Breaking News

ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯ ಸೊಂಟ ಹಿಡಿದ P.S.I.

Spread the love

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯ ಸೊಂಟ ಹಿಡಿದು ತೀರ ವಿಕೃತವಾಗಿ ವರ್ತಿಸಿದ ಆರೋಪದಡಿ ಸುದ್ದಗುಂಟೆಪಾಳ್ಯ ಠಾಣೆಯ ಪಿಎಸ್‌ಐ ಮಂಜುನಾಥ್‌ ವಿರುದ್ಧ ಕೇಸ್ ದಾಖಲಿಸಿ ಅಮಾನತುಗೊಳಿಸಲಾಗಿದೆ.

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅಮಾನತು ಆದೇಶ ಹೊರಡಿಸಿದ್ದಾರೆ. ಠಾಣೆಗೆ ಹೋದ ಮಹಿಳೆಯ ಸೊಂಟ ಹಿಡಿದು ಪೃಷ್ಠ ಭಾಗವನ್ನು ಸವರಿ ಪಿಎಸ್ಐ ಮಂಜುನಾಥ ಅನುಚಿತವಾಗಿ ವರ್ತಿಸಿದ್ದ ಬಗ್ಗೆ ಸಂತ್ರಸ್ತ ಮಹಿಳೆ ಏ.10ರಂದು ಟ್ವೀಟ್‌ ಮಾಡಿದ್ದರು.

“ಇದರ ಆಧಾರದಲ್ಲಿ ಮಹಿಳೆಯನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಲು ಲಿಖಿತ ದೂರು ನೀಡಲು ತಿಳಿಸಿದ ಪ್ರಕಾರ ಮಹಿಳೆ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದಾರೆ” ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್‌ 354ಎ, 354ಡಿ ರಡಿ ಎಫ್‌ಐಆರ್​ ದಾಖಲಿಸಿದ್ದು, ಪ್ರಕರಣದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಹಿರಿಯ ಅಧಿಕಾರಿಗಳಿಗೆ ತನಿಖೆ ವಹಿಸಿಕೊಡಲಾಗಿದೆ ಎಂದು ಬಾಬಾ ತಿಳಿದ್ದಾರೆ


Spread the love

About Laxminews 24x7

Check Also

ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

Spread the loveದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ