Breaking News

ಸುದೀಪ್-ಪ್ರಕಾಶ್ ರೈ ಗೆ ನಟ ಚೇತನ್ ಟಾಂಗ್

Spread the love

ಬೆಂಗಳೂರು : ಬಿಜೆಪಿಗೆ ಬೆಂಬಲ ನೀಡುತ್ತಿದ್ದಂತೆ ನಟ ಪ್ರಕಾಶ್ ರೈ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದೀಗ ಇಬ್ಬರೂ ನಟರಿಗೆ ಚೇತನ್ ಅಹಿಂಸಾ ಪೋಸ್ಟ್ ಒಂದನ್ನು ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

ಬಿಜೆಪಿಗೆ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ರವರು ‘ಆಶ್ಚರ್ಯ & ಆಘಾತಕ್ಕೊಳಗಾಗಿದ್ದಾರೆ’ಇದು ಕುತೂಹಲಕಾರಿ ವಿಷಯವಾಗಿದೆ.

ಇಬ್ಬರು ಪ್ರತಿಭಾವಂತ ನಟರು – ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ – ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ನಾನು ಇಬ್ಬರ ನಿಲವುಗಳು/ಸಿದ್ಧಾಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆಗೆ ಹಿಂದುರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ ಎಂದು ಇಬ್ಬರೂ ನಟರಿಗೆ ಚೇತನ್ ಅಹಿಂಸಾ ಪೋಸ್ಟ್ ಒಂದನ್ನು ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ