Breaking News

Laxminews 24x7

ಹಳೇಬೀಡು: ಹೊಯ್ಸಳರ ಇತಿಹಾಸ ತಿಳಿಸುವ ಚಿತ್ರಗಳು

ಹಳೇಬೀಡು: ಶಾಲೆ ಮಕ್ಕಳಿಗೆ ಆಕರ್ಷಣೀಯ ಆಗಿರಬೇಕು. ಸರ್ಕಾರಿ ಶಾಲೆ ಖಾಸಗಿ ಹೈಟೆಕ್ ಶಾಲೆಗಿಂತ ಕಡಿಮೆ ಇಲ್ಲ ಎಂಬುದು ಪೋಷಕರಿಗೆ ಮನವರಿಕೆ ಆಗಬೇಕೆಂಬ ಉದ್ದೇಶದಿಂದ ಚಿತ್ರಕಲಾ ಶಿಕ್ಷಕರು ಅಪರೂಪದ ಕಾರ್ಯ ಮಾಡಿದ್ದಾರೆ. ಇದರಿಂದಾಗಿ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡ ಬಣ್ಣದ ಚಿತ್ರಗಳಿಂದ ಕಂಗೊಳಿಸುತ್ತಿದೆ. ಶಾಲೆಯ ಚಿತ್ರಕಲಾ ಶಿಕ್ಷಕ ಎ.ಎಸ್.ಶಂಕರೇಗೌಡ ಅವರ ಆಸಕ್ತಿಗೆ ಸಹೋದ್ಯೋಗಿಗಳು ಪ್ರೋತ್ಸಾಹಿಸಿದ್ದರಿಂದ ಶಾಲೆಯ ಗೋಡೆಗಳು ಚಿತ್ರಗಳಿಂದ ಅಲಂಕೃತಗೊಂಡಿವೆ. ಗೋಡೆಗಳಲ್ಲಿ ಮೂಡಿರುವ ಚಿತ್ರಗಳು ಅಂದ ಹೆಚ್ಚಿಸಿರುವುದಲ್ಲದೇ ನೋಡಿದವರಿಗೆ ಜಾಗೃತಿ …

Read More »

ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆ: ಈಶ್ವರಪ್ಪ

ಶಿವಮೊಗ್ಗ: ಯಡಿಯೂರಪ್ಪ (BS Yediyurappa) ನಮಗೆ ಮೋಸ ಮಾಡಿದ್ದಾರೆಂದು ಬೇಸರವಿದೆ, ಮಾರ್ಚ್ 15ರ ನಂತರ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ (KS Eshwarappa) ಕಿಡಿಕಾರಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಇ.ಕಾಂತೇಶ್​ಗೆ ಹಾವೇರಿ (Haveri) ಬಿಜೆಪಿ (BJP) ಟಿಕೆಟ್ ಕೊಡಿಸುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಹಾವೇರಿ ಭಾಗದಲ್ಲಿ ಕಾಂತೇಶ್ ಓಡಾಡಿ ಜನರ ವಿಶ್ವಾಸ ಗಳಿಸಿದ್ದ. ವಿವಿಧ ಮಠಾಧೀಶರು ನನ್ನ ಮಗ ಕಾಂತೇಶ್​ …

Read More »

ಪಕ್ಷಾಂತರ, ಹೊಂದಾಣಿಕೆ ರಾಜಕಾರಣ ಮಾಡಲ್ಲ: ಎ.ನಾರಾಯಣಸ್ವಾಮಿ

ಚಿತ್ರದುರ್ಗ: ‘ರಾಜ್ಯದಲ್ಲಿ ಬಿಜೆಪಿ ಕಟ್ಟುವ ಪ್ರಯತ್ನದಲ್ಲಿ ನನ್ನ ಬೆವರ ಹನಿಯೂ ಇದೆ. ಪಕ್ಷಾಂತರ, ಓಲೈಕೆ ಹಾಗೂ ಹೊಂದಾಣಿಕೆ ರಾಜಕಾರಣವನ್ನು ಎಂದಿಗೂ ಮಾಡುವುದಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಟಿಕೆಟ್ ಕೈತಪ್ಪಿದ ಬಿಜೆಪಿ ಸಂಸದರನ್ನು ಕಾಂಗ್ರೆಸ್‌ ಆಹ್ವಾನಿಸುತ್ತಿದೆ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅಸಮಾಧಾನಗೊಂಡು ಹೀಗೆ ಪ್ರತಿಕ್ರಿಯಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಸಂಸದೀಯ ಮಂಡಳಿ ಸಮಿತಿಯು ಯಾರಿಗೆ ಟಿಕೆಟ್‌ …

Read More »

ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ: ಕುಮಾರಸ್ವಾಮಿ

ಹಾಸನ: ‘ರಾಜ್ಯದ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಇನ್ನೂ 2-3 ಕ್ಷೇತ್ರ ಕೇಳಿದ್ದರೆ ಕೊಡುತ್ತಿದ್ದರು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾ.21 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ನಾನು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಒಂದೇ ಕುಟುಂಬದ ಅನೇಕರು ರಾಜಕೀಯದಲ್ಲಿದ್ದಾರೆ. ಆದರೆ ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ’ ಎಂದರು.   ‘ಡಾ.ಸಿ.ಎನ್‌. ಮಂಜುನಾಥ್ ಅವರನ್ನು ಅಭ್ಯರ್ಥಿ …

Read More »

ಲೋಕಸಭಾ ಚುನಾವಣೆಗೆ ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ

ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರಿಂದ ಕಾಂಗ್ರೆಸ್ ಪಕ್ಷವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ. ನೀವು ನಮ್ಮ ಪಕ್ಷದ ಹಣವನ್ನು ದೇಣಿಗೆಯಾಗಿ ನೀಡಿದ್ದೀರಿ, ಅವರು ಅದನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ… ಆದರೆ, ಅವರು (ಬಿಜೆಪಿ) ತಮಗೆ ದೊರೆತ ಚುನಾವಣಾ ಬಾಂಡ್ಗಳ ಬಗ್ಗೆ ಬಹಿರಂಗಪಡಿಸುತ್ತಿಲ್ಲ, ಏಕೆಂದರೆ ಅವರ ಕಳ್ಳತನ ಹೊರಬರುತ್ತದೆ, ಅವರ …

Read More »

ʻಲೋಕಸಭಾ ಚುನಾವಣೆ 2024ʼರ ಸಂಪೂರ್ಣ ವೇಳಾಪಟ್ಟಿ ಈ ವಾರ ಪ್ರಕಟ

ನವದೆಹಲಿ: ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯನ್ನು ಈ ವಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಭೇಟಿಯ ನಂತರ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ವರದಿ ಸೂಚಿಸಿದೆ. ಬುಧವಾರ, ಚುನಾವಣಾ ಆಯೋಗದ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿತು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಯಾವಾಗ ಚುನಾವಣೆ ನಡೆಸಬಹುದು ಎಂಬುದನ್ನು ಪರಿಶೀಲಿಸಿತು. …

Read More »

ತುಕಾಲಿ ಸಂತೋಷ್ ಕಾ ರಿಗೆ ಆಕ್ಸಿ ಡೆಂಟ್

ಹಾಸ್ಯನಟ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್​ ಅವರ ಕಾರು ಅಪಘಾತ ಆಗಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಈ ಘಟನೆ ನಡೆದಿದ್ದು, ಫೋಟೋಗಳು ಲಭ್ಯವಾಗಿವೆ. ತುಕಾಲಿ ಸಂತೋಷ್​ ಅವರ ಕಾರಿಗೆ ಆಟೋ ಡಿಕ್ಕಿ ಹೊಡಿದಿದೆ. ಗಾಯಗೊಂಡಿರುವ ಆಟೋ ಚಾಲಕನಿಗೆ ಕುಣಿಗಲ್​ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

Read More »

ವಿವಿಧ ಕ್ಷೇತ್ರಗಳಿಗೆ ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ..!

ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಿಗೆ ಸೌಂಡ್ ಸಿಸ್ಟಮ್ ಹಾಗೂ ಕುರ್ಚಿಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿದರು. ಗೋಕಾಕ, ಅರಭಾವಿ, ಬೈಲಹೊಂಗಲ, ರಾಮದುರ್ಗ ತಾಲೂಕಗಳ ವಿವಿಧ ಗ್ರಾಮದ ವಿವಿಧ ಸಮುದಾಯ ಭವನಗಳಿಗೆ, ದೇವಸ್ಥಾನ, ಮಸೀದಿ ಚರ್ಚಗಳಿಗೆ ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಆಪ್ತ …

Read More »

ವಾರಕ್ಕೊಮ್ಮೆ ಸ್ನಾನ, ಹೋಟೆಲ್ ಊಟ : ಹನಿ ಹನಿ ನೀರಿಗೂ ಬೆಂಗಳೂರಿಗರ ಪರದಾಟ

ರಮೇಶ್ ಪಾಳ್ಯಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ನೀರಿನ ಅಭಾವ ಇಲ್ಲಿನ ಜನರನ್ನು ಕಂಗೆಡಿಸಿದೆ. ದುಡ್ಡು ಕೊಟ್ಟರೂ ನೀರು ಸಿಗುತ್ತಿಲ್ಲ ಹೀಗಾಗಿ ವಾರಕ್ಕೊಮ್ಮೆ ಸ್ನಾನ, ಅಡುಗೆ ಮಾಡುವ ಬದಲು ಹೋಟೆಲ್ನಲ್ಲಿ ಆರ್ಡರ್ ಮಾಡಿ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಲ್ಲದೆ ಸಂಸ್ಕರಿಸಿದ ನೀರನ್ನು ಬಳಸುವ ಮೂಲಕ ಒಂದು ಹನಿ ನೀರಿಗೂ ಒದ್ದಾಡುವಂತಹ ಸ್ಥಿತಿ ಬಂದೋದಗಿದೆ.   ನಗರದ ಬಾಬುಸಾಪಾಳ್ಯದ ನಿವಾಸಿಗಳು ಕಳೆದ ಎರಡು ತಿಂಗಳುಗಳಿಂದ ತಮ್ಮ ದೈನಂದಿನ ಪೂರೈಕೆಗಾಗಿ ನೀರಿನ ಟ್ಯಾಂಕರ್ಗಳ …

Read More »