Breaking News

ಮಗನಿಗಾಗಿ ಸಚಿವ ಸೋಮಣ್ಣ ಕಸರತ್ತು? ಕೇಳಿದ್ದೊಂದು ಸಿಕ್ಕಿದ್ದೊಂದು.

Spread the love

ಬೆಂಗಳೂರು: ಬಿಜೆಪಿ ಇನ್ನೂ ಮೊದಲನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆ ಸಚಿವ ವಿ ಸೋಮಣ್ಣ ಹೈಕಮಾಂಡ್​ ಜತೆಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಅವರು ಅರುಣ್​ ಸೋಮಣ್ಣ ಪರವಾಗಿ ಬ್ಯಾಟಿಂಗ್​ ಮಾಡಿದ್ದು ಅದಕ್ಕಾಗಿ ತಮ್ಮ ಟಿಕೆಟನ್ನೂ ಬಿಟ್ಟು ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

 

ಇದೀಗ ದೆಹಲಿಯಿಂದ ಸಚಿವ ವಿ ಸೋಮಣ್ಣ ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಗೋವಿಂದರಾಜ ನಗರ, ಚಾಮರಾಜನಗರ ಟಿಕೆಟ್ ಕೇಳಿದ್ದು ಬಿಜೆಪಿ ಹೈಕಮಾಂಡ್​ ಮಾತ್ರ ಬೇರೆಯದೇ ಯೋಜನೆಗಳನ್ನು ಹಾಕಿಕೊಂಡಿರುವಂತೆ ಕಾಣುತ್ತಿದೆ. ಸಚಿವ ಸೋಮಣ್ಣಗೆ ವರುಣಾ ನಿಲ್ಲುವಂತೆ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಮಾಹಿತಿ ದಿಗ್ವಿಜಯ ಚ್ಯಾನಲ್​ಗೆ ಲಭಿಸಿದೆ.

ವರುಣಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಬೇಡ ಎಂದು ಹೈ ಕಮಾಂಡ್ ನಾಯಕರಿಗೆ ವಿ ಸೋಮಣ್ಣ ಮನವಿ ಮಾಡಿದ್ದು ಪುತ್ರ ಅರುಣ್ ಸೋಮಣ್ಣ ರಾಜಕೀಯ ಭವಿಷ್ಯಕ್ಕಾಗಿ ಸೋಮಣ್ಣ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗಿದೆ. ಸಚಿವ ಸೋಮಣ್ಣ, ಅರುಣ್ ಸೋಮಣ್ಣಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಸಿಗುವಂತೆ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದು ಹೈಕಮಾಂಡ್​ ಬಳಿ ‘ನನಗೆ ಟಿಕೆಟ್ ಕೊಡದಿದ್ರೂ ನನ್ನ ಮಗನಿಗೆ ಟಿಕೆಟ್ ಕೊಡಿ’ ಎಂದು ಹೇಳಿದ್ದಾರಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ