Breaking News

ಗಾಂಜಾ ಮಾರಿ ಜೈಲು ಪಾಲಾದ ಗಂಡ; ಪತಿಯ ವ್ಯವಹಾರವನ್ನೇ ಮುಂದುವರೆಸಿದ್ದ ಚಾಲಾಕಿ ಪತ್ನಿ!

Spread the love

ಬೆಂಗಳೂರು: ಪತಿ ಗಾಂಜಾ ದಂಧೆಯಲ್ಲಿ ಜೈಲು ಪಾಲಾಗುತ್ತಿದ್ದಂತೆ, ಚಾಲಾಕಿ ಪತ್ನಿ ಅದೇ ವ್ಯವಹಾರವನ್ನು ನಡೆಸಿದ್ದಾಳೆ. ಸದ್ಯ ಕಲಾಸಿಪಾಳ್ಯ ಠಾಣಾ ಪೊಲೀಸರು ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ನಗ್ಮಾ(27) ಬಂಧಿತ ಮಹಿಳೆ.

ಸದ್ಯ ಪೊಲೀಸರು ಆಕೆಯಿಂದ 26 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ನಗ್ಮಾಳ ಪತಿ ಮುಜ್ಜು ಎಂಬಾತ ವಿಶಾಖಪಟ್ಟಣಂನಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ನಡೆಸುತ್ತಿದ್ದ. ಈತನನ್ನು ಕಳೆದ ತಿಂಗಳು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು. ಗಂಡ ಜೈಲಿಗೆ ಹೋಗುತ್ತಿದ್ದಂತೆ ಅದೇ ದಂಧೆಯನ್ನು ನಗ್ಮಾ ಮುಂದುವರಿಸಿದ್ದಾಳೆ.

 

ನಗ್ಮಾ, ತಾಯಿ ಹಾಗೂ ಮೂವರು ಮಕ್ಕಳೊಂದಿಗೆ ವಿಶಾಖಪಟ್ಟಣಂಗೆ ತೆರಳುತ್ತಿದ್ದಳು. ಅಲ್ಲಿ ಹೊಟೇಲ್​ನಲ್ಲಿ ರೂಂ ಮಾಡಿ, ಗಾಂಜಾ ಖರೀದಿಸಿ ಬಸ್ ಮೂಲಕ ಬೆಂಗಳೂರಿಗೆ ಹಿಂತಿರುಗುತ್ತಿದ್ದಳು. ಮಕ್ಕಳು, ಬ್ಯಾಗ್ ಎಲ್ಲ ಇದ್ದುದರಿಂದ ಪೊಲೀಸರಿಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಹೀಗಾಗಿ ಅನೇಕ ಬಾರಿ ಪೊಲೀಸರಿಂದ ಬಚಾವ್ ಆಗಿ, ಬೆಂಗಳೂರು ತಲುಪುತ್ತಿದ್ದಳು. ಬಳಿಕ ಗಾಂಜಾ ಮಾರಾಟ ಮಾಡುತ್ತಿದ್ದಳು.

ಆದರೆ ಕಳೆದ ಮಾರ್ಚ್ 20ರಂದು ನಗ್ಮಾಳ ಯೋಜನೆ ಕೈಕೊಟ್ಟಿದೆ. ವಿಶಾಖಪಟ್ಟಣದಿಂದ ಗಾಂಜಾ ತಂದು ಕಲಾಸಿಪಾಳ್ಯದ ಕಾರ್ನೇಷಲ್ ಸರ್ಕಲ್​ನಲ್ಲಿ ನಿಂತಿದ್ದಾಗ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಈ ವೇಳೆ 13 ಲಕ್ಷ ರೂ. ಮೌಲ್ಯದ 26 ಕೆಜಿ ಗಾಂಜಾ ಪತ್ತೆಯಾಗಿದೆ. ಕೂಡಲೇ ಆಕೆಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ