Breaking News

Laxminews 24x7

ಮಾನವೀಯತೆ ಮರೆತ ಪಾಪಿ ತಂದೆ: ಸ್ವಂತ ಮಗಳ ಮೇಲೆಯೇ ದೌರ್ಜನ್ಯ — ತಾಯಿಯೂ ಸಾಥ್, ಬಂಧನ

ಬೆಳಗಾವಿ: ಸಮಾಜ ತಲೆತಗ್ಗಿಸುವಂತ ಅಮಾನವೀಯ ಘಟನೆಯೊಂದು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರಕ್ಷಿಸಬೇಕಾದ ತಂದೆಯೇ ಭಕ್ಷಕನಾಗಿ ತನ್ನ ಅಪ್ರಾಪ್ತ ಮಗಳ ಮೇಲೆಯೇ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬದಲ್ಲಿ ಈ ದಾರುಣ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಆರೋಪಿ ತಂದೆ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ …

Read More »

ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ತುಮಕೂರಿನ ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ  ದ್ರೌಪದಿ ಮುರ್ಮು ಅವರ‌ ಘನ ಉಪಸ್ಥಿತಿ ಹಾಗೂ ಪರಮಪೂಜ್ಯ  ಡಾ. ಸಿದ್ದಲಿಂಗ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ಅವರು, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿಯವರು, ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು, …

Read More »

ಅಂಚೆ ಕಚೇರಿ ದಿಢೀರ್ ಸ್ಥಳಾಂತರ: ಎಂ.ಕೆ. ಹುಬ್ಬಳ್ಳಿಯಲ್ಲಿ ಮಹಿಳೆಯರ ರೌದ್ರಾವತಾರ!

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಉಪ ಅಂಚೆ ಕಚೇರಿಯನ್ನು ಯಾವುದೇ ಪೂರ್ವ ಸೂಚನೆ ನೀಡದೆ ದಿಢೀರ್ ವರ್ಗಾವಣೆ ಮಾಡುತ್ತಿರುವುದನ್ನು ಖಂಡಿಸಿ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದರು. ಅಂಚೆ ಕಚೇರಿಯ ಮುಂದೆ ಜಮಾಯಿಸಿದ ನೂರಾರು ಮಹಿಳೆಯರು ಕಚೇರಿಗೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 50 ವರ್ಷಗಳಿಂದ ಇದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವ ಈ ಅಂಚೆ ಕಚೇರಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ …

Read More »

ಶ್ರೀ ರೇಣುಕಾ ಯಲ್ಲಮ್ಮನ ಸನ್ನಿಧಿಯಲ್ಲಿ ಅಕ್ರಮ ಸಾರಾಯಿ ಮಾರಾಟ: ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನ

ಶ್ರೀ ರೇಣುಕಾ ಯಲ್ಲಮ್ಮನ ಸನ್ನಿಧಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬ ನಿಖರ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಗುಡ್ಡ ಪ್ರದೇಶದ ವಿವಿಧ ಸ್ಥಳಗಳಲ್ಲಿ ಸಮನ್ವಯಿತ ಕಾರ್ಯಾಚರಣೆ ಕೈಗೊಂಡು, ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಕ್ರಮ ಸಾರಾಯಿ ಮತ್ತು ಸಂಬಂಧಿತ ಸಾಮಗ್ರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಆರೋಪಿಗಳ ವಿರುದ್ಧ ಸಂಬಂಧಿತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು …

Read More »

ಬೆಳಗಾವಿ ಹಾಲು ಸಂಘಕ್ಕೆ 12.59 ಕೋಟಿ ರೂ. ಲಾಭ, ಬೆಳಗಾವಿಗೆ ಮೆಗಾ ಡೈರಿ: ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ (ಕೆಎಂಎಫ್) 2025-26 ಆರ್ಥಿಕ ವರ್ಷದಲ್ಲಿ 12 ಕೋಟಿ ರೂ. 59 ಲಕ್ಷ ನಿಕರಿ ಲಾಭ ಗಳಿಸಿದ್ದು, 510 ಕೋಟಿ ರೂ. ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಮತ್ತು ಬೆಳಗಾವಿಗೆ ಮೆಗಾ ಡೈರಿ ನಿರ್ಮಾಣ ಮಾಡಲು ಈಗಾಗಲೇ ಒಂದು ಯೋಜನೆ ರೂಪಿಸಿದೆ ಎಂದು ಬೆಮುಲ್‌ ಅಧ್ಯಕ್ಷ, ಶಾಸಕಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ನಗರದ ಖಾಸಗಿ ಹೋಟೆಲ್‌ ನಲ್ಲಿ ಸುದ್ಧಿಗೋಷ್ಠಿಯಲ್ಲಿ …

Read More »

ಯಮಕನಮರಡಿ ಬಳಿ ದುರಂತ – 6 ಯುವಕರು ಈಜಲು ಹೋಗಿ 2 ಜನರ ದುರ್ಘಟನೆ ಮರಣ

ಯಮಕನಮರಡಿ ಸಮೀಪದ ಸಣಿಪ್ ಪ್ರದೇಶದಲ್ಲಿರುವ ಹೊಳೆಗೆ ಈಜಲು ತೆರಳಿದ್ದ 6 ಯುವಕರಲ್ಲಿ ಇಬ್ಬರು ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಉಳಿದ 4 ಯುವಕರು ಅತೀವ ಕಷ್ಟಪಟ್ಟು ತಮ್ಮನ್ನು ತಾವು ರಕ್ಷಿಸಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ. ಮಾಹಿತಿಯ ಪ್ರಕಾರ, ಯುವಕರು ಸ್ನೇಹಿತರಾಗಿ ಸೇರಿಕೊಂಡು ಹೊಳೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ನೀರಿನ ಆಳ ಹಾಗೂ ಪ್ರವಾಹದ ತೀವ್ರತೆ ಹೆಚ್ಚಿರುವುದರಿಂದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಮತ್ತು ರಕ್ಷಣಾ ತಂಡ ತಕ್ಷಣ …

Read More »

ಹುಕ್ಕೇರಿಯಲ್ಲಿ ಬೀದಿ ನಾಯಿಗಳ ರಕ್ಕಸ ದಾಳಿ: ರೈತ ಬಸವರಾಜ ಸ್ಥಿತಿ ಗಂಭೀರ, ಗ್ರಾ.ಪಂ ವಿರುದ್ಧ ಜನರ ಕಿಡಿ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ರೈತನೊಬ್ಬನ ಮೇಲೆ ಏಳೆಂಟು ನಾಯಿಗಳು ಭೀಕರವಾಗಿ ದಾಳಿ ಮಾಡಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಈಗ ರಸ್ತೆಗೆ ಇಳಿಯಲೂ ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. \ಹುಕ್ಕೇರಿ ತಾಲೂಕಿನ ಕುಲ್ಲೋಳಹಟ್ಟಿ ಗ್ರಾಮದಲ್ಲಿ ಮಂಗಳವಾರ ಭೀಕರ ಘಟನೆಯೊಂದು ಸಂಭವಿಸಿದೆ. ಎಂದಿನಂತೆ ಬೈಕ್ ಮೇಲೆ ಜಮೀನು ಕೆಲಸಕ್ಕೆ ಹೊರಟಿದ್ದ ಬಸವರಾಜ ಎಂಬುವವರ ಮೇಲೆ ಏಕಾಏಕಿ ಏಳೆಂಟು ಬೀದಿ ನಾಯಿಗಳು ಮುಗಿಬಿದ್ದಿವೆ. ನಾಯಿಗಳ ಹಿಂಡು ಬಸವರಾಜ ಅವರ …

Read More »

ಬಾಗಲಕೋಟೆ ರಣಕಣದಲ್ಲಿ ‘ಕುರಿಗಾಯಿ’ ಕಲಿ: ಸಿದ್ದರಾಮಯ್ಯಗೆ ‘ಟಗರು’ ಗಿಫ್ಟ್ ನೀಡಿದ ಅಭಿಮಾನಿಗಳು!

ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ವಿಶೇಷ ದೃಶ್ಯವೊಂದು ಕಂಡುಬಂದಿದೆ. ಮುಗಳೊಳ್ಳಿ ಗ್ರಾಮದಲ್ಲಿ ಎರಡನೇ ದಿನದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ. ಬಾಗಲಕೋಟೆ ಉಪಸಮರದ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಮುಗಳೊಳ್ಳಿ ಗ್ರಾಮದ ವೇದಿಕೆಯಲ್ಲಿ ಅವರಿಗೆ ಗ್ರಾಮಸ್ಥರು ‘ಟಗರು’ ಉಡುಗೊರೆ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕಂಬಳಿ ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಗುರುತಾಗಿರುವ …

Read More »

ಅಂಗನವಾಡಿ ಕಾರ್ಯಕರ್ತೆಯರ ಬೇಸಿಗೆ ರಜೆ ಕಡಿತಕ್ಕೆ ಆಕ್ರೋಶ: ಒಂದು ತಿಂಗಳ ರಜೆಗಾಗಿ ಬೆಳಗಾವಿ ತಾಲೂಕು ಸಮಿತಿ ಆಗ್ರಹ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಬಾರಿ ಬೇಸಿಗೆ ರಜೆ ಕಡಿತಗೊಳಿಸಿರುವ ಸರ್ಕಾರದ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಪೂರ್ಣ ಒಂದು ತಿಂಗಳ ರಜೆ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ತಾಲೂಕು ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗ್ರಹಿಸಿದೆ. ಬೆಳಗಾವಿ ತಾಲೂಕಿನ ಅಂಗನವಾಡಿ ನೌಕರರ ಸಂಘ (CITU) ಸರ್ಕಾರಕ್ಕೆ ಪ್ರಬಲ ಒತ್ತಾಯವೊಂದನ್ನು ಮಂಡಿಸಿದೆ. 2025ನೇ ಸಾಲಿನಲ್ಲಿ ನೀಡಲಾಗಿದ್ದ ಒಂದು ತಿಂಗಳ ಪೂರ್ಣ ಬೇಸಿಗೆ ರಜೆಯನ್ನು …

Read More »

ಧಾರವಾಡದ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಅಧಿಕಾರಿಗಳಿಗೆ ಶಾಸಕ ವಿನಯ್ ಕುಲಕರ್ಣಿ ತರಾಟೆ

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಕೆಂಡಾಮಂಡಲವಾಗಿದ್ದಾರೆ. ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಶಾಸಕರು, ಇಲಾಖೆಯ ನಿರ್ಲಕ್ಷ್ಯಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಧಾರವಾಡದಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ವೈಫಲ್ಯಗಳು ಅನಾವರಣಗೊಂಡವು. ಹಳ್ಳಿ ಹಳ್ಳಿಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ನಿತ್ಯ ನೂರಾರು ದೂರುಗಳು …

Read More »