Breaking News

ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ

Spread the love

ಬೆಳಗಾವಿ: ಗಂಟಲು ನೋವು, ಊತ, ನುಂಗಲು ತೊಂದರೆಯ ಸಮಸ್ಯೆಯೊಂದಿಗೆ ಉಲ್ಬಣಗೊಂಡಿದ್ದ ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಗೆ ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2ರಿಂದ 3 ವರ್ಷಗಳಲ್ಲಿ ಉಲ್ಭಣಗೊಂಡು ರೋಗಿಯು ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. ಈ ನಡುವೆ ಮಹಿಳೆಯು ಅತಿರಕ್ತದೊತ್ತಡ, ಮಧುಮೇಹ ಸಮಸ್ಯೆಯು ಮೈಗೂಡಿತು. ಇದರಿಂದ ಬಳಲಿದ್ದ ಮಹಿಳೆಯು ನಮ್ಮ ಆಸ್ಪತ್ರೆಗೆ ಭೇಟಿ ನೀಡಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದಳು. ನಂತರ ಆಸ್ಪತ್ರೆಯಲ್ಲಿನ ರೆಡಿಯಾಲಾಜಿ ವಿಭಾಗದಲ್ಲಿ ಡಾ. ನಾಗರಾಜ ಪಿ ಅವರಿಂದ ಮಹಿಳೆಗೆ ಸ್ಕ್ಯಾನ್ ಮಾಡಲಾಗಿ ಅದರಲ್ಲಿ ಸುಮಾರು 11 ಸೆ ಮಿ ಸುತ್ತಳತೆಯ ಥೈರಾಯ್ಡ ಗಂಟು ಆಕೆಯ ಧ್ವನಿ ಪೆಟ್ಟಿಗೆಯನ್ನು ಅಂಟಿಕೊಂಡಿರುವದು ಪತ್ತೆಯಾಯಿತು. ಇದರಿಂದ ಮಹಿಳೆಗೆ ಅರವಳಿಕೆಯನ್ನು ನೀಡುವದೂ ಕೂಡ ಒಂದು ಪ್ರಶ್ನಾರ್ಥಕವಾಗಿತ್ತು. ಆದರೆ ಈ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಖ್ಯಾತ ಶಸ್ತ್ರಚಿಕಿತ್ಸಜ್ಞ ಡಾ.ಅಜಯ ಕಾಳೆ, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಜಿ ನೆಲವಿಗಿ, ಡಾ.ದಿವೇಕರ, ಡಾ. ಸುರೇಶ ಇವರ ಸಹಯೋಗದಲ್ಲಿ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೋಗಿಯು ಈಗ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು ಶಸ್ತ್ರಚಿಕಿತ್ಸೆ ವಿಭಾಗದ ಹೆಸರಾಂತ ವೈದ್ಯರಾದ ಡಾ. ಅಕ್ಷಯ ಮೆಟಗುಡ್ ತಿಳಿಸಿದ್ದಾರೆ.

ಇಂತಹ ಕ್ಲಿಷ್ಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರನ್ನು ಶಸ್ತ್ರಚಿಕಿತ್ಸೆಯ ವಿಬಾಗದ ಮುಖ್ಯಸ್ಥರಾದ ಡಾ.ಎ ಕೆರಡ್ಡೇರ ಅಭಿನಂದಿಸಿದ್ದಾರೆ.

ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್ ಸಿ ಧಾರವಾಡ ಅವರು ಮಾತನಾಡುತ್ತ ಮಹಿಳೆಯರಲ್ಲಿ ಗರ್ಭಾವಸ್ಥೆ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನುಗಳಲ್ಲಿ ಉಂಟಾಗಬಹುದಾದ ರಾಸಾಯನಿಕ ಬದಲಾವಣೆಗಳಿಂದ ಥೈರಾಯ್ಡನಂತಹ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ. ಆದರೆ ಸಕಾಲಕ್ಕೆ ಚಿಕಿತ್ಸೆ ಪಡೆದರೆ ಇಂತಹ ಶಸ್ತ್ರಚಿಕಿತ್ಸೆಗಳಿಂದ ದೂರವಿರಬಹುದಾಗಿದೆ ಎಂದು ತಿಳಿಸಿದರು ಇದೇ ವೇಳೆ ವೈದ್ಯರಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಯುಎಸ್‌ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ ಬಿ ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ವೈದ್ಯರ ತಂಡವನ್ನು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಮನೆಗಳ ಕರ ಸುಲಾತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ತಾಲೂಕ ಪ್ರಥಮ ಸ್ಥಾನ.

Spread the loveಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 15 ತಾಲೂಕಿನ ತಾಲೂಕಾ ಪಂಚಾಯಿತಿಗಳ ಪೈಕಿ ಕಾಗವಾಡ ತಾಲೂಕ ಪಂಚಾಯಿತಿ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ