Breaking News

ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ

Spread the love

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಹೌದು. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಿಬಿಎಂಪಿ ‘ಪ್ಲಾನ್ ಬಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ತನ್ನ ಮೇಲಿನ ಹೊರೆಯನ್ನು ಬಿಬಿಎಂಪಿ ಇಳಿಸಿಕೊಳ್ಳುತ್ತಿದೆ. ಆದರೆ ಈ ಪ್ಲಾನ್ ಕೊರೊನಾ ರೋಗಿ ಮೇಲೆಯೇ ಎಲ್ಲಾ ನಿರ್ಧಾರವಾಗುತ್ತದೆ ಎನ್ನಲಾಗಿದೆ.

 

‘ಪ್ಲಾನ್ ಬಿ’ ಅಸಲಿಯತ್ತೇನು..?:
ಸರ್ಕಾರಿನಾ? ಖಾಸಗಿನಾ? ಆಸ್ಪತ್ರೆ ಆಯ್ಕೆ ವಿಚಾರವನ್ನು ರೋಗಿಗಳ ನಿರ್ಧಾರಕ್ಕೆ ಬಿಡುವುದು. ರೋಗಿಗಳ ರೋಗಿಗಳ ಮನೆಗೆ ಭೇಟಿ ನೀಡಲು ಡಿಸ್ಟಿಕ್ ಸರ್ವೆಯೆರ್ಸ್ ಆಫೀಸರ್ಸ್ ನೇಮಕ ಮಾಡುವುದು. ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯುವುದು. ಹಾಗೆಯೇ 50 ವರ್ಷ ಮೇಲ್ಪಟ್ಟ ಹಾಗೂ 10ವರ್ಷ ಕೆಳಗಿನ ಮಕ್ಕಳ ಮೇಲೆ ಹೆಚ್ಚು ನಿಗಾ ಇರಿಸುವುದಾಗಿದೆ.

ದೇಹದ ಉಷ್ಣಾಂಶ ಹೆಚ್ಚಿದ್ರೆ ಅವರನ್ನ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದು. ಸಾಂಸ್ಥಿಕ ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ನೀಡುವುದು. ವಾಣಿಜ್ಯ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸುವುದು. ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಬಳಸದಿರುವವರಿಗೆ ಹೆಚ್ಚೆಚ್ಚು ದಂಡ ವಿಧಿಸುವುದೇ ಬಿಬಿಎಂಪಿ ಕಂಡುಕೊಂಡ ಪ್ಲಾನ್ ಆಗಿದೆ.


Spread the love

About Laxminews 24x7

Check Also

ಸ್ಯಾಲರಿ ಹಣಕ್ಕೆ ಅತ್ತೆ, 1 ಕೋಟಿ ಮೌಲ್ಯದ ಫ್ಲಾಟ್‌ಗಾಗಿ ಮಾವನಿಂದ ಒತ್ತಾಯ – ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

Spread the loveಮುಂಬೈ: ಅತ್ತೆ-ಮಾವನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ  ಪುಣೆಯಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ