ಬೆಂಗಳೂರು: ಏಕಾಏಕಿ ಮನೆಗೆ ನುಗ್ಗಿ ವಿವಾಹಿತೆಯನ್ನು ಕಿಡ್ನ್ಯಾಪ್ ಮಾಡಿ, ಎಸ್ಕೇಪ್ ಆಗಲು ಯತ್ನಿಸಿದ ಗ್ಯಾಂಗ್ ಎದುರಿಗೆ ಬಂದವರ ಮೇಲೆಲ್ಲಾ ಕಾರು ಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಯುವತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಅಪಹರಿಸಿದ್ದಾರೆ. ಕಿಡ್ನ್ಯಾಪ್ಗೆ ಯತ್ನಿಸಿದ ಮೂವರು ಕೂಡ ರಾಜಸ್ಥಾನದವರೆಂದು ತಿಳಿದುಬಂದಿದೆ. ಇತ್ತೀಚಿಗೆ ವ್ಯಕ್ತಿಯೋರ್ವ ರಾಜಸ್ಥಾನ ಮೂಲದ ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಳೆದ 15 ದಿನದ ಹಿಂದಷ್ಟೇ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಬುಧವಾರ (ಸೆ.16) ಏಕಾಏಕಿ ಮೂವರ ಗ್ಯಾಂಗ್ವೊಂದು ಮನೆಗೆ ನುಗ್ಗಿ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಿಸಿಕೊಂಡು ಹೋಗುವಾಗ ಎದುರಿಗೆ ಬಂದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೇ ವಿಜಯನಗರದ ಹೊಸಹಳ್ಳಿಯ ದಂಡಿ ಮಾರಮ್ಮ ದೇವಸ್ಥಾನದ ಬಳಿ ಪ್ರಶ್ನಿಸಲು ಬಂದವರ ಮೇಲೆ ಹಾಗೂ ಕಾರಿಗೆ ಅಡ್ಡಬಂದ ಜನರ ಮೇಲೆ ಕಾರು ಹರಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ಅಗ್ರಹಾರ ದಾಸರಹಳ್ಳಿಯಿಂದ ವಿಜಯನಗರ, ಹೊಸಹಳ್ಳಿವರೆಗೂ ಜಡ್ಜ್ ವಾಹನ ಸೇರಿ 20ಕ್ಕೂ ಹೆಚ್ಚು ಕಾರುಗಳು, 200ಕ್ಕೂ ಹೆಚ್ಚು ಬೈಕ್ಗಳು ಹಾಗೂ ಸಾರ್ವಜನಿಕರಿಗೆ ಕಾರು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಪರಾರಿಯಾಗಲು ಯತ್ನಿಸಿದವರ ಕಾರನ್ನು ಸಾರ್ವಜನಿಕರು 50ಕ್ಕೂ ಹೆಚ್ಚು ಬೈಕ್ಗಳಲ್ಲಿ ಸುಮಾರು 9 ಕಿ.ಮೀ ದೂರದವರೆಗೆ ಚೆಸ್ ಮಾಡಿದ್ದಾರೆ.
ಈ ವೇಳೆ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ, ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಎಸ್ಕೇಪ್ ಆಗಲು ಯತ್ನಿಸಿದ ಮೂವರು ಕಿಡ್ನ್ಯಾಪರ್ಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಮಹಿಳೆಯರ ಮೇಲೆ ಕಾರು ಹರಿಸಲಾಗಿದೆ.
ಸದ್ಯ ಸಂತ್ರಸ್ತ ಯುವತಿಯನ್ನು ಸಾರ್ವಜನಿಕರು ರಕ್ಷಿಸಿದ್ದು, ಕಿಡ್ನ್ಯಾಪರ್ಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಾಗಡಿ ರೋಡ್ ಸಂಚಾರಿ ಪೊಲೀಸರು ಹಾಗೂ ವಿಜಯನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
Laxmi News 24×7