ಬೆಂಗಳೂರು : ಮಹಿಳೆಯೊಬ್ಬಳು ತಾನು ಕಾಂಗ್ರೆಸ್ (Congress) ಮುಖಂಡೆ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲಕ್ಷಾಂತರ ರೂ. ವಂಚನೆ (Fraud) ನಡೆಸಿರುವ ಪ್ರಕರಣ ಜಯನಗರ ಪೊಲೀಸ್ ಠಾಣಾ (Jayanagar police station) ವ್ಯಾಪ್ತಿಯಲ್ಲಿ ನಡೆದಿದೆ. ರೂಪ ಮತ್ತಿತರರು ನೀಡಿದ ದೂರಿನ ಮೇರೆಗೆ ಆರೋಪಿ ಸಂದ್ಯಾ ಪವಿತ್ರಾ ನಾಗರಾಜ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ …
Read More »ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಸಿಎಂ ವಿರುದ್ಧ ಜೋಶಿ ಕೆಂಡ
ಬೆಂಗಳೂರು: ಸಿದ್ದರಾಮಯ್ಯನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) …
Read More »ಖಾನಾಪುರ: ನರೇಗಾ ಕಾಮಗಾರಿ ವೇಳೆ ಕಾರ್ಮಿಕ ಮಹಿಳೆಗೆ ಹಾವು ಕಡಿತ
ಖಾನಾಪುರ: ತಾಲ್ಲೂಕಿನ ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ನರೇಗಾ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರ ಮಹಿಳೆಗೆ ಹಾವು ಕಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಜಾಂಬೋಟಿ ನಿವಾಸಿ ಸವಿತಾ ಸಾಬಳೆ(55) ಗಾಯಾಳು. ಕೂಲಿ ಕೆಲಸದಲ್ಲಿ ನಿರತರಾಗಿದ್ದ ಸವಿತಾ ಅವರಿಗೆ ಹಾವು ಕಚ್ಚಿದ ವಿಷಯ ತಿಳಿದ ಕೂಡಲೇ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ …
Read More »ಮೂಡಲಗಿ: ಕಲ್ಮೇಶ್ವರಬೋಧ ಸ್ವಾಮಿ ಜಯಂತಿ
ಮೂಡಲಗಿ: ಮೂಡಲಗಿಯ ಶಿವಬೋಧರಂಗ ಮಠದ ಪವಾಡ ಪುರುಷ, ವಾಕ್ಸಿದ್ಧಿಪುರುಷ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಾನುವಾರ ಕಲ್ಮೇಶ್ವರ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸಂಭ್ರಮದಿಂದ ಆಚರಿಸಿದರು. ಕಲ್ಮೇಶ್ವರಬೋಧ ಸ್ವಾಮಿಗಳ ಅಶ್ವಾರೂಢ ಮೂರ್ತಿಗೆ ಶ್ರೀರಂಗ ಜೋಶಿ ಮತ್ತು ಪಂಚಯ್ಯ ಹಿರೇಮಠ ಅವರು ಪೂಜೆ ನೆರವೇರಿಸಿದರು. ಕಲ್ಮೇಶ್ವರ ವೃತ್ತವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗಾರಗೊಳಿಸಿದ್ದರು. ಕಲ್ಮೇಶ್ವರಬೋಧ ಸ್ವಾಮೀಜಿಯವರಿಗೆ ಸೇರಿದ ಅಪಾರ ಭಕ್ತವೃಂದವು ಒಕ್ಕೊರಲಿನಿಂದ ಜಯಘೋಷಗಳನ್ನು ಹಾಕಿದರು. ಪುರಸಭೆ ಸದಸ್ಯರು, ಮುಖಂಡರು, ಕಲ್ಮೇಶ್ವರಬೋಧ ಮೂರ್ತಿ ಪ್ರತಿಷ್ಠಾನ …
Read More »ಹನುಮ ಧ್ವಜಕ್ಕೆ ಅಪಮಾನ: ಬಿಜೆಪಿಯಿಂದ ನಾಳೆ ಪ್ರತಿಭಟನೆ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧ ನೀತಿ ಅನುಸರಿಸುತ್ತಿದ್ದು, ಕೆರಗೋಡಿನಲ್ಲಿ ಹನುಮಧ್ವಜ ಮತ್ತು ರಾಷ್ಟ್ರಧ್ವಜಕ್ಕೂ ಅಪಮಾನ ಮಾಡಿದ ಘಟನೆಯನ್ನು ಖಂಡಿಸಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಧ್ವಜವನ್ನು ಕೆಳಕ್ಕಿಳಿಸಿ ಹರಿದಿರುವುದು ಖಂಡನೀಯ ಎಂದು …
Read More »ಭಾನುವಾರ ಏರ್ಪಡಿಸಿದ್ದ ಸಿರಿಧಾನ್ಯ ಮೇಳ: ಎಚ್.ಕೆ.ಪಾಟೀಲ
ಗದಗ: ಹುಲಕೋಟಿಯ ಕೈಲಾಸ ಆಶ್ರಮದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಿರಿಧಾನ್ಯ ಮೇಳ ಹಾಗೂ ಕೃಷಿ ತಂತ್ರಜ್ಞಾನ ಪ್ರದರ್ಶನ ಮೇಳ ಸಾರ್ವಜನಿಕರ ಗಮನ ಸೆಳೆಯಿತು. ಸಿರಿಧಾನ್ಯ ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಸಂದೇಶ ಸಾರಿದ ಚಿತ್ತಾಕರ್ಷಕ ರಂಗೋಲಿಯು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಿರಿಧಾನ್ಯ ಉತ್ಸವ ಆಯೋಜಿಸಲಾಗಿತ್ತು. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ …
Read More »ಅಜ್ಜನ ಜಾತ್ರೆಯ ಸಮಾರೋಪ
ಕೊಪ್ಪಳ: ಗವಿಮಠ ಜಾತ್ರೆಯ ಸಮಾರೋಪ ಸಮಾರಂಭ ಸೋಮವಾರ ನಡೆಯಲಿದ್ದು, ಕೊನೆಯ ದಿನ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ಕಬಡ್ಡಿ ಟೂರ್ನಿ ಜರುಗಲಿದೆ. 11ರಿಂದ ಮಧ್ಯಾಹ್ನ 1.30ರ ತನಕ ಶಾಂತವನ ಯಾತ್ರಿ ನಿವಾಸ ರಸ್ತೆಯಲ್ಲಿ ಆನ್ವೇಷಣೆ ಆತ್ಮಚಿಂತನೆ ಆಯೋಜನೆಯಾಗಿದೆ. ಸಂಜೆ 5.30ಕ್ಕೆ ಕೈಲಾಸ ಮಂಟಪದಲ್ಲಿ ನಡೆಯುವ ಸಮಾರೋಪದಲ್ಲಿ ಶಿವಗಂಗಾಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನಮಠದ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, …
Read More »ಒಣ ಮೆಣಸಿನಕಾಯಿ ದರ ಏರಿಕೆ: ರೈತರ ಸಂತಸ
ಹಟ್ಟಿಚಿನ್ನದಗಣಿ: ಮಾರುಕಟ್ಟೆಯಲ್ಲಿ ಒಣಮೆಣಸಿಕಾಯಿ ದರ ಏರಿಕೆ ಆಗಿರುವುದರಿಂದ ಮೆಣಸಿನಕಾಯಿ ಬೆಳೆ ಬೆಳದ ರೈತರು ಸಂತಸದಲ್ಲಿದ್ದಾರೆ. ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ, ಹತ್ತಿಗಿರಿ ತಳಿಯ ಒಣ ಮೆಣಸಿನಕಾಯಿ, ಪ್ರತಿ ಕ್ವಿಂಟಲ್‌ಗೆ ₹25 ಸಾವಿರ ಇದೆ. ₹38 ಸಾವಿರ ಬ್ಯಾಡಗಿ ಹಾಗೂ ಗುಂಟೂರು ತಳಿ ತಲಾ 16 ರಿಂದ 18 ಸಾವಿರದಿಂದ ಧಾರಣೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.
Read More »ಅಜ್ಜನ ಜಾತ್ರೆ: ನಾಲ್ಕೂವರೆ ಲಕ್ಷ ಭಕ್ತರಿಗೆ ದಾಸೋಹದಲ್ಲಿ ಮಿರ್ಚಿ ಸೇವೆ
ಕೊಪ್ಪಳ: ಇಲ್ಲಿನ ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಎರಡನೇ ದಿನವಾದ ಭಾನುವಾರ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಮಿರ್ಚಿ ಸೇವಾ ಬಳಗ ಆರಂಭಿಸಿದ್ದು ಈ ಬಾರಿ ಸೇವಾ ಕಾರ್ಯದಲ್ಲಿ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸಿದರು. ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಈ ಕಾರ್ಯದಲ್ಲಿ ಭಾಗಿಯಸದರು. ಮಿರ್ಚಿ ರುಚಿಗೆ ಮನಸೋತ …
Read More »ಪಟಾಕಿ ಗೋಡೌನ್‌ನಲ್ಲಿ ಬ್ಲಾಸ್ಟ್; 3 ಸಾವು,
ಮಂಗಳೂರು: ಪಟಾಕಿ ಗೋಡೌನ್ ಬ್ಲಾಸ್ಟ್ ಆಗಿ ಮೂವರು ಮೃತಪಟ್ಟಿದ್ದಾರೆ. ಮಂಗಳೂರಿನ ಬೆಳ್ತಂಗಡಿ ತಾಲೂಕಿನ ವೇಣೂರಿನ ಗೋಳಿಯಂಗಡಿಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಸಾಲಿಡ್ ಫೈರ್‌ವರ್ಕ್ ಎಂಬ ಗೋಡೌನ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಸ್ವಾಮಿ (55) , ಕೇರಳದ ವರ್ಗಿಸ್ (68), ಹಾಸದ ಅರಸಿಕೆರೆ ನಿವಾಸಿ ಚೇತನ್ (25) ಎಂದು ಗುರುತಿಸಲಾಗಿದೆ. ಸ್ಪೋಟದ ತೀವ್ರತೆಗೆ ಕಾರ್ಮಿಕರ ಮೃತದೇಹಗಳು ಛಿದ್ರ …
Read More »
Laxmi News 24×7