Home / ಜಿಲ್ಲೆ / ಕೊರೋನಾ 3ನೇ ಹಂತಕ್ಕೆ ಕಾಲಿಡದಂತೆ ಕ್ರಮ : ಸಚಿವ ಬೊಮ್ಮಾಯಿ

ಕೊರೋನಾ 3ನೇ ಹಂತಕ್ಕೆ ಕಾಲಿಡದಂತೆ ಕ್ರಮ : ಸಚಿವ ಬೊಮ್ಮಾಯಿ

Spread the love

ಬೆಂಗಳೂರು, ಏ. 9- ದೇಶದಲ್ಲಿ ಕೊರೋನ ಸೋಂಕು ಮೂರನೇ ಹಂತಕ್ಕೆ ಹೋಗದಂತೆ ತಡೆಯಲು ಹಾಗೂ ಸಮಯದಾಯಕ್ಕೆ ಹರಡದಂತೆ ನೋಡಿಕೊಳ್ಳಲು ಕೆಲವು ರಾಜ್ಯಗಳಲ್ಲಿ ಕಠಿಣ ಕ್ರಮ ಈಗಾಗಲೇ ಕೈಗೊಳ್ಳಲಾಗಿದ್ದು, ನಮ್ಮ ರಾಜ್ಯದಲ್ಲೂ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಮಾಡ್ತುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ತಡೆಗಟ್ಟಲು ಪರಿಣಿತರ ತಂಡ ನಿನ್ನೆ ಮುಖ್ಯಮಂತ್ರಿಯವರಿಗೆ ವರದಿ ನೀಡಿದೆ. ಈ ಬಗ್ಗೆ ಇವತ್ತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.ಪೊಲೀಸ್ ಪಾಸ್ ದುರ್ಬಳಕೆ ಆಗುತ್ತಿರುವ ಬಗ್ಗೆ ನಾನೇ ನಿನ್ನೆ ರಿಯಾಲಿಟಿ ಚೆಕ್ ಮಾಡಿದ್ದೇನೆ.

ಕೆಲವರು ಸಹಿ ಇಲ್ಲದ ಕಲರ್ ಜೆರಾಕ್ಸ್ ಪಾಸ್ ಮಾಡಿಸಿಕೊಂಡು ಓಡಾಡುತ್ತಿದ್ದಾರೆ.‌ ಅಂಥವರ ವಿರುದ್ದ ಕ್ರಮ ಕೈಗೊಂಡು ವಾಹನ ವಶಕ್ಕೆ ಪಡೆಯಲು ಸೂಚನೆ ನೀಡಿದ್ದೇನೆ.ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಲು ನಿರ್ದೇಶನ ನೀಡಿರುವುದಾಗಿ ಹೇಳಿದರು.

ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪಾಸ್ ನೀಡಿದ್ದೇವೆ ಎಂಬುದು ಸತ್ಯಕ್ಕೆ ದೂರವಾದದು. ಅಗತ್ಯ ಸೇವೆಗಳ ಸರಬರಾಜು ಸಂಬಂಧ ಕಾಂಗ್ರಸ್ ಕಾರ್ಯಕರ್ತರ ಅರ್ಜಿಗಳಿಗೂ ಪಾಸ್ ಗಳನ್ನೂ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರು


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ