ತ ಭದ್ರತೆ ಇಲ್ಲವಾಗಿದೆ.ಸದಾ ಜೀವವನ್ನು ಅಂಗೈಯಲ್ಲಿಡಿದು ಜೀವಿಸುವ ಆತಂಕದಲ್ಲಿರುವುದಾಗಿ ರೈತ ಮುಖಂಡ ನಾಗರಾಜ ಹಾಗೂ ಗ್ರಾಮದ ಹಿರಿಯರು ದೂರಿದ್ದಾರೆ

.ಈ ಸಂಬಂಧ ಅರಣ್ಯ ಇಲಾಖೆಯವರಿಗೆ ಸಾಕಷ್ಟುಬಾರಿ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ.ತೀರಾ ನಿಲ೯ಕ್ಷ್ಯತೋರುತ್ತಿದ್ದಾರೆಂದು ಶಿವಪುರ ಗ್ರಾಮ ಪಂಚಾಯ್ರಿ ವ್ಯಾಪ್ತಿಯ ವಿವಿದ ಗ್ರಾಮಗಳ ಹಿರಿಯರು ಸಂಘಟನೆಗಳ ಪದಾಧಿಕಾಗಳು ಆರೋಪಿಸಿದ್ದಾರೆ.ತೋಪ೯ಡಕೆಗೆ ಆರಂಭದಲ್ಲಿ ಕರಡಿ ಹಿಡಿಯುವ ಪ್ರಯತ್ನಗಳನ್ನು ಮಾಡಿದ್ದಾರೆ ನಂತರ ನಿಲ೯ಕ್ಯವಹಿಸಿದ್ದಾರೆ.ಹೊಲಗದ್ಧೆಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಭಯಹುಟ್ಟಿಸುವ ಕರಡಿಯಿಂದಾಗಿ ತಾವು ಕಂಗೆಟ್ಟಿದ್ದು ಅರಣ್ಯ ಇಲಾಖೆಯ ಸಿಬ್ಬಂಧಿ ಬಳಿ ತಮ್ಮಅಳಲು ತೋಡೊಕೊಂಡರೆ.ನ‍ವೂ ಹೆಂಡರು ಮಕ್ಕಳು ಇರೋರು..ಕರಡಿ ಹೊಡೆದಾಕಿ ನಾವೇನು ಮಾಡಕಾಗುತ್ತೆ ಅದು ಸಿಗುವಲ್ದು ನವಾ ಕೇಸು ಮುಚ್ಚಾಕ್ತೀವಿ ನೀವೇನು ತಲಿಕೆಡ್ಸಗಾಬೇಡ್ರಿ ಎಂದು ಬೇಜವ್ಬಾದಿರಿತನದಿಂದ ಅರಮಣ್ಯ ಇಲಾಖೆಯವರು ವಥಿ೯ಸುತ್ತಿದ್ದಾರೆಂದು ನೊಂದ ರೈತ ಅಳಲು ತೋಡೊಕೊಂಡಿದ್ದಾನೆ. ಕೈವಲ್ಯಾಪುರದಲ್ಲಿ ಕಂಡ ಕರಡಿ ಸೋಮವಾರ ಬೆಳಿಗ್ಗೆ ಕೈವಲ್ಯಾಪುರ ಗ್ರಾಮದ ಹೊರವಲಯದಲ್ಲಿರುವ ತಮ್ಮ ಹೊಲಕ್ಕೆ ತೆರಳಿದ್ದ ಉಕ್ಕಡದ ನಾಗರಾಜ ಮತ್ತು ಚೌಡಪ್ಪರಿಗೆ ಕರಡಿ ಕಂಡಿದೆ ಕೂಡಲೇ ಅಲ್ಲಿಂದ ಜೀವಭಯದಿಂದ ಓಡಿ ಬಂದಿದ್ದಾರೆ.ಇದು ಒಂದು ದಿನದ ಕಥೆಯಲ್ಲ ಒಂದು ಗ್ರಾಮಸ್ಥರ ಕಥೆಯಲ್ಲ.ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರ ದಿನ ನಿತ್ಯದ ವ್ಯೆತೆಯಾಗಿದೆ.ಜನ ಪ್ರತಿನಿಧಿಗಳು ಅಧಿಕಾರಿಗಳು ದಿವ್ಯ ನಿಲ೯ಕ್ಷ್ಯ ತೋರುತ್ತಿದ್ದಾರೆಂದು ಎಂದು ಗ್ರಾಮಸ್ಥರು ದೂರಿದ್ದಾರೆ. ಜಿಲ್ಲಾಧಿಕಾರಿಗಳ ಬಳಿ ದೂರು ಕರಡಿಯಿಂದ ತಮ್ಮನ್ನು ರಕ್ಷಿಸುವಂತೆ ತಾವು ಸಾಕಷ್ಟುಬಾರಿ ಅರಣ್ಯ ಇಲಾಖಾಧಿಕಾರಿಗಳ ಬಳಿ ಮನವಿ ಮಾಡಿದರೂ ಏನೂಪ್ರಯೋಜಮವಾಗಿಲ್ಲ. ಕಾರಣ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಗ್ರಾಮಸ್ಥರು ತಿಳಿಸಿದ್ದಾರೆ.ಅತೀ ಶೀಘ್ರದಲ್ಲಿಯೇ ಅರಣ್ಯ ಇಲಾಖೆಯಲ್ಲಾಗಿರುವ ಅವ್ಯವಹಾರಗಳು ಮತ್ತು ಅವರ ನಿಲ೯ಕ್ಷ್ಯತೆ.ಸಿಬ್ಬಂಧಿಗಳ ಅಧಿಕಾರ ದುರುಪಯೋಗ. ಕಥ೯ವ್ಯ ಲೋಪಗಳು. ಪರಿಹಾರ ನೀಡದ ಕುರಿತು ಸೂಕ್ತ ದಾಖಲುಗಳ ಸಮೇತ ಜಿಲ್ಲಾಧಿಕಾರಿಳ ಬಳಿ ದೂರು ನೀಡಲಾಗುವುದು ಮತ್ತು ಮಾಧ್ಯಮ ಹಾಗು ಪತ್ರಿಕೆಗಳ ಮೂಲಕ ಇಲಾಖೆಯ ನಿಜಬಣ್ಣ ಬಯಲು ಮಾಡಲಾಗುವುದು ಮತ್ತು ನಿಲ೯ಕ್ಷ್ಯತೆಯ ಕುರಿತು ದೂರು ನೀಡಲಾಗುವುದೆಂದು ಗ್ರಾಮಗಳ ಗ್ರಾಮಸ್ಥರು.ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ರೈತರು.ಶ್ರೀ ವಾಲ್ಮೀಕಿ ಸಂಘ.ಶ್ರೀ ವೀದಕರಿ ಯುವಕರ ಸಂಘ.ಕಾಮಿ೯ಕರ ಸಂಘಟನೆ. ವಿವಿದ ಮಹಿಳಾ ಸಂಘಟನೆಗಳು ಕನ್ನಡಪರ ಸಂಘಟನೆಗಳು ಈ ಮೂಲಕ ಎಚ್ಚರಿಸಿದ್ದಾರೆ.ಗ್ರಾಮದ ಹಿರಿಯರು.ವಂದೇ ಮಾತರಂ ಜಾಗೃತಿ ವೇದಿಕೆ.ಕನಾ೯ಟಕ ರಕ್ಷಣಾ ವೇದಿಕೆ.ಕನ್ನಡ ಸೇನೆ.ಕನಾ೯ಟಕ ರೈತ ಸಂಘ.ಧಮ೯ಸ್ಥಳ ಮಹಿಳಾ ಸಂಘ.ಚೌಡಮ್ಮಮಹಿಳಾ ಸಂಘ.ಸೇವಲಾಲ್ ಸಂಘ.ಮೂಕಾಂಭಿಕಾ ಮಹಿಳಾಸಂಘ ಸೇರಿದಂತೆ ಹಲವು ಸಂಘಟನೆಗಳ ಪಾದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

SSLC ಪರೀಕ್ಷೆ -2 ವಿಜ್ಞಾನ ವಿಷಯದ ಕೀ ಉತ್ತರ ಪ್ರಕಟ: ಆಕ್ಷೇಪಣೆಗಳಿದ್ದರೆ ಈ ವೆಬ್ ಸೈಟ್ ಗೆ ಭೇಟಿ ನೀಡಿ

Spread the love ಬೆಂಗಳೂರು: 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ವಿಜ್ಞಾನ ವಿಷಯದ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ