Breaking News

Laxminews 24x7

ಅರಣ್ಯಭೂಮಿ ಗಡಿ ಗುರುತಿಸಲು ಕಂದಾಯ ಅರಣ್ಯ ಇಲಾಖೆ ಜಂಟಿ ಸರ್ವೆ: ಸಚಿವ ಈಶ್ವರ್ ಖಂಡ್ರೆ

ಬೆಳಗಾವಿ(ಬೆಂಗಳೂರು) :ಅರಣ್ಯ ಭೂಮಿ ಗಡಿ ಗುರುತಿಸಿ ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮೀಕ್ಷೆಯನ್ನು ಕಾಲಮಿತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ …

Read More »

ತಾಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ: ದಿನೇಶ್ ಗುಂಡೂರಾವ್

ಬೆಂಗಳೂರು/ ಬೆಳಗಾವಿ : ರಾಜ್ಯದಲ್ಲಿ ಘೋಷಣೆಯಾದ ಹೊಸ ತಾಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಹೇಳಿದ್ದಾರೆ.   ಗುರುವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಹೊಸದಾಗಿ ಘೋಷಣೆಯಾದ ತಾಲೂಕು ಕೇಂದ್ರಗಳ ಬಹಳಷ್ಟು ಆಸ್ಪತ್ರೆಗಳು ತಾಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಇದರೊಂದಿಗೆ ರಾಜ್ಯದಲ್ಲಿ 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ …

Read More »

ಕೇಂದ್ರದ ಗೃಹ ಸಚಿವ ಹಾಗೂ ಪ್ರಧಾನಿ ಮೋದಿ ಪಾರ್ಲಿಮೆಂಟ್​ನಲ್ಲಿ ಆಗಿರುವ ಭದ್ರತಾ ಲೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯ

ಬೆಳಗಾವಿ: ಸಂಸತ್ತಿನ ಇತಿಹಾಸದಲ್ಲಿ ಆಗದೇ ಇರುವ ಭದ್ರತಾ ಲೋಪವನ್ನು ಇಡೀ ವಿಶ್ವವೇ ನೋಡಿದೆ. ಈ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡದೇ ಇರುವುದು ಆಶ್ಚರ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಕಿಡಿಕಾರಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಹೊಸದಾಗಿ ಸಂಸತ್ ನಿರ್ಮಿಸಿದ್ದೇವೆ. ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಮಾಡಿದ್ದೇವೆ ಎಂದು ಹೇಳುವಾಗ ಇಬ್ಬರು ಯುವಕರು ಗ್ಯಾಲರಿಗೆ ಬಂದು, ಅಲ್ಲಿಂದ ಜಿಗಿದು ನೇರವಾಗಿ ಸದನದ …

Read More »

ನಾನು ಸಿಎಲ್‌ಪಿ ಸಭೆಗೆ ಹೋಗಿಲ್ಲ, ನಾನು ಡಿಸಿಎಂ ಕರೆದ ಭೋಜನಕೂಟಕ್ಕೆ ಹೋಗಿದ್ದೆ

ಬೆಳಗಾವಿ : ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ನಾನು ಡಿಸಿಎಂ ಡಿಕೆ ಶಿವಕುಮಾರ್​ ಕರೆದ ಭೋಜನಕೂಟಕ್ಕೆ ಮಾತ್ರ ಹೋಗಿದ್ದು ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ನಿನ್ನೆ 8 ಗಂಟೆಯಿಂದ 10 ಗಂಟೆ ತನಕ ವಿಜಯೇಂದ್ರ ಜೊತೆಗೆ ಇದ್ದೆ. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಭೋಜನ ಕೂಟ ಇಟ್ಟುಕೊಂಡಿದ್ದರು. ಅವರ …

Read More »

ವಿಧಾನ ಪರಿಷತ್‌ನಲ್ಲಿ ನಾಲ್ಕು ವಿಧೇಯಕಗಳಿಗೆ ಅಂಗೀಕಾರ

ಬೆಳಗಾವಿ/ಬೆಂಗಳೂರು: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ-2023, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ-2023 ಸೇರಿದಂತೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ನಾಲ್ಕು ವಿವಿಧ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 13ರಂದು ಅಂಗೀಕಾರ ದೊರೆಯಿತು.   ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಯಲೋಸಲು ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕೋರಿದರು. 2023ನೇ ಸಾಲಿನ …

Read More »

ಗೋಕಾಕ ಜಿಲ್ಲೆಯಾದರೆ ಶಾಂತಿ ಇಲ್ಲವಾದರೆ ಕ್ರಾಂತಿ ,ಗೋಕಾಕ ಜಿಲ್ಲೆಗಾಗಿ ಬೃಹತ್ ಹೋರಾಟ

ಗೋಕಾಕ ಜಿಲ್ಲೆಯಾದರೆ ಶಾಂತಿ ಇಲ್ಲವಾದರೆ ಕ್ರಾಂತಿ ,ಗೋಕಾಕ ಜಿಲ್ಲೆಗಾಗಿ ಬೃಹತ್ ಹೋರಾಟ.     ಗೋಕಾಕ: ಆಡಳಿತ ಹಾಗೂ ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವತರ್ಿಸುವಂತೆ ಆಗ್ರಹಿಸಿ ನಗರದಲ್ಲಿಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯು ಜರುಗಿತು. ಬುಧವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನೆಯು ಅಪ್ಸರಾ ಕೂಟ, ತಂಬಾಕು ಕೂಟ, …

Read More »

ಆಸ್ತಿ ವಿವಾದದ ಕಲಹಕ್ಕೆ ವಿಕಲಚೇತನನ ಮನೆ ಬಲಿ

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. 30 ವರ್ಷಗಳಿಂದ ಕುಟುಂಬದೊಂದಿಗೆ ಶೆಡ್​ನಲ್ಲಿ ವಾಸವಿದ್ದ ವಿಕಲಚೇತನನ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವ ಆರೋಪ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ.   ಹಾಡಹಗಲೇ ಬಡಿಗೆ ಕೋಲುಗಳಿಂದ ಮನೆ ಒಡೆದು ಧ್ವಂಸಗೊಳಿಸಲಾಗಿದೆ. ಉದಗಟ್ಟಿ ಗ್ರಾಮದ ಸಿದ್ದಪ್ಪ ಅಪ್ಪಯ್ಯ ತುರಬಿ (44) ವಾಸವಿದ್ದ ಪತ್ರಾಸ್ ಶೆಡ್ ಇದಾಗಿದೆ. ಆಸ್ತಿ ವಿವಾದದ ಕಲಹಕ್ಕೆ ವಿಕಲಚೇತನನ ಮನೆ ಬಲಿಯಾಗಿದೆ ಎಂದು ಸಂತ್ರಸ್ತ ಸಿದ್ದಪ್ಪ …

Read More »

ಏಕವಚನದಲ್ಲಿ ಬೈದಾಡಿಕೊಂಡ ಜನಾರ್ದನ್​ ರೆಡ್ಡಿ, ಭರತ್‌ ರೆಡ್ಡಿ

ಬೆಳಗಾವಿ: ವಿಧಾನಸಭೆಯಲ್ಲಿ ಮಂಗಳವಾರ ಬಳ್ಳಾರಿ ರಾಜಕೀಯ ಗುದ್ದಾಟ ಜೋರಾಗಿತ್ತು. ಸದನ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಉತ್ತರ ಕರ್ನಾಟಕ ಚರ್ಚೆಯ ವೇಳೆ ಮಾತನಾಡುವಾಗ ಕಾಂಗ್ರೆಸ್​ ಶಾಸಕ ನಾ ರಾ ಭರತ್‌ರೆಡ್ಡಿ, ಬ್ರಾಹ್ಮಿಣಿ ಸ್ಟೀಲ್ಸ್​ ಸಂಸ್ಥೆ, ಬಳ್ಳಾರಿ ಜಿಲ್ಲೆಯಲ್ಲಿ 10 ಸಾವಿರ ಎಕರೆ ಜಮೀನನ್ನು ಬಲವಂತವಾಗಿ ರೈತರಿಂದ ವಶಪಡಿಸಿಕೊಂಡಿತ್ತು. ರೈತರ ಮೇಲೆ ಗೂಂಡಾಗಿರಿ ಮಾಡಿ ಭೂಮಿಯನ್ನ ಕಿತ್ತುಕೊಂಡಿದ್ದ ವ್ಯಕ್ತಿಗಳು ಈಗ ನಮ್ಮಿಂದಲೇ ಬಳ್ಳಾರಿ ಅಭಿವೃದ್ಧಿಯಾಗಿದೆ ಎನ್ನುತ್ತಿದ್ದಾರೆ. …

Read More »

”ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಡಿಜಿಟಲೀಕರಣಗೊಳಿಸಲು ಸರ್ಕಾರ ಸೂಚನೆ ನೀಡಿದೆ”

ಬೆಳಗಾವಿ: ”ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಕಾರ್ಖಾನೆಗಳ ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗಿದೆ” ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು. ಸುವರ್ಣಸೌಧಲ್ಲಿ ಮಂಗಳವಾರ ಸಚಿವ ಶಿವಾನಂದ ಪಾಟೀಲ್, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಕಾನೂನು …

Read More »

34,115 ಕೋಟಿ ರೂ ಮೊತ್ತದ ಬಂಡವಾಳ ಹೂಡಿಕೆ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ :ಎಂ.ಬಿ.ಪಾಟೀಲ

ಬೆಳಗಾವಿ:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ, ಒಟ್ಟು 34,115 ಕೋಟಿ ರೂ ಮೊತ್ತದ ಬಂಡವಾಳ ಹೂಡಿಕೆ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು.   ಸಿಎಂ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ, ಹೆಚ್ಚುವರಿ ರೂ 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ ಕಂಪನಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ …

Read More »