Breaking News

ನಾಮಪತ್ರ ವಾಪಸ್ ಪಡೆದವರು ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಮನೋಹರ್ ಹೆಬ್ಬಾಳಕರ್

Spread the love

ಬೆಳಗಾವಿ  ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಡಲಾಗುತ್ತಿದೆ.

ಆದರೆ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮೀ ಮನೋಹರ ಹೆಬ್ಬಾಳಕರ್ ಎನ್ನುವವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ರವೀಂದ್ರ ಹೆಬ್ಬಾಳಕರ್ ಕಣದಿಂದ ಹಿಂದೆ ಸರಿದಿಲ್ಲ.

ಜನರ ದಿಕ್ಕು ತಪ್ಪಿಸಲೆಂದೇ ಕೆಲವರು ಕಂಗ್ರಾಳಿಯ ಲಕ್ಷ್ಮೀ ಮನೋಹರ ಹೆಬ್ಬಾಳಕರ್ ಎನ್ನುವವರಿಂದ ನಾಮಪತ್ರ ಹಾಕಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ ಕೆಲವರು ಲಕ್ಷ್ಮೀ ಹೆಬ್ಬಾಳಕರ್ ನಾಮಪತ್ರ ವಾಪಸ್ ಎಂದು ಸುದ್ದಿ ಹರಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ