Breaking News

ಸುನೀಲ್‌ ಕುಮಾರ್‌ ಅವರಂತೆ ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಹೊಂದಿಲ್ಲ: ಪ್ರಮೋದ್ ಮುತಾಲಿಕ್

Spread the love

ಡುಪಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬಂದಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ಸಚಿವ ಸುನೀಲ್‌ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ. ಏನು ಆಗಿದ್ದರು, ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದರು.

 

ಸಚಿವ ಸುನೀಲ್‌ ಕುಮಾರ್ ಮಾಡಿರುವ ಆರೋಪಗಳಿಗೆ ನಗರದಲ್ಲಿ ಇಂದು ಅವರು ತಿರುಗೇಟು ನೀಡಿದ್ದಾರೆ. ನನ್ನ ಸ್ಪರ್ಧೆಯಿಂದ ಸುನೀಲ್‌ ಕುಮಾರ್ ಹತಾಶರಾಗಿದ್ದಾರೆ. ಅವರು ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮುತಾಲಿಕ್ ಹಣ ಮಾಡುವವನಲ್ಲ, ಈ ಆರೋಪ ನಿಮಗೆ ಶೋಭೆ ತರೋಲ್ಲ. ನಾನು ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದಿಲ್ಲ ಸುನೀಲ್‌ ಕುಮಾರ್ ಅವರೇ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕರ್ತರ ಓಡಾಟ ಊಟ ತಿಂಡಿ ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಕಾರ್ಕಳದ 40 ಹಳ್ಳಿ ತಲುಪಲು ನಾನೊಬ್ಬನೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಡೋಂಗಿ ಹಿಂದೂವಾದ ಭ್ರಷ್ಟಾಚಾರ ವಿರುದ್ಧ ನಾನು ಹೋರಾಡಲು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ. ಮತದ ಜೊತೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ. ನಾನು ನಿಮ್ಮ ತರ ಆಸ್ತಿ ಬ್ಯಾಂಕ್ ಬ್ಯಾಲೆನ್ಸ್ ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ನನ್ನತ್ರ ಏನೂ ಇಲ್ಲ ನಾನು ಜನರಿಂದ ಹಣ ಕೇಳುತ್ತಿದ್ದೇನೆ ಎಂದು ಹೇಳಿದರು


Spread the love

About Laxminews 24x7

Check Also

Job: ಅಗ್ನಿವೀರ ನೇಮಕಾತಿ ಆನ್‌ಲೈನ್ ನೋಂದಣಿ ಪ್ರಾರಂಭ

Spread the loveಬೆಳಗಾವಿ: ಇಲ್ಲಿನ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಫೆ.13ರಿಂದ ಏಪ್ರಿಲ್ 1ರವರೆಗೆ ಬೆಳಗಾವಿ, ಬೀದರ ಕಲಬುರಗಿ, ಕೊಪ್ಪಳ, ರಾಯಚೂರು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ