Breaking News

ಬಿಜೆಪಿಯ ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಹೋರಾಟ: ಮುತಾಲಿಕ್

Spread the love

ಬಾಗಲಕೋಟೆ: ‘ನನ್ನದು ಬಿಜೆಪಿ ವಿರುದ್ಧದ ಹೋರಾಟವಲ್ಲ. ಬಿಜೆಪಿಯಲ್ಲಿರುವ ಹಿಂದೂ ದ್ರೋಹಿಗಳು, ಅದರ ತತ್ವ, ಸಿದ್ಧಾಂತ ಹಾಳು ಮಾಡಿದವರ ವಿರುದ್ಧ ಹೋರಾಟ’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಕಳದಲ್ಲಿ ಗೆದ್ದರೂ ಬಿಜೆಪಿಯನ್ನೇ ಬೆಂಬಲಿಸುತ್ತೇನೆ.

ಆದರೆ ಡೋಂಗಿ ಹಿಂದುತ್ವವಾದಿಗಳಿಗೆ ಬುದ್ಧಿ ಕಲಿಸಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದರು.

‘ನನಗೆ ಬಾಗಲಕೋಟೆ ಮತ್ತು ಕಾರ್ಕಳದಿಂದ ಸ್ಪರ್ಧಿಸಲು ಬೇಡಿಕೆ ಇತ್ತು. ಕಾರ್ಕಳವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕಾರ್ಕಳದಲ್ಲಿ ನೂರಕ್ಕೆ ನೂರು ನಾನೇ ಗೆದ್ದು ಹಿಂದುತ್ವದ ಪತಾಕೆ ಹಾರಿಸುತ್ತೇನೆ’ ಎಂದು ಹೇಳಿದರು.


Spread the love

About Laxminews 24x7

Check Also

ಉದ್ಯೋಗ ಅರಿಸದೇ ಆಯ್ಕೆಯ ಸಾಮರ್ಥ್ಯ ಬೆಳಸಿಕೊಳ್ಳಿ

Spread the loveಬಾಗಲಕೋಟೆ: ಕಲಾ ಅಧ್ಯಯನದಿಂದ ಹೇರಳ ಅವಕಾಶಗಳಿವೆ. ವಿಸ್ತೃತ ಅಧ್ಯಯನ ಶೈಲಿಯಿಂದ ಉದ್ಯೋಗವನ್ನು ಅರಿಸುವ ಬದಲು ಆಯ್ಕೆಮಾಡಿಕೊಳ್ಳುವ ಸಾಮರ್ಥ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ