ಗಾಂಧಿನಗರ: ಭಾರತದ 3ನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದ 1 TB (ಟೆರಾಬೈಟ್) (1,000 GB) ಮಾಹಿತಿಗಳು ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಬ್ಯಾಂಕ್ ಆಫ್ ಬರೋಡಾದ ಸಿಸ್ಟಮ್ ಹ್ಯಾಕ್ ಆಗಿ, ಲಕ್ಷಾಂತರ ಗ್ರಾಹಕರ ಸೂಕ್ಷ್ಮ ದಾಖಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜು.25 ರಂದು ಡಾರ್ಕ್ ವೆಬ್ ಅನ್ನು ಟ್ರ್ಯಾಕ್ ಮಾಡುವ Ransomware.live ಎಂಬ ಜಾಲತಾಣದಲ್ಲಿ ಈ ಮಾಹಿತಿ …
Read More »ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿದ್ದ ರಾಜಕೀಯ, ಡಿಕೆಶಿ ಸಿಎಂ ಆದ ಬಳಿಕ ಕಲುಷಿತವೇ? – ಶ್ರೀರಾಮುಲು
ಚಿತ್ರದುರ್ಗ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ದವಿದ್ದ ರಾಜಕೀಯ ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕಲುಷಿತಗೊಂಡಿದೆಯೇ? ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಎಸ್ ಟಿಸಮುದಾಯದ ಜಾಗೃತಿ ಸಮಾವೇಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಕಲುಷಿತ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2028ಕ್ಕೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸಹ ಹೇಳಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿತ್ತಾ? ಡಿಕೆಶಿ …
Read More »ಗೋವಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಆಗ್ರಹ
ಬೆಳಗಾವಿ : ಸಂರಕ್ಷಣೆ ದೃಷ್ಟಿಯಿಂದ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗೋಮಾತೆ ಗೌರವದ ಅಭಿಮಾನದ ಪ್ರಯುಕ್ತ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಒಟ್ಟು 1.80 ಲಕ್ಷ ಸಹಿ ಸಂಗ್ರಹ ಪೂರ್ಣಗೊಳಿಸಲಾಗಿದೆ. ಈ ಸಹಿಗಳ ಒಂದು ಪ್ರತಿಯನ್ನು ಸೋಮವಾರ ಸಾಂಕೇತಿಕವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಚನ್ನಮ್ಮ ವೃತ್ತದಿಂದ ಗೋವಿನ ಸಮೇತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಗೋ ಪ್ರೇಮಿಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಗೋವನ್ನು ರಾಷ್ಟ್ರಮಾತೆ ಎಂದು …
Read More »ನೆಮ್ಮದಿ ಹಾಳು ಮಾಡಿದ ಬಾರ್ ಬಂದ್‌ಗೆ ಆಗ್ರಹ
ಬೆಳಗಾವಿ : ಸ್ಪೋರ್ಟ್ಸ್ ಕ್ಲಬ್ ಹೆಸರಿನಲ್ಲಿ ನಡೆಸುತ್ತಿರುವ ಬಾರ್‌ನಿಂದ ತಮ್ಮೂರ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ. ಯುವಕರು ಜೀವನ ಕಳೆದುಕೊಳ್ಳುತ್ತಿದ್ದು, ಕೂಡಲೇ ಬಂದ್ ಮಾಡಿ ಎಂದು ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮಸ್ಥರು ಸೋಮವಾರ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕ ಬಹುಜನ ಚಳುವಳಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಇಲಾಖೆಗೆ ಏಳು ದಿನಗಳ ಗಡುವು ನೀಡಿದರು. ಗಡವಿನೊಳಗೆ ಬಂದ್ …
Read More »ಎಸ್‌ಐಆರ್ ಕೇಂದ್ರಗಳಿಗೆ ಆಯುಕ್ತರ ಭೇಟಿ
ಬೆಳಗಾವಿ :ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಾರಂಭವಾಗಿದ್ದು ಬೂತ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಣೆ ಮಾಡಿರುವ ಗಣತಿ ನಮೂನೆ (ಇಎಫ್)ಮತದಾರರು ನಿಗದಿತ ಸಮಯದಲ್ಲಿಯೇ ವಾಪಸ್ ನೀಡಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ. ನಗರದಲ್ಲಿರುವ ಬೆಳಗಾವಿ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಸ್‌ಐಆರ್ ಕೇಂದ್ರಗಳಿರುವ ಮತಗಟ್ಟೆಗಳು ಹಾಗೂ ಯುಸಿಎಫ್ ಯೋಜನೆ ಅಳವಡಿಸಲಿರುವ ಸ್ಥಳಗಳಿಗೆ ಭೇಟಿ ಪರಿಶೀಲಿಸಿದ ಬಳಿಕ ಮಾತನಾಡಿದ …
Read More »ಬೆಳಗಾವಿಗೆ ಡಾ.ಯತೀಂದ್ರ ಸಿದ್ದರಾಮಯ್ಯ ಆಗಮನ
ಬೆಳಗಾವಿ: ಇಲ್ಲಿ ಸುವರ್ಣ ವಿಧಾನಸೌಧದಲ್ಲಿ ಜು.28ರಂದು ಬೆಳಗ್ಗೆ 10.30ಕ್ಕೆ ಜರುಗಲಿರುವ ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಾ)ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ.’ ಜು.28ರಂದು ಬೆಳಗ್ಗೆ 6.25ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಬೆಳಗ್ಗೆ 8 ಗಂಟೆಗೆ ರಸ್ತೆ ಮಾರ್ಗವಾಗಿ ಬೆಳಗಾವಿ ಮಹಾನಗರಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಗತಿ ಪರಿಶೀಲನಾ …
Read More »ನಮ್ಮೂರಲ್ಲಿನ ಬಾರ್ ಮುಚ್ಚಿಸಿ: ಪ್ರತಿಭಟಿಸಿದ ಮಹಿಳೆಯರು
ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಮೊದಲು ದಾಬಾ ಅಂತ ಶುರು ಮಾಡಿ ನಂತರ ಅಲ್ಲಿಯೇ ಅನಧಿಕೃತ ಬಾರ್ ಶುರು ಮಾಡಲಾಗಿದೆ. ಇದನ್ನು ತಕ್ಷಣ ಬಂದ್ ಮಾಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು. ಇಂದು ಬೆಳಗಾವಿ ನಗರದ ಅಬಕಾರಿ ಕಚೇರಿ ಮುಂದೆ ಕರ್ನಾಟಕ ಬಹುಜನ ಚಳುವಳಿ ಸಂಘದ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಎನ್ನುವ ಹೆಸರಿನಲ್ಲಿ ಬಾರ್ ನಡೆಸಲಾಗುತ್ತಿದೆ. ಬಾರ್‌ನಿಂದ ಯುವಕರು ಹಾಳಾಗುತ್ತಿದ್ದಾರೆ. …
Read More »ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಿ: ಜಿಪಂ ಸಿಇಒ
ಬೆಳಗಾವಿ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ನಿರಂತರವಾಗಿ ಕೂಲಿ ಕೆಲಸ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಕುರಿತು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಜುಲೈ 27 …
Read More »ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೇಟೆಗಾರನಿಗೆ ಗುಂಡೇಟು
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಾಡುಹಂದಿಗಳನ್ನು ಬೇಟೆಯಾಡಿ ಕೊಂಡೊಯ್ಯತ್ತಿದ್ದ ಆರೋಪಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟು ನೀಡಿ ಬಂಧಿಸಿದ್ದಾರೆ. ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆಯ ಕಾಥೇರಿ ಗ್ರಾಮದ ಅನ್ವಿತ್ ಬಂಧಿತ ಆರೋಪಿ. ಈತನ ಜೊತೆಗೆ ಬಂದಿದ್ದ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರ್ಶನ್, ಮಂಜು ಮತ್ತು ಕಿರಣ್ ಪರಾರಿಯಾದ ಆರೋಪಿಗಳು. ಅರಣ್ಯ ಸಿಬ್ಬಂದಿ ಕಾರು ಅಡ್ಡಗಟ್ಟಿ ತಪಾಸಣೆ ನಡೆಸುವ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಕಾರು ಅಡ್ಡಗಟ್ಟುತ್ತಿದ್ದಂತೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ. …
Read More »ಪತ್ನಿ ಅಗಲಿಕೆ ನೋವಲ್ಲಿ ರಾತ್ರಿಯಿಡೀ ಕಣ್ಣೀರಿಟ್ಟು ಪತಿ ಸಾವು
ಹಾವೇರಿ: 45 ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದ ದಂಪತಿ ಸಾವಿನಲ್ಲಿಯೂ ಒಂದಾಗಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಾಂತಮ್ಮ ರಾತ್ರಿ ಸುಮಾರು 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಕ್ಕೊಳಗಾದ 70 ವರ್ಷದ ಜುಂಜಪ್ಪ ಬಾರ್ಕಿ ಹೆಂಡತಿ ಇಲ್ಲದೆ ಹೇಗೆ ಬದುಕಲಿ ಎಂದು ರಾತ್ರಿ ಪೂರ್ತಿ ಕಣ್ಣೀರು ಹಾಕುತ್ತ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಪತ್ನಿಯ ಸಾವಿನ ನೋವನ್ನು ತಡೆಯಲಾರದೆ …
Read More »
Laxmi News 24×7