Breaking News

Laxminews 24x7

ಮಗಳನ್ನು ಪ್ರೀತಿಸುವಂತೆ (Love) ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ.

ಬೆಂಗಳೂರು: ಮಗಳನ್ನು ಪ್ರೀತಿಸುವಂತೆ (Love) ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ. ಡೇವಿಡ್ ಕೊಲೆಯಾದ ಯುವಕ. ಮಂಜುನಾಥ್ ಎಂಬವರ ಮಗಳನ್ನು ಡೇವಿಡ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಒಂದೂವರೆ ವರ್ಷದ ಹಿಂದೆ ರಾಜಿ ಪಂಚಾಯ್ತಿಯೂ ನಡೆದಿತ್ತು. ಮಗಳ ತಂಟೆಗೆ ಬರದಂತೆ ಡೇವಿಡ್​ಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೂ ಡೇವಿಡ್ ತನ್ನ ಚಾಳಿಯನ್ನು ನಿಲ್ಲಿಸಿರಲಿಲ್ಲ. ಮದುವೆ ಮಾಡಿಕೊಡಿ ಇಲ್ಲವಾದ್ರೆ ಖಾಸಗಿ ಫೋಟೋಗಳನ್ನು (Private Photo) ರಿವೀಲ್ ಮಾಡುತ್ತೀನಿ ಎಂದು ಬೆದರಿಕೆ …

Read More »

ಮುಂಬೈ ಉಗ್ರರ ದಾಳಿಗೆ 15 ವರ್ಷ! ಎಲ್​ಇಟಿಯನ್ನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಇಸ್ರೇಲ್

ನವದೆಹಲಿ: ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ 26/11 (Mumbai 26/11 attack) ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿವೆ. ಈ ಕರಾಳ ದಿನದ ಸಂದರ್ಭದಲ್ಲಿ ಇಸ್ರೇಲ್ ಸರ್ಕಾರ (Isreal Government) ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಸ್ನೇಹಿ ರಾಷ್ಟ್ರಗಳಲ್ಲಿ ಒಂದಾಗಿರುವ ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೈಬಾ (Lashkar-e-Taiba) ಸಂಘಟನೆಯನ್ನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮಂಗಳವಾರ ಹೇಳಿಕೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಈಗಾಗಲೇ ಎಲ್​ಇಟಿಯನ್ನ …

Read More »

ಸಂಜು ವೆಡ್ಸ್ ಗೀತಾ-2 ಏಪ್ರಿಲ್ 1 ರಂದು ರಿಲೀಸ್;

ಸ್ಯಾಂಡಲ್‌ವುಡ್‌ ಸಂಜು ವೆಡ್ಸ್ ಗೀತಾ ಎರಡನೇ (Sanju Weds Geetha-2) ಭಾಗದ ಶೂಟಿಂಗ್ ಭರದಿಂದ ಸಾಗಿದೆ. ಕನಕಪುರ ರಸ್ತೆಯ ಫಾಮ್ ಹೌಸ್‌ನಲ್ಲಿ ಸಿನಿಮಾ ಶೂಟಿಂಗ್ (Cinema Shooting) ಬಲು ಜೋರಾಗಿಯೇ ನಡೆಯುತ್ತಿದೆ. ಸಿನಿಮಾದ ಮಹತ್ವದ ದೃಶ್ಯವನ್ನ ಇಲ್ಲಿ ತೆಗೆಯಲಾಗುತ್ತಿದೆ. ಇದರೊಟ್ಟಿಗೆ ಸಿನಿಮಾದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಸಿನಿಮಾ ಶೂಟಿಂಗ್ ಹಂತದಲ್ಲಿಯೇ ರಿಲೀಸ್ ದಿನವನ್ನ ಪ್ಲಾನ್ (Release Plan) ಮಾಡಲಾಗಿದೆ. ಇದರ ಬಗ್ಗೆ ನಿರ್ದೇಶಕ ನಾಗಶೇಖರ್ ಈಗಾಗಲೇ ಹೇಳಿಕೊಂಡಾಗಿದೆ. …

Read More »

ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಹೇಳಿಕೆ

ಮಂಗಳೂರು: ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ, ವಿಪಕ್ಷನಾಯಕನ ಆಯ್ಕೆ ನಡೆದಿರುವ ಬೆನ್ನಲ್ಲೇ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ನಲ್ಲಿ ಆಂತರಿಕ ಜಗಳ ತಾರಕ್ಕೇರಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹಾಗೂ ಸತೀಶ್ ಜಾರಕಿಹೊಳಿ ತಂಡ ಇಬ್ಭಾಗವಾಗುತ್ತಿದೆ. ಇದರ ಮಧ್ಯೆ ಮರಿ ಖರ್ಗೆ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಇಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಸ್ತದ ಒಳಗೆ ಹಸ್ತದ ಆಪರೇಷನ್ …

Read More »

ವಿಜಯೇಂದ್ರ ಇನ್ನು ಮಗು, : ಚಲುವರಾಯಸ್ವಾಮಿ

ಮಂಡ್ಯ: “ರಾಜ್ಯದ 226 ತಾಲೂಕುಗಳನ್ನು ಬರಗಾಲಪೀಡಿತ ತಾಲೂಕುಗಳು ಎಂದು ಘೋಷಿಸಿದ್ದೇವೆ. ಈಗ ಹಂತ ಹಂತವಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಕೊಡುವ ಹಂತಕ್ಕೆ ಬಂದಿದ್ದೇವೆ” ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಳವಳ್ಳಿಯ ಹಲಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಘೋಷಣೆಯನ್ನು ನಾವು ಕಾಯುತ್ತಿದ್ದೇವೆ. ನಂತರ ನಾವು ಕ್ಯಾಬಿನೆಟ್​ನಲ್ಲಿ ರೈತರಿಗೆ ಏನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ ” ಎಂದು ಹೇಳಿದರು. “ರಾಜ್ಯದ ಜನರಿಗೆ ವಿವಿಧ ರೀತಿಯಲ್ಲಿ ಪರಿಹಾರ ನೀಡಲು …

Read More »

ಅರ್ಥಪೂರ್ಣವಾಗಿ ಬೆಳಗಾವಿ ಅಧಿವೇಶನ ನಡೆಸಬೇಕಿದೆ- ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆಗಳನ್ನು ನಡೆಸದಂತೆ ಸಂಘಟನೆಗಳ ಮನವೊಲಿಸಲು ಕೋರಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರುಗಳಿಗೆ ಸಲಹಾ ಪತ್ರ ಬರೆದಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023ರಿಂದ ಡಿಸೆಂಬರ್ 15ರವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊರಟ್ಟಿ ಅವರು ಸಿದ್ದರಾಮಯ್ಯ ಸೇರಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿಕ್ಷಣ ಸಚಿವ …

Read More »

ಬ್ಯಾಡ್ ಮ್ಯಾನರ್ಸ್’ ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ: ಅಭಿಷೇಕ್ ಅಂಬರೀಶ್​

ಬೆಳಗಾವಿ: ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ ವಿಚಾರ. ಇದೇ 24ಕ್ಕೆ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ಆಗುತ್ತಿದ್ದು, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ನಟ ಅಭಿಷೇಕ್ ಅಂಬರೀಶ್​ ಕೋರಿದರು. ಬೆಳಗಾವಿ ಖಾಸಗಿ ಹೊಟೇಲ್​​ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್​​ನಲ್ಲಿ ಬೆಳಗಾವಿ ಜಿಲ್ಲೆಯವರು ಅಭಿನಯಿಸಿದ್ದಾರೆ. ಕಲಾವಿದರು ಇಲ್ಲಿಗೆ ಬರೋದಿಲ್ಲ ಎಂಬ ದೂರು ಇದೆ. ಹೀಗಾಗಿ ಬೆಳಗಾವಿಗೆ ಬಂದು ಪ್ರಚಾರ …

Read More »

“ಕೊಲ್ಲಾಪುರಿ ಬ್ರಾಂಡ್​ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ. ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ

ಚಿಕ್ಕೋಡಿ(ಬೆಳಗಾವಿ): ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಪರಿಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು, ಸರ್ಕಾರವು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮೋದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಒತ್ತಾಯಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿನಕ್ಕೆ ಚರ್ಮದಿಂದ ತಯಾರಿಸಿದ ಚಪ್ಪಲಿ ಬೇಡಿಕೆ ಕಡಿಮೆಯಾಗುತ್ತಿದ್ದು ಮತ್ತು …

Read More »

ಬೆಳಗಾವಿ ಅಧಿವೇಶನ: ₹300 ಕೋಟಿ ವೆಚ್ಚದಲ್ಲಿ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಪಂಚತಾರಾ ಹೊಟೇಲ್​ ನಿರ್ಮಾಣಕ್ಕೆ ಚಿಂತನೆ

ಬೆಂಗಳೂರು: ಪ್ರತಿವರ್ಷ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡಲಾಗುತ್ತದೆ. ಇದೀಗ ಇಂಥ ಖರ್ಚು ಕಡಿಮೆಗೊಳಿಸುವುದು, ವಾಸ್ತವ್ಯದ ಅನಾನುಕೂಲತೆ, ವೆಚ್ಚವನ್ನು ತಗ್ಗಿಸಲು ಬೆಳಗಾವಿ ಸುವರ್ಣಸೌಧದ ಸಮೀಪದಲ್ಲೇ ಪಂಚತಾರಾ ಹೊಟೇಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಡಿ.4 ರಿಂದ ಡಿ.15 ರವರೆಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕಳೆದ ವರ್ಷ ನಡೆದ ಅಧಿವೇಶನಕ್ಕೆ ಅಂದಾಜು …

Read More »

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ರದ್ದು

ಹುಬ್ಬಳ್ಳಿ: ಉತ್ತರ ಕರ್ನಾಟಕ ಜನರ ಅಚ್ಚುಮೆಚ್ಚಿನ ರೈಲು ಎಂದೇ ಖ್ಯಾತಿ ಗಳಿಸಿದ್ದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿನ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವೇಗದೂತದಂತೆ ಬರುತ್ತಿದ್ದ ಈ ರೈಲು ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದರೆ, ಏಕಾಏಕಿ ಈ ರೈಲು ಸಂಚಾರವನ್ನು ರದ್ದು ಮಾಡಿ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರು-ಹುಬ್ಬಳಿ ಸೂಪರ್ ಫಾಸ್ಟ್ ರೈಲು ಉತ್ತರ ಕರ್ನಾಟಕ ಮಂದಿಗೆ ಅತಿ ವೇಗದ ರೈಲು. ಈ ರೈಲು ಅಂದ್ರೆ ಈ …

Read More »